News Kannada
Tuesday, February 07 2023

ಹಾಸನ

ಹಾಸನ: ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ- ಡಿಕೆಶಿ ಮನವಿ

Prajadhvani
Photo Credit : News Kannada

ಹಾಸನ: ಪ್ರಜಾಧ್ವನಿ ಯಾತ್ರೆ ರಾಜ್ಯದ ಜನರ ಸಮಸ್ಯೆ ಆಲಿಸಲು ಆಯೋಜನೆ ಮಾಡಲಾಗಿದೆ.ಆರ್ಥಿಕ ಸಾಮಾಜಿಕ ಸಮಸ್ಯೆ ಧ್ವನಿ ಕೇಳಲು ಯಾತ್ರೆ ಹೊರಟಿದ್ದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಕೈಮುಗಿದು ಕಾಲ್ ಮುಗಿದು ಕೇಳುತ್ತೇನೆ ಹೊಸ ಬದಲಾವಣೆ ತರಲು ಬೆಂಬಲ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.

ನಗರದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ೪೦ ವರ್ಷದಿಂದ ರಾಜಕೀಯ ಮಾಡುತ್ತಿದ್ದು ಹಾಸನಕ್ಕೆ ಬಂದಾಗ ನೀಡಿದ ದ ಸ್ವಾಗತ ಸಾಕ್ಷಿ ಗುಡ್ಡೆಯಾಗಿ ನಿಂತಿದ್ದು ಇಡೀ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದೆ.

ಈಗಾಗಲೇ ಹಲವು ಸಭೆ ನಡೆದಿದೆ ದೊಡ್ಡ ರೀತಿಯಲ್ಲಿ ಸಭೆ ಜನ ಸೇರಿದ್ದಾರೆ ಆದರೆ ಹಾಸನದಲ್ಲಿ ಜನರು ನೀಡಿದ ಭವ್ಯಸ್ವಾಗತ ಬದಲಾವಣೆ ತರಲು ಹುಮ್ಮಸ್ಸು ಇರುವಂತೆ ಕಾಣುತ್ತಿದೆ. ಮಕ್ಕಳು ಹಿರಿಯರು ಯುವಕರು ಮಹಿಳೆಯರು ನೋವನ್ನು ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬಿಜೆಪಿ ಯನ್ನು ದೂರ ಇಡಲು ಪ್ರಯತ್ನ ಸದಾ ಇದೆ ಆದರೆ ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಅವರೊಂದಿಗೆ ಸರ್ಕಾರ ರಚಿಸಿದರು. ಆದರೆ ಕಾಂಗ್ರೆಸ್ ಅವಕಾಶ ಇದ್ದರು ಕೆಟ್ಟ ಬಿಜೆಪಿ ಜೊತೆ ನಡೆಯಲು ಹೋಗದೆ ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟೆವು ನಮ್ಮಿಂದ ತಪ್ಪಾಗಿದ್ದರೆ ನಿಮ್ಮ ಶಿಕ್ಷೆಗೆ ಸಿದ್ದ ಎಂದರು.

ಬಿಜೆಪಿ ಸರ್ಕಾರ ಕೊರೋನಾ ಸಂದರ್ಭದಲ್ಲಿ ಸಹ ಜನರ ಹಣ ಲೂಟಿ ಮಾಡಲು ಮುಂದಾದರು. ಬೆಲೆ ಏರಿಕೆ ಸೇರಿದಂತೆ ಹಲವು ಜನ ವಿರೋಧಿ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಹಲವು ನಾಯಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ದಾವಣಗೆರೆ ಜಿಲ್ಲೆಯಿಂದ ಹೊನ್ನಾಳಿ ದೇವೇಂದ್ರಪ್ಪ,ಕಾಂಗ್ರೆಸ್ ಸೇರಲು ದತ್ತ, ಮಧು ಬಂಗಾರಪ್ಪ ದಡ್ಡರೆ ಕಳೆದ ಬಾರಿ ಎಮ್‌ಎಲ್ ಸಿ ಮನೋಹರ್, ತುಮಕೂರು ಕಾಂತರಾಜು,ಕಾಂಗ್ರೆಸ್ ಸೇರಿದ್ದಾರೆ ಎಂದರು.

ನಿಮ್ಮ ಪಾದಗಳಿಗೆ ಕೈಮುಗಿದು ಕೇಳುತ್ತೇನೆ ನಿಮ್ಮ ಸೇವೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಿ ಬಂದು ಋಣ ತೀರಿಸಲು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ಕೈ ಮುಗಿದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಾನು ಸಿದ್ದರಾಮಯ್ಯ ಒಗ್ಗಟ್ಟಿನಿಂದ ಹೊರಾಟ ನಡೆಸಿ ನಿಮ್ಮ ಋಣ ತೀರಿಸಲಿದ್ದೇವೆ . ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ವಿಲ್ಲದ ಆಡಳಿತ ನೀಡುತ್ತೇವೆ.. ಲಂಚ.ಲಂಚ ಎಂದು ಇಂದು ಪ್ರತಿ ಗೋಡೆ ಹೇಳುತ್ತಿದ್ದ ಇದಕ್ಕೆ ಮುಕ್ತಿ ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಮನವಿ ಮಾಡಿದರು.

