ಹಾಸನ : ಶಿವರಾತ್ರಿ ದಿನವೇ ಹಾಸನ ಜೆಡಿಎಸ್ ಟಿಕೆಟ್ ಫೈನಲ್ ಆಗುತ್ತಾ..? ಹಾಸನಕ್ಕೆ ಫಾರ್ಮುಲಾ ರೆಡಿ ಮಾಡಿದ್ರಾ ದಳಪತಿಗಳು.. ಜೆಡಿಎಸ್ ಆಂತರಿಕ ವಲಯದಲ್ಲಿ ಭರ್ಜರಿ ಚರ್ಚೆ ನಡೆದಿದೆ. ಫೆಬ್ರವರಿ ೧೮ರಂದು ಗೌಡರ ಫ್ಯಾಮಿಲಿಯಿಂದ ಫೈನಲ್ ನಿರ್ಧಾರವಾಗಲಿದೆ.
ಶಿವರಾತ್ರಿ ಹಬ್ಬದ ನೆಪದಲ್ಲಿ ಕುಟುಂಬದ ಜೊತೆ ಹೆಚ್‌ಡಿಕೆ ಸಭೆ ನಡೆಸಲಾಗುತ್ತದೆ. ಹಾಸನ ಟಿಕೆಟ್‌ಗೆ ಭವಾನಿ ರೇವಣ್ಣ, ಡಾ.ಸ್ವರೂಪ್ ಪಟ್ಟು ಹಿಡಿದಿದ್ದಾರೆ. ಹೀಗಾಗಿ ರೇವಣ್ಣ ಅವರನ್ನೇ ಕಣಕ್ಕಿಳಿಸೋ ಸೂತ್ರ ರೆಡಿಯಾಗಿದೆ. ರೇವಣ್ಣ ಎರಡು ಕ್ಷೇತ್ರ ಆಯ್ಕೆ ಮಾಡಿಕೊಳ್ತಾರಾ, ೨೦೧೮ರಲ್ಲಿ ಹೆಚ್‌ಡಿಕೆ ಹೂಡಿದ್ದ ಸೂತ್ರ ಅನುಸರಿಸ್ತಾರಾ ರೇವಣ್ಣ..
ಕುಮಾರಸ್ವಾಮಿ ಚನ್ನಪಟ್ಟಣ, ರಾಮನಗರದಲ್ಲಿ ನಿಂತಿದ್ದರು. ಹೊಳೆನರಸೀಪುರ, ಹಾಸನ ಕ್ಷೇತ್ರದಿಂದ ರೇವಣ್ಣ ನಿಲ್ಲಿಸಲು ಚಿಂತನೆ ಮಾಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ, ಒಐಅ ಸೂರಜ್ ರೇವಣ್ಣ ಸಲಹೆ ನೀಡಿದ್ದು, ಎರಡು ಕ್ಷೇತ್ರದ ಪ್ಲಾನ್‌ಗೆ ಹೆಚ್‌ಡಿಕೆ ಸಮ್ಮತಿ ನೀಡಿರೋ ಮಾಹಿತಿಯಿದೆ.
ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಹೊಳೆನರಸೀಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಭವಾನಿ ರೇವಣ್ಣರನ್ನು ಬೈ ಎಲೆಕ್ಷನ್‌ನಲ್ಲಿ ನಿಲ್ಲಿಸೋ ತಂತ್ರಗಾರಿಕೆ ಮಾಡಿದ್ದು, ರೇವಣ್ಣ, ಭವಾನಿ, ಪ್ರಜ್ವಲ್, ಸೂರಜ್ ಜತೆ ಫೆ.೧೮ರಂದು ಹೆಚ್‌ಡಿಕೆ ಚರ್ಚೆ ನಡೆಸಲಿದ್ದಾರೆ.
ಬಿಜೆಪಿ ಶಾಸಕ ಪ್ರೀತಂಗೌಡ ಪಂಥಾಹ್ವಾನಕ್ಕೆ ದಳಪತಿಗಳು ರೆಡಿಯಾಗಿದ್ದು,ಸೋದರರು ತಂದೆ ರೇವಣ್ಣ ಗೆಲುವಿಗಾಗಿ ಹಾಸನದಲ್ಲೇ ಬೀಡು ಬಿಟ್ಟಿದ್ದಾರೆ. ಈ ಎಲೆಕ್ಷನ್‌ನಲ್ಲೇ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಕಷ್ಟವಾಗಿದೆ. ಕುಟುಂಬ ರಾಜಕಾರಣ ಅನ್ನೋ ಅಸ್ತ್ರ ಬಳಕೆಯಾಗುತ್ತೆ. ಹೀಗಾಗಿ ದಳಪತಿಗಳು ಡಬಲ್ ಕ್ಷೇತ್ರದ ಸೂತ್ರ ಹೆಣೆದಿದ್ದಾರೆ.