News Kannada
Sunday, April 02 2023

ಚಾಮರಾಜನಗರ

ಚಾಮರಾಜನಗರ: ಮಲೆ ಮಹದೇಶ್ವರ ಸನ್ನಿಧಿಯಲ್ಲಿ ಅಭಿವೃದ್ಧಿ ಪರ್ವ – ಸಿಎಂ ಬೊಮ್ಮಾಯಿ

Development parva at Male Mahadeshwara Sannidhi: CM Bommai
Photo Credit : G Mohan

ಚಾಮರಾಜನಗರ: ಮಲೆ ಮಹದೇಶ್ವರ ಸನ್ನಿಧಿಯಲ್ಲಿ ಅಭಿವೃದ್ಧಿ ಪರ್ವವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು 108 ಅಡಿ ಎತ್ತರದ ಮಲೆ ಮಹದೇಶ್ವರ ಪ್ರತಿಮೆ ಅನಾವರಣಗೊಳಿಸಿ, ಬೆಳ್ಳಿ ರಥ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಮಲೆ ಮಹದೇಶ್ವರನ ಪವಾಡಗಳು ಜನರ ಮನದಾಳದಲ್ಲಿವೆ. ದಕ್ಷಿಣ ಕರ್ನಾಟಕದಲ್ಲಿ ಜಾತಿ, ಮತ, ಪಂಥಗಳ ಭೇಧವಿಲ್ಲದೇ ಮಲೆ ಮಹದೇಶ್ವರನಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.

ಸಮಗ್ರ ವ್ಯವಸ್ಥೆ: ಪ್ರತಿ ವರ್ಷ ಸಾವಿರಾರು ಜನ . ಕಾಲ್ನಡಿಗೆಯಲ್ಲಿ ಬಂದು ವಿಶೇಷ ಪೂಜೆ ಮಾಡಿ ದರ್ಶನ ಪಡೆಯುತ್ತಾರೆ. ಮಹದೇಶ್ವರ ಕ್ಷೇತ್ರದ.ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗಿದೆ. ನೂರಾರು ಕೋಟಿ. ರೂ.ಗಳ ಅಭಿವೃದ್ದಿ ಕೆಲಸ ವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಬರುವ ಜನರಿಗೆ ಊಟ, ವಸತಿ, ದರ್ಶನದ ವ್ಯವಸ್ಥೆ, ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನೆನೆಗುದಿಗೆ ಬಿದ್ದಿದ್ದ ಹಲವಾರು ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ ಎಂದರು. ಶಾಸಕ ಮಹೇಶ್ ಅವರೂ ಕೂಡ ಪೂರಕವಾಗಿ ಕೆಲಸ ಮಾಡಿದ್ದಾರೆ.

ಕ್ಷೇತ್ರದ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸ ಈ ಪ್ರತಿಮೆ ಮಾಡಿದೆ: ಇಷ್ಟು ದೊಡ್ಡ ಪ್ರತಿಮೆ ಮನುಷ್ಯನ ಭಾವನೆಗಳು ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ದೇವಸ್ಥಾನಕ್ಕೆ ಹಿದಾಗ ಶಾಂತಿ ಸಮಾಧಾನ ನೆಲೆಸುತ್ತದೆ. ಈ ಪ್ರದೇಶದಲ್ಲಿ ಈ ಕ್ಷೇತ್ರದ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸ ಈ ಪ್ರತಿಮೆ ಮಾಡಿದೆ. ಜೀವಕಳೆ ಇರುವ ಪ್ರತಿಮೆ ನಿರ್ಮಾಣವಾಗಿದೆ.ಕ್ಷೇತ್ರಕ್ಕೆ ಬರುವವರನ್ನು ಈ ಪ್ರತಿಮೆ ಆಕರ್ಷಿಸುತ್ತದೆ. ಸಮಸ್ತ ಕನ್ನಡಿಗರ ಬದುಕು ಬಂಗಾರವಾಗಬೇಕೆಂಬ ಇಚ್ಛೆ ನನ್ನದು ಎಂದರು.

ಶಿಕಾರಿಪುರದಲ್ಲಿ 68 ಅಡಿ ಅಕ್ಕಮಹಾದೇವಿ ಪ್ರತಿಮೆ ಉದ್ಘಾಟಿಸುವ ಭಾಗ್ಯ ನನ್ನದಾಯಿತು. ಥೀಮ್ ಪಾರ್ಕ್ ಕೂಡ ಆಗಿದೆ. ಇಲ್ಲಿ ಮಾಡಪ್ಪನ ದರ್ಶನ ಹಾಗೂ ಪ್ರತಿಮೆ ಅನಾವರಣದ ಭಾಗ್ಯ ದೊರೆತಿದೆ. ಇಡೀ ನಾಡಿನ ದಾರ್ಶನಿಕರಿಂದ ನಾವು ಪ್ರೇರಣೆ ಪಡೆಯಬೇಕು. ಅದರಂತೆ ನಡೆಯಬೇಕು.

ಮಲೆ ಮಹದೇಶ್ವರಕ್ಕೆ ತನ್ನದೇ ಆದ ಇತಿಹಾಸ ಇದೆ. ಚಾಮರಾಜನಗರಕ್ಕೆ ಸೋಮಣ್ಣನವರ ಸಮರ್ಥ ಉಸ್ತುವಾರಿ ಇದೆ. ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಶ್ರಮ.

ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಬದುಕಿನ ಉದ್ದಕ್ಕೂ ಜನಸೇವೆ ಮಾಡಬೇಕು. ಕಾಯಕ ನಿಷ್ಠೆ ಇರಬೇಕು. ಮಾದೇಶ್ವರನ ಪ್ರರಿಮೆ ಕಾಲಾತೀತವಾದುದು. ಇದರ ಸಲುವಾಗಿ ಕೆಲಸ ಮಾಡಿರುವವರು ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ ಎಂದರು.

ಸಮಸ್ಯೆಗಳಿಗೆ ಪರಿಹಾರ: ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣ ಮಾಡಲಾಗುವುದು. ಈ ಭಾಗದ ಸಮಸ್ಯೆಗಳ ಬಗ್ಗೆ ವರದಿ ಕಳುಹಿಸಲು ಸೂಚಿಸಿದ್ದು, ವರದಿ ಕಳುಹಿಸಲಾಗಿದೆ. ಎರಡು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು. ಪಿ.ಹೆಚ್.ಸಿ.ಕೇಂದ್ರ ಕಾಮಗಾರಿ ಪ್ರಾರಂಭವಾಗುತ್ತಿದೆ. ಇಲ್ಲಿನ ರೈತರ ಭೂಮಿಯ ಸಮಸ್ಯೆ ಕೂಡ ಬಗೆಹರಿಸಲಾಗುತ್ತಿದೆ ಎಂದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಬೃಹನ್ಮಠಾಧೀಶ್ವರ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಚಿವ ಎಸ್.ಟಿ. ಸೋಮಶೇಖರ್ , ಶಾಸಕ ಎನ್ ಮಹೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

See also  ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ; ಸಚಿವ ಅಶ್ವತ್ಥನಾರಾಯಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು