ಹಾಸನ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ದುರಾಗಳಿತ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಪ್ರಜಾದ್ವನಿ ಯಾತ್ರೆ, ಹಾಸನದಲ್ಲೂ ಸಹ ಯಶಸ್ವಿಯಾಗಲಿದೆ ಎಂದು ಸಂಸದ ಡಿ.ಕೆ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಜಾ ಧ್ವನಿಯಾತ್ರೆಯೂ ರಾಜ್ಯ ದ ಹಲವು ಜಿಲ್ಲೆಗೆ ಸಂಚರಿಸಿದ್ದು ಇಂದು ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಯಶಸ್ವಿಯಾಗಿದೆ. ಜನವರಿ ೨೧ರಂದು ನಗರದಲ್ಲಿ ನಡೆಯುವ ಪ್ರಜಾಧ್ವನಿ ಕಾರ್ಯಕ್ರಮ ದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಾರ್ವಜನಿಕರು ಹಾಗೂ ಕಾರ್ಯ ಕರ್ತರು ಭಾಗವಹಿಸುವ ನಿರೀಕ್ಷೆ ಇದೆ.
ರಾಜ್ಯ ನಾಯಕರದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಧ್ರುವ ನಾರಾಯಣ್, ಎಂ ಬಿ ಪಾಟೀ ಲ್, ದೇಶಪಾಂಡೆ ,ರೆಹಮಾನ್, ಹರಿಪ್ರ ಸಾದ್ ಸೇರಿದಂತೆ ಹಲವು ನಾಯ ಕರು ಭಾಗವಹಿಸಲಿದ್ದಾರೆ ಎಂದರು .
ಕಾಂಗ್ರೆಸ್ ಪಕ್ಷ ಈಗಾಗಲೇ ಜನಪರ ಆಡಳಿತ ನೀಡುವ ಉದ್ದೇ ಶದಿಂದ ಉತ್ತಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಪ್ರತಿ ಮನೆಗೆ ೨೦೦ ಯುನಿಟ್ ಉಚಿತ ವಿದ್ಯುತ್, ೨೦೦೦ ಪ್ರತಿ ತಿಂಗಳಂತೆ ೨೪,೦೦೦ ವಾರ್ಷಿಕ ಸಹಾಯಧನದ ಗೃಹಲಕ್ಷ್ಮಿ ಯೋ ಜನೆ ನಾ ನಾಯಕಿ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪ್ರಿಯಾಂಕ ಗಾಂಧಿ ವಾದ್ರಾ ಘೋಷಣೆ ಮಾಡಿದ್ದಾರೆ.
೫೦೦ ಪ್ರತಿ ಸಿಲಿಂಡರ್ ಗೆ ಸಹಾಯಧನವನ್ನು ಘೋಷಣೆ ಮಾಡಿದ್ದು ಜಿಎಸ್ಟಿ ಹೇರಿಕೆಯಿಂದ ಜನರನ್ನು ಪಾರು ಮಾಡುವ ನಿಟ್ಟಿನಲ್ಲಿ ಪ್ರತಿದಿನ ಬಳಕೆಯ ವಸ್ತುಗಳಿಗೆ ಜಿಎಸ್ಟಿ ಸಹಾಯಧನ ಸೇರಿದಂತೆ ಹಲವು ಉತ್ತಮ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಸಿಲಿಂಡರ್ ಬೆಲೆ ೧೦ ರಿಂದ ೧೫ ಏರಿಕೆ ಆದರೆ ಸಾಕು ಪ್ರತಿಭಟನೆ ಮಾಡುತ್ತಿದ್ದರು ಆದರೆ ಇಂದು ೧೧೦೦ ತಲುಪಿರುವ ಸಿಲಿಂಡರ್ ಬೆಲೆಯಿಂದ ಜನರು ತತ್ತರಿಸಿದ್ದಾರೆ. ಆದ್ದರಿಂದ ಜನಪರ ಆಡಳಿತ ನೀಡುವ ಮೂಲಕ ಜನರ ಹಿತಕಾಯುವ ಕಾರ್ಯವನ್ನು ಕಾಂಗ್ರೆ ಮಾಡುತ್ತಿದೆ ಎಂದರು.
“ನಾ ನಾಯಕಿ: ನಾಲಾಯಕಿ” ಅಶ್ವಥ್ ನಾರಾಯಣ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಟಿ ಕೆ ಸುರೇಶ್ ಅವರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಎಂದಿಗೂ ಸಹ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿತಿಲ್ಲ ದೇಶದಲ್ಲಿ ಮಹಿಳೆಯರು ರಕ್ಷಣೆಯ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಕೇವಲ ಭಾವನಾತ್ಮಕವಾಗಿ ಹೇಳಿಕೆಗಳನ್ನು ನೀಡುತ್ತದೆ ಎಂದು ಟೀಕಿಸಿದರು.
ಮಾಜಿ ಸಚಿವ ರೇವಣ್ಣ ಅವರು ಮಾತನಾಡಿ ನೆನ್ನೆ ನಡೆದಂತಹ ನಾ ನಾಯಕಿ ಕಾರ್ಯಕ್ರಮದಿಂದ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಇಷ್ಟು ಪ್ರಮಾಣದ ಜನರೊಂದಿಗೆ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದ್ದು ನಮ್ಮ ಉದ್ದೇಶ ಸರಿದಾರಿಯಲ್ಲಿ ಇರುವ ಲಕ್ಷಣ ಕಂಡು ಬಂದಿದೆ.ಹಾಸನದಲ್ಲಿಯೂ ಸಹ ಲಕ್ಷಕ್ಕೂ ಮೀರಿ ಜನರು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಧ್ರುವನಾರಾಯಣ್ ಅವರು ಎ ಮಂಜು ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುರೇಶ ಅವರು ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಕ್ಷೇತ್ರದ ನಾಯಕರು ಹಾಗೂ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಭ್ಯರ್ಥಿ ಯನ್ನು ಅಂತಿಮಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್ ,ಮಾಜಿ ಶಾಸಕರಾದ ಸಿ ಎಸ್ ಪುಟ್ಟೇಗೌಡ ಎಂ ಎ ಗೋಪಾಲಸ್ವಾಮಿ, ಬಿಕೆ ರಂಗಸ್ವಾಮಿ, ದೇವರಾಜೇಗೌಡ, ಶಂಕರ್ ,ಬನವಾಸೆ ರಂಗಸ್ವಾಮಿ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು