ಹಾಸನ: ಪ್ರಧಾನಿ ಮೋದಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು “ರಬ್ಬರ್ ಸ್ಟಾಂಪ್” ಎಂದು ಜರಿದಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾತ್ಮ ಗಾಂಧಿ, ಜಗಜೀವನ್ ರಾಮ್, ರಾಜೀವ್ ಗಾಂಧಿ ಸೆರದಂತೆ ಇತರ ಮಹನಾಯಕರು ಅಲಂಕರಿಸಿದ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ ಅವರು ನಿರ್ವಹಿಸುತ್ತಿದ್ದಾರೆ. ಅಂತಹ ವ್ಯಕ್ತಿಯ ವಿರುದ್ಧ ನರೇಂದ್ರ ಮೋದಿ ಅವರ ಇಂತಹ ಹೇಳಿಕೆ ಸರಿಯಲ್ಲ ಎಂದರು .
೧೯೭೨ ರಿಂದ ಇಲ್ಲಿಯವರೆಗೆ ಸಂಸದೀಯ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ನಾಯಕರಾಗಿ ಕಾರ್ಯನಿರ್ವಹಿ ಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಮರ್ಥವಾಗಿ ನಿರ್ವಹಿಸು ತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯದ ಅಡಿ ಕಾರ್ಯ ನಿರ್ವಹಿಸುತ್ತಿದ್ದು ಓರ್ವ ದಲಿತ ನಾಯಕನ ವಿರುದ್ಧ ಇಂತಹ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮೋದಿ ಅವರ ಇಂತಹ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವ ರೀತಿಯಲ್ಲಿ ಇದೆ. ಇತ್ತೀಚಿನ ಒಂದು ಕಾರ್ಯಕ್ರಮದಲ್ಲಿ ಬಿಸಿಲಿನ ತಾಪದ ಕಾರಣ ಸೋನಿಯಾ ಗಾಂಧಿ ಅವರಿಗೆ ಛತ್ರಿ ಹಿಡಿದಿದ್ದನ್ನೇ ನೆಪವಾಗಿಸಿಕೊಂ ಡು ಟೀಕಿಸುವುದು ಸರಿಯಲ್ಲ , ನಾಯಕತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದಂತಹ ಕುಟುಂಬ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಯನ್ನು ನೀಡಿ ಸರಳತೆ ಮೆರೆದಿದ್ದಾರೆ. ಪಕ್ಷವು ಇಂತಹ ಯಾವುದೇ ಹೇಳಿಕೆಗಳನ್ನು ಖಂಡಿಸುತ್ತದೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರು ಮುನ್ಸಿಪಾಲ್ ಸದಸ್ಯರಾಗಿ, ೯ ಬಾರಿ ಶಾಸಕರಾಗಿ ಎರಡು ಬಾರಿ ಸಂಸದರು, ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದವರು, ಒರ್ವ ದಲಿತ ರಾಷ್ಟ್ರೀಯ ನಾಯಕನಾಗಿ ಬೆಳೆದಿರುವ ಅವರನ್ನು ಅವಹೇಳನ ವಾಗಿ ಮಾತನಾಡಿರುವುದು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಓರ್ವ ದಲಿತ ನಾಯಕನ ಬಗ್ಗೆ ಈ ರೀತಿ ಟೀಕಿಸುವುದು ಸರಿಯಲ್ಲ, ಅಗೌರವ ತರುವಂತಹ ಹೇಳಿಕೆಗಳನ್ನು ಮೋದಿ ಅವರು ಹೇಳಿದ್ದು ಸರಿಯಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿ ಯಾಗಿದೆ ಏಳನೇ ವೇತನ ಆಯೋಗ ಸರ್ಕಾರಿ ನೌಕರರ ಅರ್ಹರಾಗಿದ್ದಾರೆ. ಬಿಜೆಪಿಯವರು ಮಾತು ಕೊಟ್ಟಿದ್ದರು ಅದನ್ನು ನೆರವೇರಿಸಲು ವಿಫಲರಾಗಿ ದ್ದಾರೆ. ನಾವು ಆ ನೌಕರರ ಪರವಾಗಿ ಸಹಮತವನ್ನು ವ್ಯಕ್ತಪಡಿಸುತ್ತೇವೆ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ ೭ನೇ ವೇತನ ಆಯೋಗ ಸೇರದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲಿದ್ದೇವೆ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು .
ಕಾಂಗ್ರೆಸ್ ಪಕ್ಷ ಖಂಡಿತವಾಗಿ ಯೂ ಅಧಿಕಾರಕ್ಕೆ ಬರಲಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ, ಯಾರ ಬೆಂಬಲವಿಲ್ಲದೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಈ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು ಎಲ್ಲ ಇಲಾಖೆಗಳಲ್ಲಿಯೂ ಭ್ರಷ್ಟಾಚಾರವಿದೆ ಎಂದು ಆರೋಪಿಸಿದರು.
ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕೆ ಪಟ್ಟಿ ಬಿಡುಗಡೆ
ಕಾಂಗ್ರೆಸ್ನ ಅಭ್ಯರ್ಥಿಗಳ ಪಟ್ಟಿಯು ಮಾರ್ಚ್ ೭ ಮತ್ತು ೮ನೇ ತಾರೀಕಿನಂದು ಪಕ್ಷದ ಸ್ಕ್ರೀನಿಂಗ್ ಕಮಿಟಿಯ ಸಭೆಯ ಬಳಿಕ ಪ್ರಕಟಿಸಲಾ ಗುವುದು ಈಗಾಗಲೇ ೧೫೮ ಮಂದಿಯ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ.
“ಯೂಸ್ ಅಂಡ್ ಥ್ರೋ” ಸಂಸ್ಕೃತಿ
ಮೋದಿ ಅವರು ಯಡಿಯೂರಪ್ಪ ಅವರ ಮೇಲೆ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದಾರೆ ಇದುವರೆಗೆ ಬೊಮ್ಮಾಯಿ ನೇತೃತ್ವದಲ್ಲಿ ಎಲೆಕ್ಷನ್ ಎಂದು ಹೇಳುತ್ತಿದ್ದರು ಇದೀಗ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳುತ್ತಿದ್ದಾರೆ ಯೂಸ್ ಅಂಡ್ ಥ್ರೋ ಬಿಜೆಪಿಯ ಮೂಲ ಧ್ಯೇಯವಾ ಗಿದೆ. ಬೊಮ್ಮಾಯಿ ಅವರು ಇದ್ದರೂ ಕೂಡ ಅವರನ್ನು ನಾಯಕರೆಂದು ಯಾರು ಒಪ್ಪುತ್ತಿಲ್ಲ ಕೇಂದ್ರದವರು ಬಂದು ಇಲ್ಲಿ ಎಲೆಕ್ಷನ್ ಮಾಡಲು ಸಾಧ್ಯವಿಲ್ಲ, ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಿ ಕಳಂಕಿತ ರಾಜ್ಯವನ್ನು ಅಭಿವೃದ್ಧಿ ರಾಜ್ಯವನ್ನಾಗಿ ಮಾಡಲಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಇದುವರೆಗೆ ರಾಜ್ಯದ ಜನರನ್ನು ದ್ವಂದ್ವದಲ್ಲಿ ಇಟ್ಟು ಆಡಳಿತ ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳನ್ನು ಜನರು ತಿರಸ್ಕರಿಸಲಿದ್ದಾರೆ.
ಇನ್ನು ೩೦ ದಿನ ಕಳೆದರೆ ಬಿಜೆಪಿ ಸರ್ಕಾರದ ಆಡಳಿತ ಮುಗಿಯಲಿದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ರಾಜ್ಯವು ಅಭಿವೃದ್ಧಿಯ ಶೀಲಾ ರಾಜ್ಯವಾಗಿ ಉಳಿಯಲಿದೆ ಎಂದರು. ಕೋವಿಡ್ ಆತಂಕದ ಸಂದರ್ಭ ಸೇರಿದಂತೆ ರೈತರು ತೊಂದರೆ ಅನುಭವಿಸಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ ಬರದ ಪ್ರಧಾನಿ ಮೋದಿ ಅವರು ಇಂದು ಕೇವಲ ಚುನಾವಣೆ ಪ್ರಚಾರಕ್ಕೋಸ್ಕರ ಬರುತ್ತಿದ್ದಾರೆ ಎಂದು ಟೀಕಿಸಿದ ಅವರು ತಮ್ಮ ಪಕ್ಷದ ಸಚಿವರಾದ ಸುರೇಶ್ ಅಂಗಡಿ ಅವರ ಶವವನ್ನು ಅವರ ಮನೆಯವರಿಗೆ ಕೊಡಲಿಲ್ಲ ಈ ಸರ್ಕಾರಕ್ಕೆ ಕಿವಿ ಕಣ್ಣು, ಹೃದಯ ಇಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ನೀಡಿದ ೬೦೦ ಭರವಸೆಯಲ್ಲಿ ಕೇವಲ ೫೦ ಭರವಸೆ ಮಾತ್ರ ಈಡೇರಿಕೆ ಮಾಡಿದ್ದಾರೆ ಎಂದು ಟೀಕಿಸಿದ ಅವರು ಪ್ರಧಾನಿ ನರೇಂದ್ರ ಮೋದಿ ನಿಜಲಿಂಗಪ್ಪ ವಿಚಾರ ಮಾತನಾಡುವುದಕ್ಕಿಂತ ಮುಂಚೆ ಲಾಲಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಷಿ , ಯಾರೂ ಅವರಿಂದ ಮೇಲೆ ಬಂದು ಅವರಿಗೆ ಏನು ಮಾಡಿದರು ಮೊದಲು ಆ ಬಗ್ಗೆ ತಿಳಿಸಲಿ ಎಂದರು .
