ಚಾಮರಾಜನಗರ: ಸೋಮಣ್ಣ ಅವರು ಬೆಂಗಳೂರು ಬಿಟ್ಟು ವರುಣಾಕ್ಕೆ ಬರಲು ಕಾರಣವೇನು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಅಭ್ಯರ್ಥಿ ಸೋಮಣ್ಣ ಟೀಕಿಸಿದ್ದಾರೆ.
ವರುಣಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಂಹ, ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿ ಸೋಮಣ್ಣ ಅವರನ್ನು ಹೈಕಮಾಂಡ್ ಕಣಕ್ಕಿಳಿಸಿದೆ.
ಇಂದಿರಾಗಾಂಧಿ ಮತ್ತು ಚಿಕ್ಕಮಗಳೂರಿನ ನಡುವಣ ಸಂಬಂಧವೇನು? ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ, ರಾಹುಲ್ ಗಾಂಧಿ ವಯನಾಡ್ ನಲ್ಲಿ ಸ್ಪರ್ಧಿಸಿದ್ದರು. ಆದರೆ ಸೋಮಣ್ಣ ವರುಣಾದಲ್ಲಿ ಸ್ಪರ್ಧಿಸಿದರೆ ಅದು ತಪ್ಪೇ ಎಂದು ಪ್ರಶ್ನಿಸಿದರು.
ಸೋಮಣ್ಣ ಮಾತನಾಡಿ, ಸಿದ್ದರಾಮಯ್ಯ ಅವರ ದಲಿತ ವಿರೋಧಿ ಹೇಳಿಕೆ ಅವರ ಸೋಲಿಗೆ ಕಾರಣವಾಗಲಿದೆ. ಅಲ್ಲದೆ ಅವರು ಮೈಸೂರು ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದರು.
ವರುಣಾ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದ ಸೋಮಣ್ಣ, ಒಂದೇ ದಿನದಲ್ಲಿ ವರುಣಾ ಕ್ಷೇತ್ರದ 24 ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಈ ಬಾರಿ ವರುಣವನ್ನು ರಾಜ್ಯದ ನಂಬರ್ ಒನ್ ತಾಲ್ಲೂಕನ್ನಾಗಿ ಮಾಡುವ ಭರವಸೆ ನೀಡಿದರು. ವರುಣಾ ಮತ್ತು ಚಾಮರಾಜನಗರ ಎರಡರಲ್ಲೂ ಗೆಲ್ಲುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ದಲಿತ ವಿರೋಧಿಯಾಗಿದ್ದು, ದಲಿತರನ್ನು ತುಳಿದು ಆಳಿದ್ದಾರೆ. ತುಮಕೂರಿನಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದರು ಅವರು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆಗೆ ಬಯಸಿದ್ದರು , ಆದರೆ ಆಂತರಿಕ ಸಮೀಕ್ಷೆಯ ಬಳಿಕ ಸೋಲಿನ ಭಯದಿಂದ ವರುಣಾದಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡರು ಎಂದರು.
ಬಿಜೆಪಿ ಈ ಬಾರಿ 63 ಲಿಂಗಾಯಿತರಿಗೆ ಟಿಕೆಟ್ ನೀಡಿದೆ. ಹಾಗಿದ್ದಲ್ಲಿ ನಿಜವಾದ ಲಿಂಗಾಯತ ವಿರೋಧಿ ಯಾರು ಎಂದು ಪ್ರಶ್ನಿಸಿದರು.