ಡಿ.ಕೆ ಸುರೇಶ್ ಮಾತನಾಡಿ ರಾಜ್ಯದಲ್ಲಿ ಡಿಕೆಶಿ ನೇತೃತ್ವದಲ್ಲಿ ಸಿದ್ದರಾಮಯ್ಯ ಪ್ರಜಾಧ್ವನಿ ಪ್ರಜೆಗಳ ಧ್ವನಿ ಯಾಗಿ ಕೆಲಸ ಮಾಡಲಿದೆ ಅಂತೆಯೆ ರೂಪಿಸಲಾಗುದ್ದು ಬೆಳಗಾವಿ ಆರಂಭ ನಂತರ ಇಂದು ಹಾಸನಕ್ಕೆ ಬರಲಾಗಿದೆ. ಪ್ರಧಾನಿ ನೀಡಿದ ಜಿಲ್ಲೆಯಲ್ಲಿ ದುಡ್ಡ ಸವಾಲಿದೆ ಎಚ್.ಸಿ ಶ್ರೀಕಂಠಯ್ಯ, ಜಿ.ಪುಟ್ಟಸ್ವಾಮಿಗೌಡ ಅಧಿಕಾರಿ ನಡೆಸಿದ ಕಾಂಗ್ರೆಸ್ ನೆಲದಲ್ಲಿ ಮತ್ತೆ ಅಧಿಕಾರ ಪಡೆಯಬೇಕಿದೆ.ಎರಡು ವರ್ಣದಿಂದ ಕೆಲಸ ಮಾಡಿದ್ದು ಜನ ಬದಲಾವಣೆ ಬಯಸಿದ್ದಾರೆ. ಒಂದೇ ಕುಟುಂಬದ ಆಸ್ತಿಯಾಗಿರುವ ಕ್ಷೇತ್ರ ಕಿತ್ತೊಗೆಯಬೇಕಿದೆ ಎಂದು ಕರೆ ನೀಡಿದರು.

See also  ಹೊಸದಿಲ್ಲಿ: ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಜಿ-23 ತಂಡದ ಆನಂದ್ ಶರ್ಮಾ ಸೇರ್ಪಡೆ

ಏಳಕ್ಕೆ ಏಳು ಕ್ಷೇತ್ರ ಗೆಲ್ಲುವ ಗುರಿಯೊಂದಿದ್ದು ಯಾವುದೇ ಗುಂಪಿನಮನ್ನಣೆ ನೀಡದೆ ಕಾಂಗ್ರೆಸ್ ಬಲಗೊಳಿಸುತ್ತೇವೆ ಎಂಬ ಗುರಿಯೊಂದಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ೧೬೫ ಆಶ್ವಾಸನೆ ಈಡೇರಿಸಲಾಗಿದೆ.೨೦೦ ಯುನಿಟ್ ಎಲ್ಲಿಂದ ಕೊಡುತ್ತಾರೆ ಎಂದು ಪ್ರತಿಪಕ್ಷದವರು ಟೀಕಿಸುತ್ತಾರೆ ಆದರೆ ಅವರ ಮಾತನ್ನು ಹುಸಿ ಮಾಡಲಾಗುವುದು ಎಂದರು.

ಹಿಂದೆ ಅಧಿಕಾರದಲ್ಲಿ ಇದ್ದಾಗ ಡಿಕೆ ಶಿವಕುಮಾರ್ ಇಂಧನ ಮಂತ್ರಿಯಾದಗ ವಿದ್ಯುತ್ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದರು. ಉಚಿತ ವಿದ್ಯುತ್ ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲರಿಗೂ ಈ ಲಾಭ ದೊರೆಯಲಿದೆ. ಗ್ಯಾಸ್ ಬೆಲೆ ೪೫೦ ಇದ್ದದ್ದು ೧೧೦೦ ಆಗಿದೆ.. ಜನರ ತೆರಿಗೆ ಹಣ ಕಸಿದು ಬೆಲೆ ಏರಿಕೆ ಮಾಡುತ್ತಲಿದೆ ಜೆಡಿಎಸ್ ನಾಯಕರು ಬೆಲೆ ಏರಿಕೆ ವಿರುದ್ಧ ಯಾವುದೇ ಹೋರಾಟ ಮಾಡಿಲ್ಲ. ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಜೆಡಿಎಸ್ ಕಳೆದುಕೊಂಡಿದೆ. ಕೇಂದ್ರ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರ ನಡೆಸುತ್ತಿದ್ದಾರೆ . ಆದರೆ ಬಿಜೆಪಿ ಬೆಲೆ ಏರಿಕೆ ತಡೆಯಲು ಸಾಧ್ಯವಾಗಿಲ್ಲ. ಜಿಎಸ್ಟಿ ಮೂಲಕ ಕೂಲಿ ಕಾರ್ಮಿಕ ಬಡವರ ಜೇಬಿಗೆ ಕೈಹಾಕಿದ ಸರ್ಕಾರ ಬಿಜೆಪಿ ಎಂದು ದೂರಿದರು.

ಬಿ.ಕೆ ಹರಿಪ್ರಸಾದ್ ಮಾತನಾಡಿ ಹೇಮಾವತಿ ನದಿ ನೀರು ಹಾಸನ ಸೇರಿ ಇತರೆ ಜಿಲ್ಲೆಗೆ ಹರಿಸಿ ರೈತರಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ, ಹೇಮಾವತಿ ಮುಳುಗಡೆ ವಿಚಾರಲದಲ್ಲಿ ಭೂ ಮಾಫಿಯ ನಡೆಯುತ್ತಿರುವುದು ನೋಡಿದ್ದು ಇದಕ್ಕೆ ಇತರೆ ಪಕ್ಷಗಳೆ ಕಾರಣ. ಪರಿಹಾರ ವಿತರಣೆಯಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಉತ್ತಮ ಆಡಳಿತಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದರು.

ಅಮಿತ್ ಶಾ ಪ್ರತಿ ವಾರ ಬರುತ್ತೇನೆ ಎಂದು ಹೇಳಿದ್ದಾರೆ ಆದರೆ ಕರ್ನಾಟಕ ಕ್ಕೆ ಕೊಡುಗೆ ನೀಡಬೇಕು ಅದನ್ನು ಬಿಟ್ಟು ಇಲ್ಲಿಂದ ತೆಗೆದುಕೊಂಡು ಹೋಗುವುದು ಬೇಡ..ಕೆಎಮ್ ಎಪ್ ಅಮೂಲ್ ವಶಕ್ಕೆ ಪಡೆಯಲು ಹೊರಟಿರುವುದು ಇದಕ್ಕೆ ಉದಾಹರಣೆ. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾಂಗ್ರೆಸ್ ಬೆಂಬಲಿಸಿ. ಬಿಜೆಪಿ ಗೆ ಅಧಿಕಾರ ಕೊಟ್ಟಿದ್ದು ಸಾಕು ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಯಾವುದೇ ಅಧಿಕಾರ ಒಂದು ಪಕ್ಷದ ನಾಯಕರಿಗೆ ಸೀಮಿತವಾಗಿದೆ ಡೈರಿ, ಲೋಕೋಪಯೋಗಿ ಇಲಾಖೆ, ಎಚ್ ಡಿ ಸಿಸಿ ಬ್ಯಾಂಕ್ , ಸರ್ಕಾರಿ ಕಚೇರಿಯಲ್ಲಿ ಜೆಡಿಎಸ್ ನಾಯಕರ ಹಿಡಿತದಲ್ಲಿ ಕಾರ್ಯನಿರ್ವಹಣೆ ಇದೆ ಇದನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಪಕ್ಷಕ್ಕೆ ಉಜ್ವಲ ಭವಿಷ್ಯ ತಂದುಕೊಡಲಿದ್ದಾರೆ ಎಂಬ ವಿಶ್ವಾಸ ಇದೆ.. ಡಿ.ಕೆ.ಸುರೇಶ್ ಅವರು ಪಕ್ಷದ ಜಿಲ್ಲಾ ಉಸ್ತುವಾರಿಯಾದ ಬಳಿಕ ಪಕ್ಷಕ್ಕೆ ಚೈತನ್ಯ ದೊರೆತಿದೆ .ಮಂಡ್ಯ ಸೇರಿದಂತೆ ಹಾಸನವು ಕಾಂಗ್ರೆಸ್ ಬಲಕ್ಕೆ ಕಾಂಗ್ರೆಸ್ ನಾಯಕರು ಶ್ರಮಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆ ಯಲ್ಲಿ ಬೆಂಬಲಿಸುವ ಮೂಲಕ ಗುಲಾಮಗಿರಿ ಯಿಂದ ಮುಕ್ತಗೊಳಿಸಲು ಕರೆ ನೀಡಿದರು.

See also  ಬೆಂಗಳೂರು: ಸತ್ಯಸಾಯಿಬಾಬಾ ಮಾನವ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ತೇಯ್ದಿದ್ದಾರೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜಿವಾಲಾ, ದೃವನಾರಾಯಣ್, ಮಾಜಿ ಎಮ್ ಎಲ್ ಸಿ ಗೋಪಾಲಸ್ವಾಮಿ, ಇ.ಎಚ್ ಲಕ್ಷ್ಮಣ್, ಕೃಷ್ಣೇಗೌಡ, ಎಚ್.ಎಮ್ ರೇವಣ್ಣ, ಪುಷ್ಪ ಅಮರ್ ನಾಥ್, ಬಿ.ಶಿವರಾಂ, ಎಚ್.ಕೆ.ಮಹೇಶ್, ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ, ಡಿ.ಮಲ್ಲೇಶ್, ಜಾವಗಲ್ ಮಂಜುನಾಥ್, ಕೃಷ್ಣ ಮೀನ,ತಾರಾ ಚಂದನ್, ಹುಸೈನ್ ಸೇರಿದಂತೆ ಹಲವು ನಾಯಕರು ವೇದಿಕೆಯಲ್ಲಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು