ನುಗ್ಗೇಹಳ್ಳಿ : ಹೋಬಳಿ ಕೇಂದ್ರದಲ್ಲಿ ೧೮ ಲಕ್ಷ ವೆಚ್ಚದಲ್ಲಿ ನೂತನ ನಾಡಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಸಿಎನ್ ಬಾಲಕೃಷ್ಣ ತಿಳಿಸಿದರು.
ಹೋಬಳಿ ಕೇಂದ್ರದಲ್ಲಿ ಕಂದಾಯ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿದ ನೂತನ ನಾಡಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಹೊಸದಾಗಿ ೭೪೦ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ತಾಲೂಕಿನಲ್ಲಿ ೬೯ ಸಾವಿರ ರೈತರು ಪಹಣಿ ಹೊಂದಿದ್ದು ಜಿಲ್ಲೆಯಲ್ಲಿ ಅತಿ ಹೆಚ್ಚು ಪಹಣಿ ಹೊಂದಿರುವ ತಾಲೂಕ್ ಆಗಿದೆ ಹಾಗೂ ೪೭ ಸಾವಿರ ರೈತರಿಗೆ ಕೃಷಿ ಪತ್ತಿನ ಮೂಲಕ ಸಾಲ ನೀಡಲಾಗಿದ್ದು ಕಳೆದ ವರ್ಷ ಅತಿ ಹೆಚ್ಚು ಮಳೆಯಿಂದ ತಾಲೂಕಿನಲ್ಲಿ ಅನೇಕ ಮನೆಗಳು ಬಿದ್ದಿದ್ದವು. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ನಿರಾಶ್ರಿತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಕೊಡಿಸಲಾಗಿದೆ ಹೋಬಳಿ ಕೇಂದ್ರದಲ್ಲಿ ೨ ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಹೋಬಳಿ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗಿದೆ ಮಾನ್ಯ ಜಿಲ್ಲಾಧಿಕಾರಿಗಳು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶ್ರೀಮತಿ ಎಂಎಸ್ ಅರ್ಚನಾ ಮಾತನಾಡಿ ಕಂದಾಯ ಇಲಾಖೆ ಇಂದ ಕಡಿಮೆ ಅನುದಾನ ಬಂದರೂ ಸ್ಥಳೀಯ ಶಾಸಕರ ಹೆಚ್ಚಿನ ಸಹಕಾರ ಉತ್ತಮ ಕಟ್ಟಡ ನಿರ್ಮಾಣ ವಾಗಿದೆ ಹೋಬಳಿಯ ವ್ಯಾಪ್ತಿಯ ರೈತರಿಗೆ ನೂತನ ನಾಡ ಕಚೇರಿ ಕಟ್ಟಡದಲ್ಲಿ ಎಲ್ಲ ರೀತಿಯ ಸೌಲಭ್ಯಗಳು ದೊರಕಲಿದೆ ಎಂದರು ಕಾರ್ಯಕ್ರಮದ ಅಂಗವಾಗಿ ಇದೇ ಮೊದಲ ಬಾರಿಗೆ ಹೋಬಳಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು ಹಾಗೂ ಇದೆ ಸಂದರ್ಭದಲ್ಲಿ ಫಲಾನುಭವಿಗಳಿಗೆ ಪಿಂಚಿಣಿ ಹಕ್ಕು ಪತ್ರ ಹಾಗೂ ಹೊಸ ಪಡಿತರ ಬಿಪಿಎಲ್ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು .
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗೋವಿಂದ್ ರಾಜ್, ಉಪತಾಸಿಲ್ದಾರ್ ಗಿರೀಶ್ ಬಾಬು, ಬಾಗೂರು ಹೋಬಳಿ ಉಪ ತಹಸಿಲ್ದಾರ್ ಕುಮಾರ್, ಕಂದಾಯಾಧಿಕಾರಿ ಲೋಕೇಶ್, ಗ್ರಾ ಪಂ ಅಧ್ಯಕ್ಷ ಮಂಜುಳಾ ಗೋಪಾಲ್, ಕೃಷಿ ಪತ್ತಿನ ಅಧ್ಯಕ್ಷ ದೊರೆಸ್ವಾಮಿ, ಮಾಜಿ ಜಿಪಂ ಸದಸ್ಯ ಎಚ್ ಎಮ್ ನಟರಾಜ್, ಗ್ರಾಪಂ ಉಪಾಧ್ಯಕ್ಷ ವಿಠಲ್ ಕುಮಾರ್, ಮುಖಂಡರುಗಳಾದ ತೋಟಿ ನಾಗರಾಜು , ಪುಟ್ಟಸ್ವಾಮಿ, ಪಟೇಲ್ ಕುಮಾರ್, ಯಲ್ಲಪ್ಪ, ಎನ್ ಎಸ್ ಮಂಜುನಾಥ್, ಮಂಜುನಾಥ್, ಹೊನ್ನೇಗೌಡ, ಸಂಪತ್ ಕುಮಾರ್, ಅಕ್ಕು, ನಿರ್ಬಿತಿ ಕೇಂದ್ರದ ಇಂಜಿನಿಯರ್ ಸಿದ್ದೇಗೌಡ, ಸೇರಿದಂತೆ ಅನೇಕರು ಹಾಜರಿದ್ದರು.