ಬೇಲೂರು: ಹೊಯ್ಸಳ ವಾಸ್ತು ಶಿಲ್ಪ ಶೈಲಿಯ. ಜಗತ್ಪ್ರಸಿದ್ಧ ಬೇಲೂರು ಸುಂದರ ಕೆತ್ತನೆಗಳಿಂದ ಕೂಡಿದ್ದು ಸದ್ಯದಲ್ಲೇ ’ಯುನೆಸ್ಕೋ ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿ ಸೇರಲಿದೆ.
ಹೊಯ್ಸಳರ ಈ ಸ್ವತಂತ್ರ ವಾಸ್ತು ಶಿಲ್ಪ ಸಂಪ್ರದಾಯ ಕುರಿತು ಅಧ್ಯಯನ ಮಾಡಿ ’ವರ್ಲ್ಡ್ ಹೆರಿಟೇಜ್ ಸೈಟ್’ ಆಗಿ ಘೋಷಿಸುವ ನಿಟ್ಟಿನಲ್ಲಿ ಈಗಾಗಲೇ ಮಲೇಷ್ಯಾ ಮೂಲದ ತಜ್ಞರ ನೇತೃತ್ವದ ಯುನೆಸ್ಕೋ ತಂಡವು ದೇಗುಲಕ್ಕೆ ಭೇಟಿ ನೀಡಿದ ಎಎಸ್ಐ ಮಹಾ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ಯುನೆಸ್ಕೋಗೆ ರವಾನಿಸಿದ್ದಾರೆ.
ಇಲ್ಲಿನ ದೇಗುಲದಲ್ಲಿ ಮೃದುವಾದ ಬಳಪದ ಕಲ್ಲು ಬಳಸಿ ಕೆತ್ತನೆ ಮಾಡಲಾದ ಸುಂದರ ಶಿಲಾ ಬಾಲಿಕೆಯರು, ದೇವಾಲಯದ ಹೊರಗಿನ ಗೋ ಡೆ ಮೇಲಿನ ಹಿಂದೂ ಪುರಾಣ ಕಥನ ಕೆತ್ತನೆಗಳು, ರಾಮಾಯಣ ಮತ್ತು ಮಹಾಭಾರತ ದೃಶ್ಯಗಳ ಸಂರಕ್ಷಣೆಗೆ ಒತ್ತು ನೀಡಬೇಕಾದ ಇಲಾಖೆಯ ಅಧಿಕಾರಿಗಳು ಸಿಬ್ಬಂ ದಿಗಳ ಬೇಜವಾಬ್ದಾರಿತನದಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಂದ ಸೂಕ್ಷ್ಮಕೆತ್ತನೆಯ ಶಿಲೆಗಳಿಗೆ ಹಾನಿಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರೂ ಯಾರು ಕೇಳದ ಸ್ಥಿತಿ ನಿರ್ಮಾಣವಾಗಿದೆ.
ಹೊಯ್ಸಳ ಶಿಲ್ಪ ಕಲಾ ಕೇಂದ್ರ ವಾಗಿರುವ ಬೇಲೂರು ಚನ್ನಕೇ ಶವ ಸ್ವಾಮಿ ದೇವಸ್ಥಾನ ನಿರ್ವಹ ಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಪರಿಣಾಮ ಹಲವು ಸಮಸ್ಯೆಗಳು ತಾಂಡವ ವಾಡುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ದೇಗುಲದಲ್ಲಿ ವೈಜ್ಞಾನಿಕವಾಗಿ ನಿರ್ವಹಣೆಗೆ ಮುಂದಾಗಿ ಐತಿಹಾ ಸಿಕ ದೇಗುಲವನ್ನು ಮುಂದಿನ ಪೀಳಿಗೆಗೆ ಉಳಿಸಬೇಕದೆ ಎಂದು ಸ್ಥಳೀಯರ ಒತ್ತಾಯವಾಗಿದೆ.