ಸಕಲೇಶಪುರ: ತಾಲೂಕು ವ್ಯಾಪ್ತಿಯ ಹಿರಿಯೂರು ಗುಡ್ಡದ ಮೇಲೆ ಪತ್ತೆಯಾದ ಜೈನ ಬಸದಿಗೆ ಹಾಸನ ಪ್ರಾಚ್ಯ ವಸ್ತು ಸಂಗ್ರಹಾಲಯದ ಅಧಿಕಾರಿ ಕ್ಲೂ ರೈಟರ್ ಕುಮಾರ್ ಭೇಟಿ ನೀಡಿ ಕುರುಹುಗಳನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಜೈನ ಬಸದಿ ಪರಿಶೀಲಿಸಿದ ನಂತರ ಮಾತನಾಡಿದ ಕ್ಲೂ ರೈಟರ್ ಕುಮಾರ್ ಈ ಬಸದಿ ತುಂಬಾ ಪುರಾತನವಾದದ್ದಾಗಿದ್ದು, ಜೀರ್ಣೋದ್ದಾರವದರೆ ಕಂಡಿತಾ ಒಳ್ಳೆಯ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಸಂಬಂಧ ಪಟ್ಟ ಮೇಲಾಧಿಕಾರಿಗಳಿಗೆ ಕೊಡುವ ಮೂಲಕ. ಆದಷ್ಟು ಬೇಗ ಜೀರ್ಣೋದ್ಧಾರಕ್ಕೆ ಮುನ್ನುಡಿ ಬರೆಯಲಾಗುವುದು ಎಂದರು.
ಭೇಟಿ ಕೊಟ್ಟ ಅಧಿಕಾರಿಗಳಿಗೆ ಗ್ರಾ.ಪಂ ಪಿಡಿಒ ಸುರೇಶ್ ಹಾಗೂ ಕಾರ್ಯದರ್ಶಿ ನಾಗೇಶ್, ಅಧ್ಯಕ್ಷ ರೇಣು ಕುಮಾರ್, ಗ್ರಂಥಪಾಲಕ ಮೂರ್ತಿ, ಗ್ರಾಮ ಅಭಿವೃದ್ಧಿ ಸದಸ್ಯರುಗಳಾದ ಸತೀಶ್ ಹಾಗೂ ನಾಗರಾಜ್ ಸ್ಥಳದಲ್ಲಿ ಇದ್ದು ಮಾಹಿತಿ ನೀಡಿದ್ದಾರೆ.