ಹಾಸನ: ರಾಜ್ಯದಲ್ಲಿ ಮೊದಲ ಬಾರಿಗೆ ಕಸಿ ವಿನಿಮಯ ಅಥವಾ ಎರಡು ಕುಟುಂಬಗಳ ಜೋಡಿ ವಿನಿಮಯದ ವಿನೂತನ ವಿಧಾನದಿಂದ ಲಕ್ಷ್ಮಿ ಎಸ್. ಆಚಾರ್ಯ(೫೩) ಮತ್ತು ವಾಹನ ಚಾಲಕ ರುದ್ರ ಪ್ರಸಾದ್(೩೯) ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಪಡೆದು ಹೊಸ ಬದುಕು ಆರಂಭಿಸಲು ಸಾಧ್ಯವಾಗಿದೆ.
ಎರಡು ಕುಟುಂಬಗಳ ನಡುವೆ ಮಾನವೀಯ ಬೆಸುಗೆ ಮತ್ತು ಯಶಸ್ವಿ ಚಿಕಿತ್ಸೆ ಮೂಲಕ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಗೂ ಮತ್ತೊಂದು ಆಸ್ಪತ್ರೆಗಳು. ರೋಗಿಗಳ ಜೀವ ರಕ್ಷಣೆಗಾಗಿ ವಿಶೇಷ ಕಾರ್ಯವಿಧಾನ ಅನುಸರಿಸಲಾಗಿದೆ ಎಂದು ಬಿಜಿಎಸ್ ವೈದ್ಯರು ತಿಳಿಸಿದ್ದಾರೆ.
ಲಕ್ಷ್ಮಿ ಅವರಿಗೆ ಬಿಜಿಎಸ್ ನ ಮೂತ್ರಪಿಂಡ ಶಾಸ್ತ್ರಜ್ಞರು ಹಾಗೂ ಎಚ್‌ಒಡಿ ಡಾ. ಬಿ.ಟಿ. ಅನಿಲ್ ಕುಮಾರ್, ಹಿರಿಯ ಮೂತ್ರಶಾಸ್ತ್ರ ತಜ್ಞ ಸಲಹೆಗಾರರು ಮತ್ತು ಕಸಿ ಶಸ್ತ್ರಚಿಕಿತ್ಸಕ ಡಾ. ಎಸ್. ನರೇಂದ್ರ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದರೆ, ರುದ್ರಪ್ರಸಾದ್ ಅವರಿಗೆ ಅದೇ ದಿನ ಮತ್ತೊಂದು ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
ರುದ್ರ ಪ್ರಸಾದ್ ಅವರ ತಂದೆ ಶಿವಶಂಕರಪ್ಪ ಮತ್ತು ಲಕ್ಷ್ಮಿ ಅವರ ಪತಿ ಶ್ರೀಶಾ ಈ ಇಬ್ಬರ ಮೂತ್ರ ಪಿಂಡ ದಾನಿಗಳ ರಕ್ತದ ಗುಂಪಿನ ನಡುವೆ ಹೊಂದಾಣಿಕೆಯಾಗಿದ್ದರೂ ಮೂತ್ರಪಿಂಡ ಸ್ವೀಕರಿಸುವವರ ಸಕಾರಾತ್ಮಕ ಕ್ರಾಸ್ ಮ್ಯಾಚ್ ಫಲಿತಾಂಶ ಹೊಂದಾಣಿಕೆಯಾಗದ ಕಾರಣ ಅಂಗಾಂಗ ದಾನ ಸಾಧ್ಯವಾಗಿರಲಿಲ್ಲ. ಲಕ್ಷ್ಮಿ ಅವರು ಮೂತ್ರಪಿಂಡ ರೋಗದ ಕೊನೆಯ ಹಂತದ ಲ್ಲಿದ್ದರು. ಅವರ ಪತಿ ಅಂಗಾಂಗ ದಾನ ಮಾಡಲು ತೀರ್ಮಾ ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರನ್ನು