ಚನ್ನರಾಯಪಟ್ಟಣ: ಆನೆಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಮಾರನಹಳ್ಳಿ, ದೊಡ್ಡತರಹಳ್ಳಿ, ಮಂಡಲಕನಹಳ್ಳಿ ಗ್ರಾಮಗಳು ಸೇರಿದಂತೆ ೩ ಗ್ರಾಮಗಳಲ್ಲಿ ಸುಮಾರು ಎರಡು ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾಕ್ಟರ್ ಸೂರಜ್ ರೇವಣ್ಣ ಚಾಲನೆ ನೀಡಿದರು.
ನಂತರ ಚನ್ನರಾಯಪಟ್ಟಣ ತಾಲೂಕಿನ ಗಡಿ ಗ್ರಾಮಗಳಾದ ಆನೆಗೊಳ ಗ್ರಾಮ ಪಂಚಾಯತಿ ವ್ಯಾಪ್ತಿ ಯಲ್ಲಿ ಎರಡು ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಈ ದಿನ ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಮುಂದಿನ ದಿನಗಳಲ್ಲಿ ಬೋಳ ಮಾರನಹಳ್ಳಿ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ೧೭ ಲಕ್ಷ ರೂಪಾಯಿಗಳ ಅನು ದಾನವನ್ನು ನೀಡಲಾಗುವುದು, ನಮ್ಮ ಕುಟುಂಬಕ್ಕೆ ಹಾಸನ ಜಿಲ್ಲೆ ಮತ್ತು ಮಂಡ್ಯ ಜಿಲ್ಲೆ ಎರಡು ಕಣ್ಣುಗಳಿದ್ದಂತೆ ಇವೆರಡು ಜಿಲ್ಲೆಗಳ ಅಭಿವೃದ್ಧಿಗೆ ಸದಾ ಸಿದ್ಧರಿರುವ ಎಚ್.ಡಿ.ರೇವಣ್ಣ ಮತ್ತು ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಚುನಾವಣೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು.
ಎಚ್ ಡಿ ದೇವೇಗೌಡರ ಅಧಿಕಾರ ಅವಧಿಯಲ್ಲಿ ಶ್ರೀರಾಮ ದೇವರು ನಾಲೆಯ ಅಚ್ಚುಕಟ್ಟು ಪ್ರದೇಶವನ್ನು ಅಭಿವೃದ್ಧಿಪಡಿಸ ಲಾಗಿದೆ ಅದೇ ರೀತಿ ಎಚ್.ಡಿ. ರೇವಣ್ಣನವರ ಇಂಧನ ಸಚಿವ ರಾಗಿದ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ಹಲವಾರು ವಿದ್ಯುತ್ ಸಬ್ ಸ್ಟೇಷನ್ಗಳನ್ನು ಮಂಜೂರು ಮಾಡಲಾಗಿದೆ, ಅದೇ ರೀತಿ ಎಚ್ ಡಿ ಕುಮಾರ ಸ್ವಾಮಿ ಅಧಿಕಾರ ಅವಧಿ ಯಲ್ಲಿ ಕೆಆರ್ ಪೇಟೆ ತಾಲೂಕಿಗೆ ಹೆಚ್ಚಿನ ಅನುದಾನವನ್ನು ನೀಡ ಲಾಗಿದೆ, ಸರ್ಕಾರಿ ಇಂಜಿನಿಯ ರಿಂಗ್ ಕಾಲೇಜ್ ಮಂಜೂರು ಮಾಡಲಾಗಿದೆ ಎಂದರು.
ಅನ್ನದಾತರ ಸಾಲ ಮನ್ನಾ ಮಾಡುವ ಮೂಲಕ ಕೆಆರ್ ಪೇಟೆಯ ರೈತರ ಪರವಾದ ಯೋಜನೆಯನ್ನು ಹಮ್ಮಿ ಕೊಂಡಿರುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್ ಪಕ್ಷವೆಂದರು, ಕೆ ಆರ್ ಪೇಟೆ ತಾಲೂಕಿನ ಅಭಿವೃದ್ಧಿಗೆ ನಮ್ಮ ಕುಟುಂಬದ ಕೊಡುಗೆ ಅಪಾರ ವಿದೆ ಇದನ್ನು ಮನ ಗೊಂಡು ಮುಂದಿನ ಚುನಾವಣೆ ಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತವನ್ನು ನೀಡುವ ಮೂಲಕ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿ ಕೊಡಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾದ ಸಿ.ಎನ್ ಪುಟ್ಟಸ್ವಾಮಿಗೌಡ, ಬಿ.ಎಲ್ ದೇವರಾಜ್, ಜೆಡಿಎಸ್ ಮುಖಂಡ ರಾದ ಬಸ್ ಕೃಷ್ಣೇಗೌಡ, ಬಿಎಸ್ ಮಂಜು ನಾಥ ,ಕಾಯಿಮಂಜೇಗೌಡ, ಬೋರಮಾರನಹಳ್ಳಿ ಪುಟ್ಟಸ್ವಾಮಿ ಗೌಡ, ಶೇಖರ್, ಚಿಕ್ಕಲಿಂಗೇ ಗೌಡ, ಬಿ ಆರ್ ಕುಮಾರ್, ರಮೇಶ್, ಚಿಕ್ಕತರಹಳ್ಳಿ ಪರ್ವ ತಣ್ಣ , ಜೆಡಿಎಸ್ ಮುಖಂಡ ರಾದ ಮತಿಗೆಟ್ಟ ರಕ್ಷಿತ್, ಬೋರ ಮಾರನಹಳ್ಳಿ ಸಚಿನ್ ,ಮಂಜು, ಕೋಡಿಮಾರನಹಳ್ಳ ಪ್ರವೀಣ್ ಸೇರಿದಂತೆ ಇತರರು ಹಾಜರಿದ್ದರು.