ಹಾಸನ: ಏಪ್ರಿಲ್ 22 ರಿಂದ ಮೇ 18ರ ವರೆಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮವನ್ನು ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ 16 ಸಾವಿರ ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯುತ್ತಿದ್ದು, 1236 ಪುನರಾವರ್ತನೆಯ ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳು 513 ವಿದ್ಯಾರ್ಥಿಗಳು ಸೇರಿ ಒಟ್ಟು 17,839 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಹಾಸನದ 31 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದು, ಸರಕಾರದ ಆದೇಶದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಜಿಪಿಎಸ್ ಅಳವಡಿಸಿ ಪೊಲೀಸ್ ಶಸ್ತ್ರ ಸಿಬ್ಬಂದಿಗಳೊಂದಿಗೆ ಭದ್ರತೆ ಮೂಲಕ ಪ್ರಶ್ನಾ ಪತ್ರಿಕೆಗಳನ್ನು ಕಳುಹಿಸಲಾಗುವುದು.
ಪರೀಕ್ಷೆ ಬರೆಯುವ ಕೇಂದ್ರದ ಸುತ್ತ 200 ಮೀಟರ್ ಅಂತರದಲ್ಲಿ 144 ಸೆಕ್ಷೆನ್ ಹಾಕಲಾಗಿ ಪೊಲೀಸ್ ಬಂದ್ ಬಸ್ತ್ ಮಾಡಲಾಗಿದೆ ಎಂದರು. ಇನ್ನು ಪರೀಕ್ಷಾ ಕೇಂದ್ರದ ಕಾಲೇಜಿನ ಶಿಕ್ಷಕರು ಬೇರೆ ಪರೀಕ್ಷಾ ಕೇಂದ್ರದಲ್ಲಿ ಹೋಗಲು ಮತ್ತು ಅಲ್ಲಿನ ಶಿಕ್ಷಕರು ಇನ್ನೊಂದು ಕೇಂದ್ರದಲ್ಲಿ ಇರುತ್ತಾರೆ. ಮುಖ್ಯ ಅಧೀಕ್ಷಕರು ಒಳಪಡಿಸಿ ಯಾರು ಮೊಬೈಲನ್ನು ಪರೀಕ್ಷಾ ಕೇಂದ್ರದಲ್ಲಿ ಕೊಂಡೂಯ್ಯುವಂತಿಲ್ಲ ಎಂದು ಹೇಳಿದರು.