ಚಾಮರಾಜನಗರ: ರಾಜಾಸ್ಥಾನ ಮೌಂಟ್ ಅಬು ಪರ್ವತದಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸ್ಥಾನದಲ್ಲಿ ಸೆ. 24, 25, 26 ರಂದು ರಾಜಕಾರಣಿಗಳ ವೈಶ್ವಿಕ ಮಹಾಸಮ್ಮೇಳನ-2022 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ತಿಳಿಸಿದ್ದಾರೆ.
ಭಾರತ ಮತ್ತು ಅನೇಕ ದೇಶಗಳಿಂದ ಅನೇಕ ಪ್ರಭಾವಿ ಮುಖಂಡರು ಪ್ರತಿನಿಧಿಗಳಾಗಿ ಭಾಗವಹಿಸಿ ವಿಶ್ವ ಶಾಂತಿಯ ಸ್ಥಾಪನೆಯಲ್ಲಿ ಭಾರತದ ಪಾತ್ರವನ್ನು ಕುರಿತು ಚರ್ಚಿಸಲಿದ್ದಾರೆ. ಈ ಮೂರು ದಿನಗಳ ವೈಶ್ವಿಕ ಸಂಭ್ರಮಾಚರಣಯಲ್ಲಿ ಅನೇಕ ಕೇಂದ್ರ ಮತ್ತು ರಾಜ್ಯಗಳ ಸಚಿವರು ಸಂಸದರು ಶಾಸಕರು ನಗರಸಭಾ ಸದಸ್ಯರು ತಾಲ್ಲೋಕು ಜಿಲ್ಲಾ ಪಂಚಾಯತ್ ಹಾಲಿ ಹಾಗೂ ಮಾಜಿ ಸದಸ್ಯರುಗಳು ಭಾಗವಹಿಸಲ್ಲಿದ್ದಾರೆ. ನಗರದಿಂದ 10 ಜನ ಭಾಗವಹಿಸಬಹುದಾಗಿದೆ.
ಭಾಗವಹಿಸುವರು, 9141837082 , 7899820430 ನ್ನು ಸಂಪರ್ಕಿಸ ಬಹುದಾಗಿದೆ.