ಕಸಿ ವಿನಿಮಯ ವ್ಯವಸ್ಥೆಯಡಿ ಶಸ್ತ್ರಚಿಕಿತ್ಸೆ ಮಾಡಲು ನಮ್ಮ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ಮೂರು ಆಯ್ಕೆಗಳಿದ್ದವು. ಒಂದು ಡಿಸೆನ್ಸಿಟೈಸೇಶನ್ ಚಿಕಿತ್ಸೆ ನಿರ್ವಹಿಸುವ ಮೂಲಕ ಅದೇ ದಾನಿಯೊಂದಿಗೆ ಮುಂದುವರೆಯು ವುದು, ಎರಡನೆಯದಾಗಿ ಹೊಂದಾಣಿಕೆಯಾಗುವ ಜೋಡಿಯನ್ನು ಪತ್ತೆ ಮಾಡುವುದು, ಮೂರನೆಯದಾಗಿ ಶವದ ಅಂಗಾಂಗ ಕಸಿಗಾಗಿ ನೋಂದಣಿ ಮಾಡುವ ಆಯ್ಕೆಗಳಿದ್ದವು. ಈ ಪ್ರಕ್ರಿಯೆ ಇನ್ನೂ ೩ ರಿಂದ ೫ ವರ್ಷ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಲಕ್ಷ್ಮಿ ಅವರು ಯಶಸ್ವಿಯಾಗಿ ಸಂವೇದನಾಶೀಲತೆ ಹೊಂದಲು ಸಾಧ್ಯವಾಗಿರಲಿಲ್ಲ, ಏಕೆಂದರೆ ಆಕೆ ಪತಿ ವಿರುದ್ಧ ಹಲವಾರು ಪ್ರತಿಕಾಯಗಳನ್ನು ಹೊಂದಿದ್ದರು. ಪ್ರತಿಕಾಯಗಳು ಕಡಿಮೆ ಪ್ರಮಾಣದಲ್ಲಿದ್ದಾಗ ಮಾತ್ರ ಡಿಸೆನ್ಸಿಟೈಸೇಶನ್ ಮಾಡಲು ಸಾಧ್ಯ. ಅದೃಷ್ಟವೆಂದರೆ ಮತ್ತೊಂದು ಆಸ್ಪತ್ರೆಯಲ್ಲಿ ಅಂತಹ ಇನ್ನೊಂದು ಜೋಡಿ ಇರುವುದು ತಿಳಿಯಿತು. ಅಲ್ಲಿನ ಮೂತ್ರಪಿಂಡ ಶಾಸ್ತ್ರಜ್ಞರ ಜೊತೆ ಎರಡೂ ಕುಟುಂಬಗಳನ್ನು ಭೇಟಿಯಾಗಿ ಚರ್ಚಿಸಿ ಒಪ್ಪಿಗೆ ಪಡೆದ ನಂತರ ಮೂತ್ರಪಿಂಡ ವಿನಿಮಯಕ್ಕೆ ಮುಂದಾದೆವು? ಎಂದು ತಿಳಿಸಿದ್ದಾರೆ.
ಎರಡು ಕುಟುಂಬಗಳ ನಡುವೆ ಕಸಿ ಮಾಡಲು ದಾನಿಗಳ ವಿನಿಮಯಕ್ಕಾಗಿ ಕರ್ನಾಟಕ ರಾಜ್ಯ ಸಮಿತಿಯ ಅನುಮೋದನೆ ಮತ್ತು ಮುಂದಾಲೋಚನೆಯ ಕ್ರಮದಿಂದ ಇದು ಸಾಧ್ಯವಾಯಿತು. ನಂತರ ೨೦೨೨ ಡಿ. ೨೧ ರಂದು ಯಶ ಸ್ವಿಯಾಗಿ ಕಸಿ ಮಾಡಲಾಯಿತು. ಈ ವಿಧಾನ ಕಷ್ಟಕರವಾಗಿದ್ದರೂ ಕಸಿ ಆಸಕ್ತ ದಾನಿಗಳನ್ನು ಹೊಂದಿರುವ ರೋಗಿಗಳಿಗೆ ಆಯ್ಕೆಗಳನ್ನು ಒದಗಿಸುತ್ತದೆ. ಡಯಾಲಿಸಸ್ ಅವಲಂಬಿತ ರೋಗಿಗಳಿಗೆ ಕಸಿ ಚಿಕಿತ್ಸೆ ಅತ್ಯುತ್ತಮವಾಗಿದೆ.
