ಹಾಸನ: ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಯಾರೆ ಬಂದರೂ ಹೈಕಾಂಮಂಡ್ ಗಮನಕ್ಕೆ ತಂದು ನಂತರ ಸೇರ್ಪಡೆ ಮಾಡುವ ಕೆಲಸ ಮಾಡಲಾಗುವುದು. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ 140ಕ್ಕೂ ಹೆಚ್ಚು ಸ್ಥಾನಗಳು ಕಮಲಕ್ಕೆ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ವಿಶ್ವಾಸವ್ಯಕ್ತಪಡಿಸಿದರು.
ನಗರದ ಬಿ.ಎಂ. ರಸ್ತೆ ಬಳಿ ಶ್ರೀಕೃಷ್ಣ ಹೋಟೆಲ್ ಹಿಂಬಾಗದ ಮೈದಾನದಲ್ಲಿ ನಡೆಯುವ ಬಿಜೆಪಿ ಪ್ರಮುಖ ಸಭೆಯ ಸಿದ್ಧತೆ ಬಗ್ಗೆ ವೀಕ್ಷಣೆ ಮಾಡಿ ಪರಿಶೀಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರ್ಪಡೆ ಕುರಿತು ವದಂತಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನಮ್ಮದು ರಾಷ್ಟ್ರೀಯ ಪಕ್ಷ ಆಗಿರುವು ದರಿಂದ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು, ಕೋರ್ ಕಮಿಟಿ ಇದೆ. ಆ ಕಾಲಕ್ಕೆ ಏನುಬೇಕೋ ಸರಿಯಾದ ನಿರ್ಧಾರವನ್ನು ತಗೊತರೆ. ನನ್ನ ಗಮನಕ್ಕೂ ಬಂದರು ಅದನ್ನು ಹೈಕಮಾಂಡ್‌ಗೆ ಹೊತ್ತು ಹಾಕುವುದು ನನ್ನ ಕರ್ತವ್ಯ. ಏನಿದೆ ವಾಸ್ತವ ಸ್ಥಿತಿ ಅನ್ನೋದನ್ನ ತಿಳಿಸುವ ಕೆಲಸ ಮಾಡುತ್ತೇನೆ. ಗೆಲ್ಲುವ ಸಮರ್ಥ ಅಭ್ಯರ್ಥಿ ಯಾರೇ ಪಕ್ಷಕ್ಕೆ ಬಂದ್ರು ಕರೆದುಕೊಳ್ಳುತ್ತೇವೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಜೆ.ಪಿ. ನಡ್ಡಾ ಅವರ ಕಾರ್ಯಕ್ರಮದಲ್ಲಿ ಯಾರ ಸೇರ್ಪಡೆಯೂ ಇರುವುದಿಲ್ಲ.
ಯಾರೇ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಯಾರೇ ಬಂದರು ಪಕ್ಷಕ್ಕೆ ಸೇರ್ಪಡೆ ಮಾಡುವ ಕೆಲಸ ಮಾಡುತ್ತೇವೆ.
ಅದನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ, ಹೈಕಮಾಂಡ್ ತೀರ್ಮಾನ ಮಾಡಲಾಗುವುದು. ಮುಂದಿನ ದಿನಗಳಲ್ಲಿ ನೋಡಿ ಬಹಳಷ್ಟು ಜನ ಬಿಜೆಪಿ ಪಕ್ಷಕ್ಕೆ ಬರುತ್ತಾರೆ. ಹಾಸನ ಜಿಲ್ಲೆಯ ಬೇರೆ ಬೇರೆ ಕಡೆಯಿಂದಲೂ ನಮ್ಮ ಪಕ್ಷಕ್ಕೆ ಬರ್ತಾರೆ. ನಮ್ಮ ಗುರಿ ೧೪೦ ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬುದಾಗಿದ್ದು, ಹಾಸನ ಜಿಲ್ಲೆಯಲ್ಲಿ ನಾಲ್ಕೈದು ಸ್ಥಾನ ಗೆಲ್ಲಬೇಕು. ಈ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಎಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಕಲೇಶರದಲ್ಲಿ ಕಾಡ್ಗಿಚ್ಚಿಗೆ ಫಾರೆಸ್ಟ್ ಗಾರ್ಡ್ ಸಾವು ಪ್ರಕರಣವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈಗಾಗಲೇ ವಿಚಾರ ತಿಳಿದುಕೊಂಡಿದ್ದೇನೆ. ಅಧಿಕಾರಿಗಳ ಜೊತೆ ಮಾತನಾಡಿದ್ದು, ಅದು ಆಗಬಾರದಿತ್ತು, ಅಲ್ಲಿಗೆ ಹೋದಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಡ್ಗಿಚ್ಚು ಅವರನ್ನೇ ಆವರಿಸಿಕೊಂಡಿದೆ.
