ಚಾಮರಾಜನಗರ: ಶಿವಮೊಗ್ಗ ಗಲಾಟೆ ವಿಚಾರವಾಗಿ ಚಾಮರಾಜನಗರದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈದ್ ಮಿಲಾದ್ ಮೆರವಣಿಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಔರಂಗಜೇಬ್‌ನ ಖಡ್ಗ ಮೆರವಣಿಗೆ ಮಾಡುವ ಜೊತೆಗೆ ಆ ಖಡ್ಗದ ತುದಿಗೆ ರಕ್ತದ ಬಣ್ಣ ಹಾಕಿದ್ದಾರೆ. ಇದು ರಾಜ್ಯವೇ ಬೆಚ್ಚಿಬೀಳುವಂತ ಘಟನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದಾರೆ ಎನ್ನುವ ಮಾಹಿತಿ ಇದೆ. ಮುಸಲ್ಮಾನ ಸಮಾಜದ ಮಾನಸಿಕತೆ ಏನು, ಅವರು ಏನು ಮಾಡಲು ಹೊರಟಿದ್ದಾರೆ. ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಈದ್ ಮಿಲಾದ್ ದಿನ ಇಡೀ ಶಿವಮೊಗ್ಗವನ್ನು ಹಸಿರುಕರಣ ಮಾಡುವುದಲ್ಲದೆ ಅಖಂಡ ಸಾಮ್ರಾಜ್ಯ ಭಾರತವನ್ನು ಆಳಿದ ದೊರೆ ಔರಂಗಜೇಬ್ ಎಂದು ಬರೆದಿದ್ದಾರೆ ಟಿಪ್ಪು ಮತ್ತು ಔರಂಗಜೇಬನ ಫೋಟೋ ಹಾಕಿದ್ದಾರೆ ಹಾಗಾದ್ರೆ ಇವರ ಆದರ್ಶ ಪುರುಷ ಯಾರು? ಹಿಂದೂಗಳ ಮರಣಹೋಮ ಮಾಡಿದವರನ್ನ ಪ್ರದರ್ಶನ ಮಾಡುವ ಕೆಲಸ ಮುಸ್ಲಿಮರು ಮಾಡುತ್ತಿದ್ದಾರೆ ಇದಕ್ಕೆಲ್ಲಾ ಸಿದ್ದರಾಮಯ್ಯ ಅವರ ಕುಮ್ಮಕ್ಕಿದೆ ಎಂದು ಆರೋಪ ಮಾಡಿದರು.