ಸಕಲೇಶಪುರ: ತಾಲೂಕು ಬೆಳಗೋಡು ಹೋಬಳಿ ಲಕ್ಕುಂದ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಇದ್ದು ಇಲ್ಲವಾಗಿದೆ. ಅಂಗನವಾಡಿ ಸುತ್ತಮುತ್ತ ಅಸ್ವಚ್ಛತೆ ತಾಂಡವಾಡುತ್ತಿದ್ದು ಸಾಂಕ್ರಾಮಿಕದ ಭೀತಿ ಎದುರಾಗಿದೆ.
ಮಕ್ಕಳಿಗೆ ಕುಳಿತುಕೊಳ್ಳಲು ವ್ಯವಸ್ಥಿತವಾಗಿ ಯಾವ ಮೂಲ ಸೌಲಭ್ಯಗಳು ಇಲ್ಲ.ಹೆಸರಿಗಷ್ಟೇ ವಿದ್ಯುತ್ ಸಂಪರ್ಕ.ಆದರೆ ಒಂದು ದಿನ ಕೂಡ ಬಳಕೆಗೆ ವಿದ್ಯುತ್ ಕನೆಕ್ಷನ್ ಕೊಟ್ಟಿರುವುದಿಲ್ಲ ಹಾಗೂ ಮಕ್ಕಳಿಗೆ ಕುಡಿಯಲು ನೀರಿನ ಫಿಲ್ಟರ್ ಇದೆ. ಆದರೆ ಆ ಫಿಲ್ಟರ್ ತೊಳೆದು ಎಷ್ಟು ವರ್ಷಗಳಾಯಿತು ಆ ದೇವರೇ ಬಲ್ಲ. ಆ ಫಿಲ್ಟರ್ ಕಥೆ ನೋಡಿದರೆ ಅಸಹ್ಯ ಎನಿಸುತ್ತದೆ. ದನ ಕರುಗಳಿಗೆ ಹಗ್ಗ ಕಟ್ಟಿದ ಹಾಗೆ ನೀರಿನ ಫಿಲ್ಟರ್ ಅನ್ನು ಕಿಟಕಿಗೆ ಹಗ್ಗದಲ್ಲಿ ನೇತು ಹಾಕಿ ಹಾಕಿದ್ದಾರೆ. ಹೀಗೆ ಮಾಡಿದರೆ ಇದನ್ನು ತೊಳೆಯಲು ಬಿಚ್ಚುವುದು ಹೇಗೆ ತೊಳೆಯುವುದು ಯಾವಾಗ? ಹೇಗೆ ಒಳ್ಳೆಯ ನೀರನ್ನು ಮಕ್ಕಳಿಗೆ ಕುಡಿಸುತ್ತಾರೆ ಎಂದು ಕಣ್ಣಾರೆ ಮೇಲಾಧಿಕಾರಿಗಳು ಹಾಗೂ ಅಲ್ಲಿಯ ಸ್ಥಳೀಯ ಜನಪ್ರತಿನಿಧಿಗಳು ಗಮನಿಸಬೇಕಾಗಿದೆ.
ಈ ಅಂಗನವಾಡಿಯಲ್ಲಿ ವರ್ಷವಿಡಿ ಮಕ್ಕಳು ಅಂಗನವಾಡಿಗೆ ಬರುವುದಿಲ್ಲ ಎಂದು ಸಾರ್ವಜನಿಕರ ದೂರು. ಅಂಗನವಾಡಿ ಸಿಬ್ಬಂದಿಯನ್ನು ಕೇಳಿದರೆ ಇವತ್ತು ಮಾತ್ರ ಅಂಗನವಾಡಿಗೆ ಮಕ್ಕಳು ಬಂದಿರುವುದಿಲ್ಲ. ಪ್ರತಿದಿನ ಐದು ಮಕ್ಕಳು ಬರುತ್ತಾರೆ ಆದರೆ ಇಂದು ಅಕ್ಕ ಪಕ್ಕದಲ್ಲಿ ಜಾತ್ರಾಮಹೋತ್ಸವ ಇರುವುದರಿಂದ ಮಕ್ಕಳನ್ನು ಅವರ ಕುಟುಂಬದವರು ಜಾತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಮತ್ತೊಮ್ಮೆ ಅಂಗನವಾಡಿಯಲ್ಲಿ ತುಂಬಾ ಕೆಲಸ ಇದ್ದ ಕಾರಣ ನಾನೇ ಇವತ್ತು ಅಂಗನವಾಡಿಗಿ ಮಕ್ಕಳನ್ನು ಬರಬೇಡಿ ಎಂದು ಅಂಗನವಾಡಿ ಶಿಕ್ಷಕಿ ಮಾತನಾಡುವುದನ್ನು ಗಮನಿಸಿದರೆ ಇಲ್ಲಿಯ ಅಂಗನವಾಡಿ ಹೆಸರಿಗಷ್ಟೆ ಉಪಯೋಗಕ್ಕೆ ಅಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ಸರಿಯಾದ ರೀತಿಯಲ್ಲಿ ಆಹಾರ ವಿತರಣೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ. ಆದ್ದರಿಂದ ಮೇಲಾಧಿಕಾರಿಗಳು ಕೂಡಲೇ ಇಲ್ಲಿಗೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಬೇಜವಾಬ್ದಾರಿ ಶಿಕ್ಷಕಿಯನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂಬುವುದು ಸ್ಥಳೀಯ ಒತ್ತಾಯವಾಗಿದೆ.