News Kannada
Friday, March 01 2024
ಮೈಸೂರು

ಅ.15ರಂದು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ

CM to inaugurate Dasara cultural programmes on Oct 15
Photo Credit : News Kannada

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸದ ಸಾಂಸ್ಕೃತಿಕ ಉಪಸಮಿತಿಯ ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 2023ರ ಅಕ್ಟೋಬರ್ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

ಅರಮನೆಯ ಆವರಣದಲ್ಲಿರುವ ಮುಂಭಾಗದ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಸಚಿವರು, ಸ್ಥಳೀಯ ಶಾಸಕರುಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಸಮಾರಂಭ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

ದಸರಾ ಮಹೋತ್ಸವ ಅಂಗವಗಿ ಒಟ್ಟು 9 ದಿನಗಳ ಕಾಲ ದಸರಾ ಸಾಂಸ್ಕೃತಿಕ ಉಪಸಮಿತಿಗೆ ಸ್ವೀಕೃತವಾಗಿರುವ ಅರ್ಜಿಗಳನ್ನು ಪರಿಶೀಲಿಸಿ ವಿವಿಧ ಕಲಾಪ್ರಕಾರ ಉತ್ತಮ ತಂಡಗಳನ್ನು ಆಯ್ಕೆಮಾಡಿ ಜಗನ್ಮೋಹನ ಅರಮನೆ, ಕರ್ನಾಟಕ ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ ಸಂಗೀತಾ ಸಭಾ, ಚಿಕ್ಕಗಡಿಯಾರ ಮತ್ತು ನಂಜನಗೂಡಿನಲ್ಲಿ ಕಲಾತಂಡಗಳಿ0ದ ಪ್ರದರ್ಶನವನ್ನು ಏರ್ಪಡಿಸಲಾಗುವುದು.

ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಪ್ರಾದಾಯಿಕ ಗೀತೆಗಳು, ತತ್ವಪದಗಳು, ಹರಿಕಥೆ, ಜನಪದ ಗಾಯನ, ವಾದ್ಯ, ಸೂತ್ರ ಸಲಾಕೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಿಗದಿಪಡಿಸಿ ಪ್ರಸ್ತುತಪಡಿಸಲಾಗವುದು.

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ರಂಗಗೀತೆಗಳ ಕಾರ್ಯಕ್ರಮಗಳು, ಆಧುನಿಕ ನಾಟಕಗಳು, ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರುಗಳಿಂದ ಅಕ್ಟೋಬರ್ 15 ರಿಂದ 23ರವರೆಗೆ ಪುರಭವನ, ಕಿರುರಂಗಮ0ದಿರ, ನಟನ ರಂಗಮ0ದಿರ ಹಾಗೂ ರಮಾಗೋವಿಂದ ರಂಗಮ0ದಿರದಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲಾಗುವುದು.

ಅರಮನೆ ವೇದಿಕೆಯಲ್ಲಿ ನಾದಸ್ವರ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ ಪ್ರತಿ ಕಾರ್ಯಕ್ರಮಕ್ಕೆ 45 ನಿಮಿಷಗಳ ಸಮಯಾವಕಾಶ ನಿಗದಿಪಡಿಸಿ ಸ್ಯಾಕ್ಸೋಫೋನ್ ವಾದನ, ವಯೋಲಿನ್ ವಾದನ, ಒಡೆಯರ್ ಕೃತಿಗಳ ಕುರಿತ ನೃತ್ಯರೂಪಕ, ಭರತನಾಟ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಅಕ್ಟೋಬರ್ 21 ರಂದು ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಏರ್ಪಡಿಸಲಾಗುವುದು.

ಮೈಸೂರಿನ ವಿವಿಧ ಪ್ರದೇಶಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ವಿವಿಧ ಕಲಾತಂಡಗಳಿ0ದ ಸುಗಮ ಸಂಗೀತ, ವಾದ್ಯ ಸಂಗೀತ, ಭಕ್ತಿಗೀತೆಗಳು, ಭಾವಗೀತೆಗಳು, ಸಾಂಪ್ರದಾಯಿಕ ಗೀತೆಗಳು ಸೇರಿದಂತೆ ಇತರೆ ಗಾಯನ ಕಾರ್ಯಕ್ರಮಗಳನ್ನು ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಸಂಚಾರಿ ವಾಹನದಲ್ಲಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುತ್ತದೆ.

ಮೈಸೂರು ದಸರಾ ಮಹೋತ್ಸದ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯ ತೋಟಗಾರಿಕಾ ವಿಭಾಗವು 18ನೇ ವರ್ಷದ ದಸರಾ ಫಲಪುಷ್ಪ ಪ್ರದರ್ಶನವನ್ನು ಕುಕ್ಕರಹಳ್ಳಿ ಕೆರೆಯ ಪೂರ್ವ ಹಾಗೂ ಪಶ್ಚಿಮ ದಂಡೆಯಲ್ಲಿ ಏರ್ಪಡಿಸಲಾಗಿದ್ದು, ದಸರಾ ಫಲಪುಷ್ಪ ಪ್ರದರ್ಶನವನ್ನು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು 2023ರ ಅಕ್ಟೋಬರ್ 13ರಂದು ಉದ್ಘಾಟಿಸಲಿದ್ದಾರೆ.

ಪುಷ್ಪ ಪ್ರದರ್ಶನವು 2023ರ ಅಕ್ಟೋಬರ್ 24ರ ವರೆಗೆ ನಡೆಯಲಿದ್ದು, ಪ್ರತಿ ದಿನವೂ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ ಎಂದು ತೋಟಗಾರಿಗೆ ವಿಭಾಗದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮೈಸೂರು ಅರಮನೆ ಸಿಂಹಾಸನ ವೀಕ್ಷಣೆಗೆ ಅವಕಾಶ: ನವರಾತ್ರಿ ಸಂದರ್ಭದಲ್ಲಿ ಮಾತ್ರ ನೋಡಸಿಗುವ ರತ್ನ ಖಚಿತ ಸಿಂಹಾಸನ ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಮೈಸೂರು ಅರಮನೆಗೆ ಆಗಮಿಸುತ್ತಾರೆ. ಇದೀಗ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಸಿಂಹಾಸನ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ ಫೋಟೋ ವಿಡಿಯೋ ತೆಗೆಯುವುದನ್ನು ನಿರ್ಬಂಧಿಸಲಾಗಿದೆ.

ಅ.9ರಂದು ಅರಮನೆಯ ಖಾಸಗಿ ದರ್ಬಾರ್ ಹಾಲ್‌ನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸಿಂಹಾಸನ ಜೋಡಣೆ ಕಾರ್ಯ ನಡೆದಿದೆ. ಸಿಂಹಾಸನಕ್ಕೆ ಪ್ರತ್ಯೇಕ ಪರದೆ ಅಳವಡಿಸಿ ಮುಚ್ಚಲಾಗಿದ್ದು, ಪರದೆಯ ಒಳ ಹೋಗಿ ಸಿಂಹಾಸನ ನೋಡಲು ಪ್ರವಾಸಿಗರಿಗೆ 50 ರೂಪಾಯಿ ಟಿಕೆಟ್ ನಿಗದಿಪಡಿಸಲಾಗಿದೆ. ಅರಮನೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಇದ್ದು, ದರ್ಬಾರ್ ಹಾಲ್‌ನಲ್ಲಿ ಅರಮನೆ ಆಡಳಿತ ಮಂಡಳಿ ಭದ್ರತೆಗೆ ಹಾಕಿರುವ ಸಿಸಿಟಿವಿಯನ್ನೂ ಮುಚ್ಚಲಾಗಿದೆ. ಶನಿವಾರದಿಂದ ನ.7ರವರೆಗೆ ಸಿಂಹಾಸನವನ್ನು ಪ್ರವಾಸಿಗರು ವೀಕ್ಷಿಸಲು ಅವಕಾಶವಿದೆ. ಇದಕ್ಕಾಗಿ ದರ್ಬಾರ್ ಹಾಲ್‌ನಲ್ಲಿ ರಾಜವಂಶಸ್ಥರ ಕಡೆಯಿಂದ ವಿಶೇಷ ಕೌಂಟರ್ ಕೂಡಾ ತೆರೆಯಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು