News Kannada
Saturday, February 24 2024
ಹಾಸನ

ಹೆಬ್ಬಾಳಿನಲ್ಲಿ ರಂಜಿಸಿದ ಜೋಡಿ ಎತ್ತುಗಾಡಿ ಓಟ

Photo Credit : News Kannada

ಬೇಲೂರು : ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಚನ್ನಬಸವೇಶ್ವರ ಯುವಕ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಗಮನಸೆಳೆಯಿತು.

ಮೊದಲ ಬಾರಿಗೆ ಆಯೋಜಿಸಿದ್ದ ಜೋಡಿ ಎತ್ತಿನಗಾಡಿ ಸ್ಪರ್ಧೆಗೆ ಪುಷ್ಪಗಿರಿ ‌ಮಹಾಸಂಸ್ಥಾನ ಶ್ರೀ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸ್ವತಃ ಜೋಡಿ ಎತ್ತಿನಗಾಡಿಯನ್ನು ಓಡಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪುಷ್ಪಗಿರಿ ಶ್ರೀಗಳು,ಇತ್ತೀಚಿನ ದಿನದಲ್ಲಿ ದೇಶಿಯ ಜಾನುವಾರು ತಳಿ ಇಳಿ ಮುಖವಾಗುತ್ತಿದೆ. ಇದಕ್ಕೆ ಕಾರಣ ಬಹುತೇಕ ಕೃಷಿಕರು ಯಂತ್ರಗಳನ್ನು ನಂಬಿಕೊಂಡು ಜಾನುವಾರು ತಳಿ ನಾಶದ ಸ್ಥಿತಿಯನ್ನು ತಲುಪಿದೆ. ವಿಶೇಷವಾಗಿ ಬಹುತೇಕ ಹೈನುಗಾರಿಕೆಯಲ್ಲಿ ಸಿಂಧಿ, ಜರ್ಸಿ ಹಸುಗಳನ್ನು ಅವಲಂಬಿಸಿದ ಕಾರಣದಿಂದ ದೇಶಿಯ ಜಾನುವಾರು ತಳಿ ಅವನತಿಯತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಪುಷ್ಪಗಿರಿ ಮಹಾಸಂಸ್ಥಾನದಲ್ಲಿ ದೇಶಿಯ ಜಾನುವಾರು ತಳಿ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಉಳಿಸುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಗೋಶಾಲೆಯನ್ನು ಆರಂಭಿಸಲಾಗುತ್ತದೆ. ಅಲ್ಲದೇ ದೇಶಿಯ ಜಾನುವಾರು ತಳಿಗಳ ಸಂರಕ್ಷಣೆಯಿಂದ ಪರಿಸರಕ್ಕೆ ಪೂರಕವಾಗುತ್ತದೆ.

ಹೆಬ್ಬಾಳು ಗ್ರಾಮ ಐತಿಹಾಸಿಕವಾಗಿ ಹಿನ್ನೆಲೆ ಪಡೆದ ಗ್ರಾಮ, ಹೊಯ್ಸಳ ಕಾಲದಲ್ಲಿ ವೇಲಾಪುರಿ ಮತ್ತು ದ್ವಾರಸಮುದ್ರಕ್ಕೆ ಹೆಬ್ಬಾಗಿಲು ಎಂದೇ ಖ್ಯಾತಿ ಮೂಲಕ ಹೆಸರು ಪಡೆದ ಗ್ರಾಮ ಐತಿಹಾಸಿಕವಾಗಿ ಬೆಳೆಯಲು ಇಲ್ಲಿನ ಸಾರ್ವಜನಿಕರು ಗಮನ ನೀಡಬೇಕು. ಹಾಗೆಯೇ ಯುವಕ ಸಂಘದವರು ಕೇವಲ ಜೋಡಿ ಎತ್ತಿನ ಸ್ಪರ್ಧೆಗೆ ಮಾತ್ರ ಸೀಮಿತವಾಗದೆ ಗ್ರಾಮದ ಎಲ್ಲಾ ಸೇವಾ ಕಾರ್ಯದಲ್ಲಿ ಮುಂದಾಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಪಿಐ ಯೋಗೀಶ್, ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು. ಸದಸ್ಯ ಗಿರೀಶ್, ಹಾಲಪ್ಪ, ಗ್ರಾಮಸ್ಥರಾದ ಚಂದ್ರಶೇಖರಯ್ಯ, ವಿಘ್ನೇಶಯ್ಯ, ನಂಜೇಗೌಡ, ಬಸವೇಗೌಡ, ಪಶು ವೈದ್ಯ ಸೋಮಶೇಖರ್, ಎಪಿಎಂಸಿ ನಾಮಿನಿ ಸದಸ್ಯ ಹೆಬ್ಬಾಳು ಉಮಾಶಂಕರ್, ದರ್ಶನ್, ಸಚ್ಚಿನ್, ಕುಮಾರ್, ತೀರ್ಥಕುಮಾರ್, ಹೆಬ್ಬಾಳು ಹಾಲಿನ ಡೈರಿ ಅಧ್ಯಕ್ಷ ರೇಣುಕಯ್ಯ ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು