ಹಾಸನ: ರಾಜ್ಯದಲ್ಲಿ ಉತ್ತಮ ಪ್ರಾದೇಶಿಕ ಪಕ್ಷವಾಗಿ ಜನಸೇವೆ ಮಾಡುತ್ತಿರುವ ಜೆಡಿಎಸ್ ಪಕ್ಷ ವಿಸರ್ಜಿಸುವಂತೆ ಹೇಳಿಕೆ ನೀಡಲು ಅವರ್ಯಾರು ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಕಿಡಿ ಕಾರಿದ್ದಾರೆ.
ನಗರದ ಸಂಸದರ ನಿವಾಸ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಹಾಸನದಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿರುವ ಕಾಂಗ್ರೆಸ್ ನವರು ಹಾಸನಕ್ಕೆ ಬಂದರೆ ಸಾಕು ಎ ಟೀಮ್ ಬಿ ಟೀಮ್ ಎಂದು ಬೊಬ್ಬೆ ಹೊಡೆಯುತ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದು ರಾಜ್ಯದಲ್ಲಿ ೧೬೫ ಭಾಗ್ಯವನ್ನು ಕರುಣಿಸಿ ೮೦ ಸ್ಥಾನವನ್ನು ಪಡೆದು ಹೀನಾಯ ಸ್ಥಿತಿಗೆ ಬಂದು ನಿಂತಿದೆ ಇಂತಹ ಸಂದರ್ಭದಲ್ಲು ಜೆಡಿ ಎಸ್ ವಿಸರ್ಜನೆ ಮಾಡುವಂತೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿಕೆ ಎಷ್ಟು ಸರಿ ಎಂದರು.
ಜೆಡಿಎಸ್ ಅಂದರೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಭಯ ಆವರಿಸಿದೆ ಆದ್ದರಿಂದ ಉತ್ತಮ ಆಡಳಿತಕ್ಕಾಗಿ ಎರಡು ರಾಷ್ಟ್ರ ಪಕ್ಷಗಳನ್ನು ದೂರವಿಟ್ಟು ನಮ್ಮ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುವಂತೆ ರೇವಣ್ಣ ಮನವಿ ಮಾಡಿದರು .
ಒಂದು ಕಡೆ ಕೋಮುವಾದ ಪಕ್ಷ ದೂರ ಇಡಬೇಕು ಎಂದು ಹೇಳುತ್ತಾರೆ ಮತ್ತೊಂದೆಡೆ ಪ್ರಾದೇ ಶಿಕ ಪಕ್ಷವನ್ನು ಮುಗಿಸಬೇಕೆ ನ್ನುವುದು ಎರಡು ರಾಷ್ಟ್ರೀಯ ಪಕ್ಷಗಳ ಅಜೆಂಡವಾಗಿದೆ.
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಅಂಡರ್ಸ್ಟ್ಯಾಂಡಿಂಗ್ ನಲ್ಲಿಯೇ ನಡೆದುಕೊಂಡು ಬರುತ್ತಿ ದ್ದು ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇದಿದ್ದರೆ, ಕೋ ಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸುತ್ತಿರಲಿಲ್ಲ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಲಿ ಮುನಿಯಪ್ಪ ಸೋಲಲು ನಾವು ಕಾರಣವಲ್ಲ ಎಂದು ಸವಾಲು ಹಾಕಿದರು.
