ಹಾಸನ: ಒಂದು ಕಡೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಸಮಸದರ ಮನೆ ಮುಂದೆ ಪ್ರತಿಭಟನೆ ಮಾಡಿದ್ರೆ, ಇನ್ನೊಂದು ಕಡೆ ಜೆಡಿಎಸ್ ಕಾರ್ಯಕರ್ತರೆ ಹೆಚ್.ಪಿ. ಸ್ವರೂಪ್ ಗೆ ಟಿಕೆಟ್ ನೀಡಲು ಒತ್ತಾಯಿಸಿ ಅವರ ಮನೆ ಮುಂದೆ ಶಾಮಿಯಾನ ಹಾಕಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಒಂದು ಕಡೆ ಭವಾನಿ ರೇವಣ್ಣ ಅಭಿಮಾನಿಗಳು ಸಂಸದರ ಮನೆಮುಂದೆ ಶಾಮಿಯಾನ ಹಾಕಿ ಪ್ರತಿಭಟಿಸಿದ್ರೆ ಇನ್ನೊಂದು ಕಡೆ ಹೆಚ್.ಪಿ. ಸ್ವರೂಪ್ ಗೆ ಟಿಕೆಟ್ ನೀಡಲು ಆಗ್ರಹಿಸಿ ಅವರ ಮನೆ ಮುಂದೆ ಜೆಡಿಎಸ್ ಕಾರ್ಯ ಕರ್ತರು ಶಾಮಿಯಾನ ಹಾಕಿ ಧರಣಿ ಆರಂಭಿಸಿದ್ದಾರೆ. ಒಂದು ರೀತಿ ಟಿಕೆಟ್‌ಗಾಗಿ ಒಂದೆ ಪಕ್ಷದಲ್ಲಿ ಎರಡು ಫೈಟ್ ಶುರುವಾಗಿದೆ.
ಭವಾನಿ ರೇವಣ್ಣಗೆ ಟಿಕೇಟ್ ಗೆ ಒತ್ತಾಯಿಸಿ ಕಾರ್ಯಕರ್ತರ ಪ್ರತಿಭಟನೆ ಬೆನ್ನಲ್ಲೇ ಸ್ವರೂಪ್ ಪರ ಕೂಡ ಹೆಚ್ಚಿದ ಒತ್ತಡ ಕಂಡು ಬಂದಿರುವುದಾಗಿ ರಾಜಕೀಯದಲ್ಲಿ ದಿನೆ ದಿನೆ ತಿರುವು ಪಡೆಯುತ್ತಿದೆ. ಟಿಕೇಟ್ ಆಕಾಂಕ್ಷಿ ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಪುತ್ರ ಸ್ವರೂಪ್ ಮನೆ ಮುಂದೆ ನೂರಾರು ಜನರು ಜಮಾಯಿ ಸಿದ್ದಾರೆ. ಶಾಮಿಯಾನ ಹಾಕಿಕೊಂಡು ಸ್ವರೂಪ್ ಮನೆ ಮುಂದೆ ಕಾರ್ಯಕರ್ತರು ಕುಳಿತಿದ್ದಾರೆ. ಹಾಸನ ನಗರದ ಹೇಮಾವತಿ ನಗರದಲ್ಲಿರೊ ಸ್ವರೂಪ್ ಮನೆ ಮುಂದೆ ನೆರೆದಿರುವ ಜನರು. ಇಂದು ಭವಾನಿ ರೇವಣ್ಣ ಪರವಾಗಿ ಸಂಸದರ ನಿವಾಸದ ಎದುರು ಧರಣಿ ನಡೆಸಿದ್ದ ನೂರಾರು ಮಹಿಳೆಯರನ್ನು ನೋಡಿದ್ರೆ ಇದೊಂದು ರೀತಿ ರಾಜಕೀಯದ ದೊಂಬರಾಟ ಎಂಬುವಂತೆ ಕಾಣಿಸಿದೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದರು.
ಸಂಸದರ ನಿವಾಸದೆದುರು ಮಹಿಳೆಯರ ದರಣಿಗೆ ಸೆಡ್ಡು ಹೊಡೆದು ಸ್ವರೂಪ್ ಪರ ನಿಂತ ಕಾರ್ಯಕರ್ತರು. ಭವಾನಿ ಪರ ಮಹಿಳಾ ಟೀಂ, ಸ್ವರೂಪ್ ಪರ ಪುರುಷ ರ ಟೀಂ ಫೈಟ್. ದಿನೇ ದಿನೆ ಬಂಡಾಯ ದ ಸ್ವರೂಪ ಪಡೆಯುತ್ತಿರೊ ಟಿಕೇಟ್ ದಂಗಲ್ ಆಗಿದೆ. ಇದೆ ವೇಳೆ ಸ್ವರೂಪ್ ಅವರು ಧರಣಿ ಮಾಡದಂತೆ ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.