ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕಿನ ಭೀಮನಭೀಡು ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಸರ್ವೇ ನಂಬರ್ 144 ಮತ್ತು 145 ರಲ್ಲಿ ಅನಧಿಕೃತ ರೆಸಾರ್ಟ್ ನಿರ್ಮಾಣಕ್ಕೆ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಮೇರೆಗೆ ಶೀಘ್ರದಲ್ಲೇ ಒತ್ತುವರಿಯಾಗಿರುವ ಸರ್ಕಾರಿ ಜಮೀನು ಮತ್ತು ಕೆರೆ ಜಾಗವನ್ನ 10 ದಿನಗಳ ಒಳಗೆ ತೆರವುಗೊಳಿಸಿ ಛಾಯಾಚಿತ್ರ ಸಾಕ್ಷ್ಯ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಹೈಕೋರ್ಟ್ ಗಡುವು ನೀಡಿದೆ.
ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮಪಂಚಾಯತಿ ವ್ಯಾಪ್ತಿಗೆ ಸೇರಿದ ಸರ್ವೇ ನಂಬರ್ 144 ಮತ್ತು 145 ರಲ್ಲಿ ಸರ್ಕಾರಿ ಜಾಗವನ್ನ ಒತ್ತುವರಿ ಮಾಡುವ ಮೂಲಕ ಅನಧಿಕೃತವಾಗಿ ರೆಸಾರ್ಟ್ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಕೂಡಲೇ ಅಧಿಕಾರಿಗಳು ಒತ್ತುವರಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದು ಕಟ್ಟಡವನ್ನ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದೆ.
ಭೀಮನಭೀಡು ಗ್ರಾಮಪಂಚಾಯತಿ ವ್ಯಾಪ್ತಿಗೆ ಸೇರಿದ ಈ ಸ್ಥಳದಲ್ಲಿ ಈಗಾಗಲೇ ರೆಸಾರ್ಟ್ ಕಟ್ಟಡ ನಿರ್ಮಾಣವಾಗಿದ್ದು ಗ್ರಾಮಪಂಚಾಯತಿಯಿಂದ ಯಾವುದೇ ಅನುಮತಿ ಪಡೆದಿಲ್ಲ ಎನ್ನಲಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾ ಕಂದಾಯ ಇಲಾಖೆಗೆ 10 ದಿನಗಳ ಗಡುವು ನೀಡಿರುವ ಹೈ ಕೋರ್ಟ್ ಹತ್ತು ದಿನಗಳ ಗಡುವು ನೀಡಿದ್ದು ತೆರವು ಕಾರ್ಯದ ಸಾಕ್ಷ್ಯ ಚಿತ್ರಗಳನ್ನ ಒದಗಿಸಬೇಕು ಎಂದು ಆದೇಶಿಸಿದೆ ಹೈಕೋರ್ಟ್ ಸೂಚನೆಯಂತೆ ಅಕ್ರಮ ತೆರವಿಗೆ ಅಧಿಕಾರಿಗಳು ಮುಂದಾಗಬೇಕಿದೆ.