ಕಳೆದ ಬಾರಿ ಚುನಾವಣೆ ಮುಗಿದ ಬಳಿಕ ನಾವೇನು ಬಿಜೆಪಿ ಅವರ ಮನೆ ಬಾಗಿಲಿಗೆ ಹೋಗಿ ರಲಿಲ್ಲ, ಮೋದಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಯಾಗುವಂತೆ ತಿಳಿಸಿದ್ದರು ನಾವು ಒಪ್ಪಲಿಲ್ಲ ಆದರೆ ೧೭ ಜನರನ್ನು ಕಳುಹಿಸಿದ್ದು ಕಾಂಗ್ರೆ ಸ್ ನವರಲ್ಲವೇ , ಅಂದು ನಾನು ಸಿದ್ದರಾಮಯ್ಯ ಅವರ ಮನೆಯಲ್ಲೇ ಕುಳಿತಿದ್ದೆ ದೆಹಲಿಯಿಂದ ನನಗೆ ಫೋನ್ ಮಾಡಿದರು ನಿನ್ನನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಅಂದಿದ್ದರು ಇಂದು ನೇರವಾಗಿ ದೇವಾಲಯದಿಂದ ಬಂದು ಮಾತನಾಡುತ್ತಿದ್ದು, ನಾನು ಸುಳ್ಳು ಹೇಳುತ್ತಿಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ತುಮಕೂರಿನಲ್ಲಿ ನಿಲ್ಲಿಸಿ ಸೋಲಿಸಿದರು ಮಂಡ್ಯದಲ್ಲೂ ಸಹ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಯನ್ನು ಸೋಲಿಸಲು ಎರಡು ರಾಷ್ಟ್ರೀಯ ಪಕ್ಷಗಳು ನಿಂತವು ತುಮಕೂರಿನ ಎಂಪಿ ಬಹಿರಂ ಗವಾಗಿ ಹೇಳುತ್ತಿದ್ದಾರೆ ಕಾಂಗ್ರೆಸ್ನವರು ನನಗೆ ೮೨,೦೦೦ ಮತ ಕೊಡಿಸಿದ್ರು ಎಂದು , ಇಷ್ಟೆಲ್ಲ ಮಾಡಿರುವ ಪಕ್ಷ ನಮ್ಮನ್ನು ಬಿ ಟೀಂ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾನು ರಾಹುಲ್ ಗಾಂಧಿಗೆ ಅವರಲ್ಲಿ ಮನವಿ ಮಾಡುತ್ತೇನೆ ಕರ್ನಾಟಕ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡುವುದೇ ಒಳ್ಳೆಯದು. ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದ್ದು ಈಗ ಇರುವುದು ಕೋಮುವಾದಿ ಕಾಂಗ್ರೆ ಸ್ ಮಹಾತ್ಮ ಗಾಂಧಿ ಕಾಂಗ್ರೆಸ್ ಅಲ್ಲ..!! ಕಾಂಗ್ರೆಸ್ ಇರುವ ಅಲ್ಪ ಸ್ವಲ್ಪ ಗೌರವ ಉಳಿಯಬೇಕೆಂದರೆ ಆ ಪಕ್ಷವನ್ನು ವಿಸರ್ಜನೆ ಮಾಡುವುದೇ ಸೂಕ್ತ ಎಂದು ಜರಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ೭ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಎಲ್ಲಾ ತಾಲ್ಲೂಕಿನಲ್ಲಿ ಜೆಡಿಎಸ್ ಕಾರ್ಯ ಕರ್ತರು ಪಕ್ಷ ಸಂಘಟನೆ ದೃಷ್ಟಿ ಯಿಂದ ಉತ್ಸುಕರಾಗಿದ್ದು ಜೆಡಿಎಸ್ ಗೆಲುವು ಶತಸಿದ್ಧ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಅರಕಲಗೂಡು ವಿಧಾನಸಭೆ ಕ್ಷೇತ್ರದ ಕೆಲ ಕಾರ್ಯಕರ್ತರು ಮನೆಗೆ ಮತ್ತಿಗೆ ಹಾಕಿ ಎ.ಟಿ ರಾಮಸ್ವಾಮಿ ಅವರಿಗೆ ಟಿಕೆಟೆ ನೀಡದಂತೆ ಒತ್ತಾಯಿಸಿರುವ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಹಾಗೂ ಸ್ಥಳೀಯ ಮುಖಂಡರು ಕಾರ್ಯಕರ್ತರ ಸಮ್ಮುಖದಲ್ಲಿ ಸಭೆ ನಡೆಸಿ ಗೊಂದಲ ನಿವಾರಿಸಲಾ ಗುವುದು ಎಂದು ಶಾಸಕ ರೇವಣ್ಣ ಸ್ಪಷ್ಟಪಡಿಸಿದರು. ಈ ವೇಳೆ ಶಾಸಕರಾದ ಎಚ್.ಕೆ ಕುಮಾರಸ್ವಾಮಿ ಇದ್ದರು.
ಫೆಬ್ರವರಿ ೩ ರಂದು ಅರಸೀಕೆರೆಯಲ್ಲಿ ಕಾರ್ಯಕರ್ತರ ಸಭೆ
ಪಕ್ಷ ಸಂಘಟನೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ತಯಾರಿ ಸಂಬಂಧ ಫೆ.೩ ರಂದು ಅರಸೀಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ, ಆಯೋಜಿಸಲಾಗಿದೆ ಎಂದು ಬೇಲೂರು ಶಾಸಕ ಕೆ. ಎಸ್ ಲಿಂಗೇಶ್ ತಿಳಿಸಿದರು.
ಈಗಾಗಲೇ ಬೇಲೂರು , ಹಾಸನ, ಸಕಲೇಶಪುರ ಆಲೂರು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ಮುಕ್ತಾಯಗೊಂಡಿದ್ದು ಅರಕಲಗೂಡು ಚನ್ನರಾಯಪಟ್ಟಣ ದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲು ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಅರಸೀಕೆರೆಯಲ್ಲಿ ನಡೆಯುವ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಮುಖಂಡರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎ.ಟಿ ರಾಮಸ್ವಾಮಿ ಹಾಗೂ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.