ಬೇಲೂರು: ಬೆಂಕಿ ಅವಘಡಕ್ಕೆ ಭತ್ತದ ಹುಲ್ಲು ಹಾಗೂ ಅಡಿಕೆ ಗಿಡ ಸಂಪೂರ್ಣ ಭಸ್ಮಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಹುನುಗುನಹಳ್ಳಿ ಗ್ರಾಪಂ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದ ಚಂದ್ರೇಗೌಡ ಎಂಬುವರಿಗೆ ಸೇರಿದ ಸುಮಾರು ೪ ಎಕರೆ ಭತ್ತದ ಹುಲ್ಲಿಗೆ ಸಂಜೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದ್ದು ಪಕ್ಕದಲ್ಲಿ ಇದ್ದ ಅಡಿಕೆ ತೋಟಕ್ಕೂ ಸಹ ಬೆಂಕಿ ವ್ಯಾಪಿಸಿ ಸುಮಾರು ೧೦೦ ಅಡಿಕೆ ಗಿಡ, ಫಸಲಿಗೆ ಬಂದ ಬಾಳೆಗಿಡ ಸೇರಿದಂತೆ ಇನ್ನಿತರ ಕೃಷಿ ಪರಿಕರಗಳು ಬೆಂಕಿಗೆ ಆಹುತಿಯಾಗಿದೆ.
ವಿಷಯ ತಿಳಿದು ಗ್ರಾಮಸ್ಥರೆಲ್ಲಾ ಸೇರಿ ಬೆಂಕಿ ನಂದಿಸಲು ಹರ ಸಾಹಸಪಟ್ಟರು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾದರು.
ಗ್ರಾಪಂ ಉಪಾಧ್ಯಕ್ಷ ಹರೀಶ್ ಮಾತನಾಡಿ, ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಬೆಂಕಿ ವ್ಯಾಪಿಸುತ್ತಿದ್ದು ಬಡ ಕುಟುಂಬ ಕಷ್ಟ ಪಟ್ಟು ದುಡಿದ ಸುಮಾರು ೩ ಲಕ್ಷ ಮೌಲ್ಯದ ಭತ್ತದ ಹುಲ್ಲು ಸಂಪೂರ್ಣ ನಾಶವಾಗಿದೆ. ಫಸಲಿಗೆ ಬಂದಂತ ಅಡಿಕೆ, ಬಾಳೆ, ತೆಂಗು ಸೇರಿದಂತೆ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದ್ದು ಅವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.