ವೀರೇಂದ್ರ ಪಾಟೀಲ್ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಸಹಕಾರ ಮಾಡಿದೆ. ವೀರಶೈವ ಲಿಂಗಾಯತರ ಮತ ಪಡೆಯಲು ಪ್ರಧಾನಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದನ್ನೆಲ್ಲ ಬಿಟ್ಟು ಮೋದಿಯವರು ಉದ್ಯೋಗ ಆದಾಯ ಹೆಚ್ಚಳದ ಬಗ್ಗೆ ಮಾತನಾಡಲಿ, ಭಾವನಾತ್ಮಕ ಮಾತುಗಳನ್ನು ನೀಲ್ಲಿಸಲಿ ಎಂದರು.
ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಲ್ಲಿಸಿದರೆ ೨೦೦ ಯೂನಿಟ್ ಉಚಿತ ವಿದ್ಯುತ್ ಬಿಪಿಎಲ್ ಕಾರ್ಡ್ ದಾರರಿಗೆ ನೀಡಬಹುದು ಆದರೆ ನಮ್ಮ ಪ್ರಣಾಳಿಕೆಯನ್ನು ಬಿಜೆಪಿ ಟೀಕಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಧ್ರುವನಾರಾಯಣ್, ಮಾಜಿ ಸಚಿವ ಎಚ್ ಎಂ ರೇವಣ್ಣ, ಕಾಂಗ್ರೆಸ್ ಜಿಲ್ಲೆ ಘಟಕದ ಅಧ್ಯಕ್ಷ ಲಕ್ಷ್ಮಣ್, ರಾಜ್ಯಸಭಾ ಮಾಜಿ ಸದಸ್ಯ ಎಚ್ ಕೆ ಜವರೇಗೌಡ, ಮಾಧ್ಯಮ ವಕ್ತಾರ ದೇವರಾಜೇಗೌಡ, ಮುನಿಸ್ವಾಮಿ ಇತರರು ಇದ್ದರು.
ಕಾಂಗ್ರೆಸ್ ಸೇರ್ಪಡೆ: ನಿರ್ಧಾರ ಅವರಿಗೆ ಬಿಟ್ಟಿದ್ದು
ರಾಜಕೀಯದಲ್ಲಿ ಚರ್ಚೆ ನಡೆಯುವುದು ಸಾಮಾನ್ಯ ನಾನು ಎ ಮಂಜು ಜೊತೆ ಮಾತನಾಡಿದ್ದು ಚುನಾವಣೆ ಕೇಸ್ ಹೈಕೋರ್ಟ್ ನಲ್ಲಿ ಇರುವುದರಿಂದ ಮಂಜು ಅವರಿಗೆ ಜೆಡಿಎಸ್ ನವರು ಟಿಕೆಟ್ ಘೋಷಣೆ ಮಾಡಿದ್ದಾರೆ . ರೇವಣ್ಣ ಮತ್ತು ಅವರ ಮಕ್ಕಳು ಮಂಜು ಜೊತೆ ಮಾತನಾಡುತ್ತಿದ್ದಾರೆ ಈ ನಡುವೆ ಜೆಡಿಎಸ್ ಪಕ್ಷದ ಟಿಕೆಟ್ ಮಂಜು ಅವರಿಗೆ ಘೋಷಣೆ ಮಾಡಿದ್ದಾರೆ. ಮಂಜು ನನ್ನ ಸ್ನೇಹಿತ ನಾನು ಪಕ್ಷದ ಅಧ್ಯಕ್ಷನಾಗಿ ಅವರ ಜೊತೆ ಮಾತನಾಡಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸುರ್ಜೆವಾಲಾ ಜೊತೆಯೂ ಸಹ ಮಾತುಕತೆ ಮಾಡಿರುವ ಫೋಟೋಗಳು ಬಹಿರಂಗವಾಗಿದೆ ಎಂದರು. ಶಾಸಕ ಎ.ಟಿ ರಾಮಸ್ವಾಮಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡಿದ್ದಾರೆ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದ ಶಿವಕುಮಾರ್ ಅವರು ಜೆಡಿಎಸ್ ಮುಖಂಡ ಎಚ್.ಪಿ ಸ್ವರೂಪ್ ಜೊತೆಯು ಮಾತುಕತೆ ನಡೆಸಿದ್ದೇವೆ ನಿರ್ಧಾರ ಆಯಾ ಮುಖಂಡರದ್ದು ಎಂದು ಹೇಳಿದರು.