ಹಾಸನ: ಡಿಸೆಂಬರ್ 6ರಂದು ಕಾಲೇಜಿಗೆ ತೆರಳುವ ವೇಳೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿಯ ಯುವಕ ನಾರಾಯಣಗೌಡ (17) ಅವರಿಗೆ ಅಪಘಾತವಾಗಿ ತಲೆಗೆ ಗಂಭೀರವಾಗಿ ಗಾಯವಾದ ಹಿನ್ನೆಲೆ ಮೆದುಳು ನಿಷ್ಕ್ರಿಯಗೊಂಡಿತ್ತು.ಈ ಹಿನ್ನೆಲೆ ವೈದ್ಯರು ಅಂಗಾಂಗ ದಾನದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದ್ದರು.
ಹೀಗಾಗಿ ನಾರಾಯಣ ಗೌಡನ ಪೋಷಕರು ಒಳ್ಳೆಯ ಕೆಲಸಕ್ಕೆ ಹಿಂದೆ ಮುಂದೆ ಯೋಚಿಸದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇತ್ತೀಚೆಗೆ ಡಾ.ಪುನೀತ್ ಸಾವಿನ ನಂತರ ಅಂಗಾಗ ದಾನ ಹೆಚ್ಚಾಗುತ್ತಿದ್ದು, ಇದರಿಂದ ಹಲವು ಕುಟುಂಬಗಳು ಪ್ರೇರಣೆಗೊಂಡು ಅಂಗಾಗ ದಾನ ಮಾಡುತ್ತಿವೆ.
ಡಿ.10 ಮಧ್ಯಾಹ್ನದ ವೇಳೆಗೆ ಅಂಗಂಗ ದಾನ ಪ್ರಕ್ರಿಯೆ ಸಂಪೂರ್ಣ ಪೂರೈಸಿ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.