ಹಾಸನ: ಮದುವೆ ದಿನ ಚೆನ್ನಾಗಿ ಕಾಣಿಸಬೇಕೆಂದು ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಅದಕ್ಕಾಗಿ ಪಾರ್ಲರ್‌ಗೆ ತೆರಳಿ ಮುಖವನ್ನು ಅಂದಗೊಳಿಸಲು ಹೋಗಿ ಮುಖವೇ ವಿರೂಪ ಮಾಡಿಕೊಂ ಡಿದ್ದಾಳೆ. ಈ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.
ಮದುವೆ ಅಂದಾಗ ಹುಡುಗಿಯರು ಬ್ಯೂಟಿಪಾರ್ಲರ್‌ಗೆ ಹೋಗೇ ಹೋಗ್ತಾರೆ. ಮದ್ವೆ ಅಂದ್ಮೇಲೆ ರೆಡಿಯಾಗೋಕೆ ವಧು ಮದ್ವೆಯಲ್ಲಿ ಸಖತ್ತಾಗಿ ಕಾಣ್ಬೇಕು ಅಂತ ಮುಖವನ್ನು ಅಂದಗೊಳಿ ಸಲು ಪಾರ್ಲರ್‌ಗೆ ಹೋದರೆ, ಮುಖ ಪರಿಚಯವೇ ಸಿಗದಷ್ಟು ವಿರೂಪವಾಗಿ ಹೋಗಿದೆ. ಸಾಲದ್ದಕ್ಕೆ ವಧು ಆಸ್ಪತ್ರೆಗೆ ಸೇರಿದ್ದಾಳೆ.
ಮದುವೆ ಸಡಗರ ಸಂಭ್ರಮದಲ್ಲಿದ್ದ ವಧು ಮೇಕಪ್ ಮಾಡಿದ ಕಾರಣ ಎಡವಟ್ಟಾಗಿ ಆಸ್ಪತ್ರೆ ಸೇರಿದ್ದಾಳೆ. ಮದುವೆಯಾಗಿ ಹನಿಮೂನ್ ಹೋಗಬೇಕಾದ ಯುವತಿ ಆಸ್ಪತ್ರೆಯ ಐಸಿಯು ಸೇರಿದ್ದಾಳೆ. ಯುವತಿ ಹೊಸ ಮಾದರಿಯ ಮೇಕಪ್ ಮಾಡಿಸಲು ಹೋಗಿ ಯಡವಟ್ಟು ಮಾಡಿ ಕೊಂ ಡಿದ್ದಾಳೆ. ಬ್ಯೂಟಿ ಪಾರ್ಲರ್‌ನವರು ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ಮಾಡಿದ್ದು. ಇದಾದ ಬಳಿಕ ವಧುವಿನ ಮುಖ ಊದಿ ಕೊಂಡು, ಸುಟ್ಟಂತೆ ಕಪ್ಪಾಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ಯಲ್ಲಿ ಘಟನೆ ನಡೆದಿದೆ. ಯುವತಿ ಮದುವೆಗಾಗಿ ಮೇಕಪ್ ಮಾಡಿಸಿಕೊಳ್ಳಲು ಸ್ಥಳೀಯ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು. ಈ ವೇಳೆ ಬ್ಯೂಟಿ ಪಾರ್ಲರ್ ಸಿಬ್ಬಂದಿ ಮೇಕಪ್ ಮಾಡಿದ್ದಳು. ನಂತರ ಮುಖ ಉರಿ ಬಂದಿದೆ. ಅಲ್ಲದೇ ಇಡೀ ಮುಖ ಕಪ್ಪಾಗಿ ಊದಿಕೊಂಡಿದೆ. ಬ್ಯೂಟಿಪಾರ್ಲರ್‌ನಾಕೆ ಮಾಡಿದ ಮೇಕಪ್ ವಧುವಿನ ಮುಖವನ್ನೇ ವಿರೂಪಗೊಳಿಸಿದೆ.
ಮೇಕಪ್ ಎಫೆಕ್ಟ್ ನಿಂದಾಗಿ ವಧು ಆಸ್ಪತ್ರೆ ಸೇರಿದ್ದಾಳೆ. ಮದುವೆ ಮುಂದೂಡಿಕ ಮಾಡಿಕೊಳ್ಳಲಾಗಿದೆ. ಮುಖ ವಿರೂಪಗೊಂಡಿರುವ ಯುವತಿ ಐಸಿಯುನಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾಳೆ.
ಮೇಕಪ್ ನಂತರ ಮುಖ ಊದಿಕೊಂಡು, ಸುಟ್ಟಂತೆ ಆಗಿ ವಿರೂಪಗೊಂಡಿತ್ತು. ನಂತರ ತಕ್ಷಣವೇ ಮದ್ವೆ ಕ್ಯಾನ್ಸಲ್ ಮಾಡಲಾಯಿತು.
ಬ್ಯೂಟಿಪಾರ್ಲರ್ ಮಾಲೀಕ ಮಹಿಳೆಯನ್ನು ಅರಸೀಕೆರೆ ನಗರ ಠಾಣೆಗೆ ಕರೆಯಿಸಿ ಘಟನೆ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಧು ಆಸ್ಪ ತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.
ಅದೇನೆ ಇರ್ಲಿ ಮದ್ವೆ ದಿನ ಸಿಕ್ಕಾಪಟ್ಟೆ ಚೆಂದ ಕಾಣ್ಬೇಕು ಅಂತ ಹೊಸ ಹೊಸ ಮೇಕಪ್ ಮಾಡ್ಕೊಳ್ಳೋ ಯುವತಿಯರು ಇಂಥಾ ಘಟನೆಗಳಿಂದನಾದ್ರೂ ಪಾಠ ಕಲಿಯಬೇಕಿದೆ.