ಹೊಳೆನರಸೀಪುರ: ತಾಲ್ಲೂಕು ಪಂಚಾಯಿತಿ, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ-ವಿಭಾಗ ಹೊಳೆನರಸೀಪುರ ಹಾಗೂ ಹಳೆಕೋಟೆ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಮಾವಿನಕೆರೆ ಗ್ರಾಮದಲ್ಲಿ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಜಲ ಜೀವನ್ ಮಿಷನ್ ಯೋಜನೆಯಡಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಯಾದ ಶ್ರೀಯುತ ಗೋಪಾಲ್ ರವರು ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯು ಗ್ರಾಮೀಣ ಭಾಗದ ಪ್ರತಿಯೊಬ್ಬ ವ್ಯಕ್ತಿಗೆ ೫೫.ಲೀ ನಂತೆ ಪ್ರತಿ ಕುಟುಂಬಕ್ಕೆ ಶುದ್ದ ನೀರು ಒದಗಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ಇದರ ಭಾಗವಾಗಿ ಗ್ರಾಮೀಣ ಭಾಗದ ಜನರಿಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಹಾಗೂ ನೀರಿನ ಮಿತಬಳಕೆ ಬಗ್ಗೆ ಅರಿವು ಮೂಡಿಸಲು ಯೊಜನೆಯ ಪೂರ್ಣ ಮಾಹಿತಿ ತಿಳಿಯಲು ಜಲ ಜೀವನ್ ಮಿಷನ್ ವಸ್ತು ಪ್ರದರ್ಶನದಿಂದ ಸಹಕಾರಿಯಾಗಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ೦೩ ದಿವಸಗಳ ಕಾಲ ವಸ್ತು ಪ್ರದರ್ಶನ ನಡೆಯಲಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು. ನೆರೆದಿದ್ದ ಗ್ರಾಮಸ್ಥರಿಗೆ ಹಣ್ಣಿನ ಗಿಡಗಳನ್ನು ವಿತರಸಿ ಗ್ರಾಮಸ್ಥರ ಕುಂದು ಕೊರತೆಯನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು.
ಹಳೆಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ ಸುರೇಶ್ ರವರು ಮಾತನಾಡಿ ಜಲ ಜೀವನ್ ಮಿಷನ್ ಯೊಜನೆಯಿಂದ ಗ್ರಾಮೀಣ ಭಾಗದ ಜನರ ನೀರಿನ ಭರ ನೀಗಿದಂತಾಗಿದೆ. ಪ್ರತಿಯೊಬ್ಬರಿಗೂ ಶುದ್ದ ನೀರು ಕುಡಿಯುವುದರಿಂದ ಜನರ ಆರೋಗ್ಯ ಸುಧಾರಣೆಯಾಗುತ್ತದೆ. ಈ ಯೋಜನೆಯು ಗ್ರಾಪಂ ಎಲ್ಲಾ ಗ್ರಾಮಗಳಲ್ಲಿ ಯೋಜನೆಯು ಅನುಷ್ಠಾನಗೊಂಡಿರುವ ಕುರಿತು ತಿಳಿಸಿದರು.
ಗ್ರಾಪಂ ಅಧ್ಯಕ್ಷರಾದ ಸೂರ್ಯಕುಮಾರ್ ಉಪಾಧ್ಯಕ್ಷರಾದ ಚನ್ನಮ್ಮ ಹಾಗೂ ದೇವಾಲಯ ಪ್ರಧಾನ ಅರ್ಚಕರಾದ ಜನಾರ್ಧನ್ ಪೂಜಾರಿ ಗ್ರಾಪಂ ಎಲ್ಲಾ ಗ್ರಾಮಗಳ ಚುನಾಯಿತ ಜನಪ್ರತಿನಿದಿಗಳು ಗ್ರಾಪಂ ಸಿಬ್ಬಂದಿಗಳು ಗ್ರಾಮಸ್ಥರು ಹಾಜರಿದ್ದರು. ಎಲ್ಲರಿಗೂ ಸಿಹಿ ವಿತರಿಲಾಯಿತು.
ಹೊಳೆನರಸೀಪುರ ತಾಲ್ಲೂಕು ಸಮುದಾಯ ಸಂಘಟಕರಾದ ಅರುಣ್ ಮಹೇಂದ್ರ ಹಾಗೂ ಶಾಂತರಾಜು ಕಾರ್ಯಕ್ರಮ ನೇತ್ರತ್ವ ವಹಿಸಿದರು.