ಹಾಸನ: ಅರಕಲಗೂಡು, ಅರೇಹಳ್ಳಿ, ಜವಗಲ್, ಪೆನ್‌ಷನ್ ಮೊಹಲ್ಲಾ ಹಾಗೂ ಬಾಣಾವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿ 14,81,000 ರೂ., ಮೌಲ್ಯದ 112 ಕೆಜಿ 299 ಗ್ರಾಂ ತೂಕದ ಗಾಂಜ ವಶ ಪಡಿಸಿಕೊಳ್ಳಲಾಗಿದೆ.
ಡ್ರಗ್ ಡೆಸ್ಟ್ರಾಯ್ ಕಮಿಟಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವೈಜನಿಕ ಘಟಕದಲ್ಲಿ, ವಶಪಡಿಸಿಕೊಂಡ ಗಾಂಜವನ್ನು ಇಂದು ನಾಶಪಡಿಸಲಾಗುವುದು.
ಅರಕಲಗೂಡು ಪೊಲೀಸ್ ಠಾಣೆ ಪ್ರಕರಣದಲ್ಲಿ ಪೇಪರ್ ಪ್ಲೇಟ್ ವರ್ಕ್ಸ್ ಬೀರಲಿಂಗೇಶ್ವರ ಎಣ್ಣೆ ಮಿಲ್ ಬಿಲ್ಡಿಂಗ್ ಕೋಟೆ ನಿವಾಸಿ ಹೃತ್ವಿಕ್ ಎಸ್.ಆರ್ ಎಂಬಾತನನ್ನು ಬಂಧಿಸಿ 13 ಸಾವಿರ ಬೆಲೆಯ 700ಗ್ರಾಂ. ಗಾಂಜ ವಶಪಡಿಸಿಕೊಳ್ಳಲಾಗಿದೆ.
ಅರೇಹಳ್ಳಿ ಪೊಲೀಸರು, ಅಸ್ಸಾ ಮೂಲದ ಮಹಮದ್ ಅಸಾದ್ದುಲ್ಲಾ ಇಸ್ಲಾಂ ಎಂಬಾತನನ್ನು ಬಂಧಿಸಿ 8 ಸಾವಿರ ಬೆಲೆಯ 65 ಗ್ರಾಂ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಅರಸೀಕೆರೆ ತಾಲೂಕು ಮುದ್ದನಹಳ್ಳಿ ಗ್ರಾಮದ ಅರುಣ್ ಎಂಬಾತನನ್ನು ಜವಗಲ್ ಪೊಲೀಸರು ಬಂಧಿಸಿ 10ಸಾವಿರ ಮೌಲ್ಯದ 700 ಗ್ರಾಂ. ಗಾಂಜ ಸೀಜ್ ಮಾಡಿದ್ದಾರೆ.
ಪೆನ್‌ಷನ್ ಮೊಹಲ್ಲಾ ಪೊಲೀಸರು ಒಂದು ಪ್ರಕರಣದಲ್ಲಿ ವಲ್ಲಾಭಾಯ್ ರಸ್ತೆ 2ನೇ ಕ್ರಾಸ್ ನಿವಾಸಿ ಇಮ್ರಾನ್ ಎಂಬಾತನನ್ನು ಬಂಧಿಸಿ 1.50 ಲಕ್ಷ ರೂ. ಬೆಲೆಯ 4ಕೆ.ಜಿ. 750 ಗ್ರಾಂ. ಗಾಂಜ ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬಾಣಾವರ ಪೊಲೀಸರು ಇದೇ ಹೋಬಳಿಯ ದೊಡ್ಡೇನಹಳ್ಳಿ ಗ್ರಾಮದ ಸಂತೋಷ ಎಂಬಾತನನ್ನು ಬಂಧಿಸಿ ಬರೋಬ್ಬರಿ 13 ಲಕ್ಷ ರೂ. ಬೆಲೆಯ 106 ಕೆ.ಜಿ. 84 ಗ್ರಾಂ ತೂಕದ ಗಾಂಜ ವಶ ಪಡಿಸಿಕೊಂಡು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.