ಬೇಲೂರು: ನಗರದ ಬಂಟೇನಹಳ್ಳಿ ಗ್ರಾಮದ ಶಿವಕುಮಾರ್ ಬಿ.ಆರ್ (೫೬) ಎಂಬ ವೀರ ಯೋಧ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿಳೆದಿದ್ದಾರೆ.
ನೆನ್ನೆ ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ ಬಳಿಕ ಶಿವಕುಮಾರ್ ರವರ ಪಾರ್ಥಿವ ಶರೀರವನ್ನು ಸ್ವಗ್ರಾಮವಾದ ಬಂಟೇನಹಳ್ಳಿ ಗ್ರಾಮಕ್ಕೆ ಬಾರತೀಯ ಸೇನಾ ಸಬ್ ಇನ್ಸ್ ಪೆಕ್ಟರ್ ನೇತೃತ್ವದ ತಂಡದೊಂದಿಗೆ ಆಗಮಿಸಿ,ಪಾರ್ಥಿವ ಶರೀರ ವನ್ನು ಶಿವಕುಮಾರ್ ಕುಟುಂಬಸ್ಥರಿಗೆ ರವಾನಿಸಲಾಯಿತು.
ನಂತರ ಸಾರ್ವಜನಿಕರಿಗೆ ಕೆಲ ಕಾಲ ಪಾರ್ಥೀವ ಶರೀರ ವನ್ನು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು,ತಾಲ್ಲೂಕು ದಂಢಾಧಿಕಾರಿ ರಮೇಶ್, ಹಾಗೂ ಶಾಸಕ ಕೆ.ಎಸ್.ಲಿಂಗೇಶ್,ಸರ್ಕಲ್ ಇನ್ಸ್‌ಪೆಕ್ಟರ್ ರವಿಕಿರಣ್,ಹಾಗೂ ಪೋಲೀಸ್ ಸಿಬ್ಬಂದಿ,ನಾಗೇಶ್.ಎ.ಎಸ್.ಐ. ಮುಖ್ಯಪೇದೆ ಸುರೇಶ್. ಶಾಂತ ಕುಮಾರ್ ಚೇತನ್.ಉಮೇಶ್ ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಇನ್ನೂ ಶಿವಕುಮಾರ್ ೧೯೯೪ ರಲ್ಲಿ ಸೇನೆಗೆ ಸೇರಿ,ಉತ್ತಮ ದೇಶ ಸೇವೆ ಮಾಡುವ ಜೊತೆಗೆ ಎಲ್ಲರ ಜೊತೆ ಉತ್ತಮ ಸಂಭಂದ ಇಟ್ಟುಕೊಂಡಿದ್ದರು ಎನ್ನಲಾಗಿದ್ದು, ಸ್ವಗ್ರಾಮವಾದ ಬಂಟೇನಹಳ್ಳಿಗ್ರಾಮದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.
ಶಿವಕುಮಾರ್ ರವರು, ಪತ್ನಿ ವಿಜಯಕುಮಾರಿ, ಶರತ್ ಹಾಗೂ ಅಮಿತ್ ಎಂಬ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.