ಇದರಲ್ಲಿ ಯಾರದ್ದು ನಿರ್ಲಕ್ಷ ಇಲ್ಲಾ. ಅವರೆಲ್ಲರೂ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರು. ಆಕಸ್ಮಿಕವಾಗಿ ಮುಂ ಜಾಗ್ರತಾ ಕ್ರಮ ಮರೆತು ಹೋಗಿರುವುದರಿಂದ ಕಾಡ್ಗಿಚ್ಚು ಅವರನ್ನು ಸುತ್ತುವರಿದಿರುವುದರಿಂದ ಆ ರೀತಿ ದುರ್ಘಟನೆ ನಡೆದಿದೆ. ಅವರು ಸರ್ಕಾ ರಿ ನೌಕರರಾಗಿರುವುದರಿಂದ ಅವರ ಪತ್ನಿಗೆ ಸರ್ಕಾರಿ ಕೆಲಸ ಕೊಡಬೇಕು. ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆ ಅದೆನ್ನೆಲ್ಲಾ ಕೊಡುವಂತಹ ಕೆಲಸ ಮಾಡುತ್ತೇವೆ ಎಂದರು. ಅವರ ಕುಟುಂಬಕ್ಕೆ ಉದ್ಯೋಗ ಕೊಡಲು ಅರಣ್ಯ ಇಲಾಖೆಯಲ್ಲಿ ಅವಕಾಶವಿದ್ದು, ಆದಷ್ಟು ಬೇಗ ಮೇಲಾಧಿಕಾರಿಗಳಿಗೆ ಸೂಚನೆ ಕೊಟ್ಟು, ಕೆಲಸ ಕೊಡಲು ಹೇಳಲಾಗುವುದು ಎಂದರು.
ಮಂಡ್ಯ ಉಸ್ತುವಾರಿ ಗೊಂದಲ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಗೊಂದಲ ಏನಿಲ್ಲ, ಅಶೋಕಣ್ಣ, ಕಂದಾಯ ಸಚಿವರನ್ನೇ ಮೊದಲು ಮುಖ್ಯಮಂತ್ರಿಗಳು ನೇಮಕ ಮಾಡಿದ್ರು. ಅವರ ಕಾರ್ಯ ಒತ್ತಡದಿಂದ ಅವರು ಹೋಗಿರಲಿಲ್ಲ. ನನ್ನನ್ನು ಕೆಲವು ದಿನ ಇರಲು ಹೇಳಿದ್ದರು.
ನಾನಿದ್ದಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಯಾವ ರೀತಿ ಎಲ್ಲರ ಜೊತೆ ಬೆರೆತಿದ್ದೆ, ಅಲ್ಲಿಯೂ ಸಹ ಬೆರಿತಿದ್ದೆ. ನಮ್ಮಲ್ಲಿ ಇರುವ ಎಲ್ಲರೂ ಸಮರ್ಥರೇ. ಹಿಂದೆ ನಾರಾಯಣ ಗೌಡರು ಇದ್ದರು, ಅಶೋಕ್ ಅವರು ಬಿಜೆಪಿ ಯಲ್ಲಿ ಹಿರಿಯರು, ನಮಗಿಂತ ದೊಡ್ಡವರು, ದೊಡ್ಡದಾದ ಕಂದಾಯ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕಂದಾಯ ಇಲಾಖೆಯಲ್ಲಿ ಹಲವಾರು ಬದಲಾವಣೆ ತಂದಿದ್ದಾರೆ ಎಂದರು.
ನಾನಲ್ಲ, ಪಕ್ಷದಲ್ಲಿ ಪ್ರತಿಯೊಬ್ಬರು ಸಮರ್ಥರಾಗಿದ್ದಾರೆ. ನಾನೇ ಸ್ವತಃ ಒಂದು ಜಿಲ್ಲೆ ಸಾಕು ಅಂತ ಕೇಳಿದ್ದೆ, ನಾನು ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಲ್ಲಿ ಯಾರ ಬೇಕಾದ್ರನೂ ನಿರ್ವಹಿಸಬೇಕಾದ ಶಕ್ತಿಯಿದೆ ನಮ್ಮ ಪಕ್ಷದಲ್ಲಿ ಸಚಿವ ಸಂಪುಟದ ಎಲ್ಲಾ ಸಚಿವರು ಸಮರ್ಥರದ್ದಾರೆ ಎಂದು ಸಮರ್ಥಿಸಿಕೊಂಡರು.
ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ. ಸುರೇಶ್, ನಗರಸಭೆ ಅಧ್ಯಕ್ಷ ಆರ್. ಮೋಹನ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಕಿರಣ್, ಮಾದ್ಯಮ ವಕ್ತಾರ ಐನೆಟ್ ವಿಜಿಕುಮಾರ್, ಎಸ್.ಡಿ. ಚಂದ್ರು ಇತರರು ಉಪಸ್ಥಿತರಿದ್ದರು.