ಚಾಮರಾಜನಗರ: ಮಳೆಯಿಂದಾಗಿ ತಾಲೂಕಿನ ಉಮ್ಮತ್ತೂರು ದೊಡ್ಡ ಕೆರೆಗೆ ರೈತರು ಬಾಗಿನ ಅರ್ಪಿಸಿದ್ದಾರೆ.
ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭಾಗ್ಯರಾಜ್ ಈ ಭಾಗದ ರೈತರಿಗೆ ಉಮ್ಮತ್ತೂರು ದೊಡ್ಡಕೆರೆ ಜೀವನಾಡಿಯಾಗಿದೆ. ಈ ಯೋಜನೆಗಳು ಕಾರ್ಯಗತವಾಗಬೇಕಾದರೆ ಹೋರಾಟವೇ ಮುಖ್ಯ ಕಾರಣ. ರಾಜಕಾರಣಿಗಳು ರೈತರನ್ನು ಚುನಾವಣೆಯಲ್ಲಿ ಮಾತ್ರ ಬಳಸಿಕೊಳ್ಳತ್ತಾರೆ. ಆದರೆ ಚುನಾವಣೆ ನಂತರ ರೈತರ ಕಷ್ಟವನ್ನು ಕೇಳದ ಭ್ರಷ್ಟ ರಾಜಕಾರಣಿಗಳ ಗೆಲ್ಲಿಸಿ ಪ್ರಯೋಜನವೇನು? ಕೆರೆಗೆ ಹೋರಾಟ ತಂತ್ರಗಾರಿಕೆಯಲ್ಲಿ ನೀರು ತುಂಬಿಸಲು ರೈತರು ಕಾರಣಕರ್ತರಾಗಿದ್ದಾರೆ.
ರೈತ ಮುಖಂಡ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ ಹೋರಾಟ ರೈತರ ಹಕ್ಕು. ಈ ಭಾಗದಲ್ಲಿ ರೈತರು ಕೃಷಿಗೆ ನೀರಿಲ್ಲದೆ ಪಟ್ಟಣಗಳತ್ತ ವಲಸೆ ಹೋಗಿದ್ದರು. ಆದರೆ ದೊಡ್ಡ ಕೆರೆಗೆ ನೀರು ಬಂದ ಮೇಲೆ ಮತ್ತೆ ಕೃಷಿ ಅರಸಿ ಬಂದಿರುವುದು ಬಹಳ ವಿಶೇಷವಾಗಿದೆ. ಈ ಭಾಗದಲ್ಲಿ ರೈತರು ಗುಡಿ ಕೈಗಾರಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹೊನ್ನೂರು ಬಸವಣ್ಣ, ಹೆಗ್ಗವ್ವಡೀಪುರ ಮಹದೇವಸ್ವಾಮಿ, ಗುರುಪ್ರಸಾದ್, ಶೈಲಜಾ, ಗ್ರಾ ಪಂ ಅಧ್ಯಕ್ಷ ಮಹದೇವಸ್ವಾಮಿ, ಮುಖಡಹಳ್ಳಿ ಮಹದೇವಪ್ಪ, ಚುಂಗಡಿಪುರ ರಾಜು, ಹಾಲಿನ ನಾಗರಾಜ್, ಪಟೇಲ್ ಶಿವಮೂರ್ತಿ, ಉಡಿಗಲ ಗುರು, ಕುರುಬುರು ಮಂಜು, ಶಿವಸ್ವಾಮಿ, ಉಮೇಶ್, ರವಿ ಮತ್ತಿತರರು ಇದ್ದರು