ಕಸಿ ನಂತರ ರೋಗಿಯ ಮಾಸಿಕ ವೆಚ್ಚ ?೧೦ ಸಾವಿರ ಇಳಿಕೆಯಾಗುವುದರಿಂದ ಜೀವನ ಮಟ್ಟ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ರೋಗಿಗಳು ಸೋಂ ಕಿನಿಂದ, ಜನಜಂಗುಳಿಯಿಂದ ದೂರ ಇದ್ದು, ನಿಯಮಿತ ಚಿಕಿತ್ಸೆ ಪಡೆಯುವಂತೆ ಪ್ರೋತ್ಸಾಹದೊರೆಯಲಿದೆ.
ಕರ್ನಾಟಕದಲ್ಲಿ ಅಂಗಾಂಗ ಕಸಿಗಾಗಿ ಒಂದು ಲಕ್ಷ ಮಂದಿ ಕಾಯುತ್ತಿದ್ದಾರೆ. ವರ್ಷಕ್ಕೆ ಸುಮಾರು ೧೦ ಸಾವಿರ ಮೂತ್ರಪಿಂಡ ಕಸಿ ಮಾಡಲಾಗಿದ್ದು, ಅಮೆರಿಕ ನಂತರ ಎರಡನೇ ಸ್ಥಾನದಲ್ಲಿದೆ. ೨೦೨೨ ರಲ್ಲಿ ೧೫೨ ಶವದ ಅಂಗಾಂಗ ದಾನ ಮಾಡಲಾಗಿದ್ದು, ತಮಿಳುನಾಡಿನ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಬೆಂಗಳೂರು ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಲಸ್ಟರ್ ಸಿಒಒ ಬಿಜು ನಾಯರ್ ಹೇಳು ವಂತೆ. ಜೀವಂತ ದಾನಿಯಿಂದ ಮೂತ್ರಪಿಂಡ ಕಸಿಗೆ ಅಗತ್ಯವಿರುವ ಅಂಶಗಳ ಹೊಂದಾಣಿಕೆಯನ್ನು ಪತ್ತೆ ಮಾಡುವ ಮತ್ತು ಜೋಡಿ ವಿನಿಮಯ ಕ್ರಮಗಳಿಂದ ಹೆಚ್ಚು ಅನುಕೂಲವಿದೆ. ಅಂಗಾಂಗ ದಾನಕ್ಕೆ ಸಜ್ಜಾಗಿರುವ ದಾನಿಗಳ ಮೂತ್ರಪಿಂಡ ಹೊಂದಾ ಣಿಕೆಯಾಗದ ಸಂದರ್ಭದಲ್ಲಿ ಇಂತಹ ವಿನೂತನ ಪ್ರಕ್ರಿಯೆಯಿಂದ ಸಮಯ ಉಳಿಸಬಹುದಾಗಿದೆ. ಮೂತ್ರಪಿಂಡ ವಿನಿಮಯದ ಬಗ್ಗೆ ಜನಜಾಗೃತಿಯಿಂದ ಹೆಚ್ಚಿನ ದಾನಿಗಳನ್ನು ಉತ್ತೇಜಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.
ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಲಸ್ಟರ್ ವೈದ್ಯಕೀಯ ನಿರ್ದೇಶಕರಾದ ಡಾ. ಸ್ಮಿತಾ ತಮ್ಮಯ್ಯ ಅವರು ಸಹಕಾರ ಮಹತ್ವವಾಗಿದೆ.