News Kannada
Wednesday, February 08 2023

ಹಾಸನ

ಹಾಸನ: ಆನೆಯೊಂದು ನೋವಿನಿಂದ ನರಳುತ್ತಾ ಸಾಗುತ್ತಿರುವ ವೀಡಿಯೋ ವೈರಲ್

A video of an elephant writhing in pain has gone viral on social media.
Photo Credit : By Author

ಹಾಸನ: ಸಕಲೇಶಪುರದ ಉದೇವಾರ ಗ್ರಾಮದಲ್ಲಿ ಕಾಡಾನೆಯೊಂದು ತೀವ್ರ ಗಾಯಗೊಂಡಿದ್ದು ಸೊಂಡಿಲು, ಮುಖದ ಭಾಗಕ್ಕೆ ಗಾಯವಾಗಿ ರಕ್ತ ಸುರಿಯುತ್ತಿರುವ ಸ್ಥಿತಿಯಲ್ಲಿ ಈ ಕಾಡಾನೆ ನಾಡಿಗೆ ಬಂದಿದೆ ಎನ್ನಲಾಗಿದೆ.

ಕೆಲವೊಮ್ಮೆ ಕಾಲು ಎತ್ತಿಡಲಿಕ್ಕೂ ಕಷ್ಟಪಡುವಂತೆ ಕಾಣುತ್ತಿದ್ದ ಆನೆಯ ನಡಿಗೆ ಮರುಕ ಹುಟ್ಟಿಸುವಂತಿತ್ತು. ಸಾಮಾನ್ಯವಾಗಿ ಆನೆ ಕಂಡರೆ ಮಾರು ದೂರ ಓಡುವ ಜನರ ಈ ಆನೆಯ ಮುಂದೆಯೇ ಪರೇಡ್ ಮಾಡಿದರು ಮತ್ತು ವಿಡಿಯೊಗಳನ್ನು ತೆಗೆದರು. ಜತೆಗೆ ಕಾಡಾನೆ ಸ್ಥಿತಿಗೆ ಮರುಗಿದರು.

ಘಟನೆ ತಿಳಿಯುತ್ತಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿದ್ದಾರೆ. ಇನ್ನು ಅದನ್ನು ಹಿಡಿದು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಆನೆ ಯಾವುದೋ ಕಾಡಾನೆ ಜತೆ ಕಾದಾಟವಾಡಿವಾಡಿ ಗಾಯಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಗಾಯಗೊಂಡಿರುವ ಕಾಡಾನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆ ನೀಡುತಿದ್ದು ಈ ಕುರಿತು ವಾಹನದ ಮೂಲಕ ಅನೌನ್ಸ್ ಮಾಡಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತಿದ್ದಾರೆ. ಸಾಮಾನ್ಯವಾಗಿ ಕಾಡಾನೆಗಳು ಮನುಷ್ಯರನ್ನು ಕಂಡರೆ ಧಾಳಿ ಮಾಡುತ್ತವೆ. ಆದರೆ ಈ ಆನೆ ಸಾಧುವಿನಂತೆ ವರ್ತಿಸುತ್ತಿರುವುದು ಆಶ್ಚರ್ಯ ತಂದಿದೆ.

See also  ಹಾಸನ: ಅಧಿದೇವತೆ ಹಾಸನಾಂಭೆ ದರ್ಶನ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು