ಹಾಸನ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರವಾಸದ ಸಮಯದಲ್ಲಿ ಅವರನ್ನು ೪೦% ಸರ್ಕಾರ ಎಂದು ಸ್ವಾಗತ ಮಾಡುತ್ತಿದ್ದು, ಹೆಸರುವಾಸಿ ಆಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ನಗರದ ಹೊರವಲಯದ ಖಾಸಗೀ ರೆಸಾರ್ಟ್‌ಹೊಂದರಲ್ಲಿ ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಹಾಗೂ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದ ಅವರು, ನಾವು ಎನು ಗ್ಯಾರಂಟಿ ಕಾರ್ಡ ಕೊಟ್ಟಿದ್ದೆವೆ ಇದನ್ನು ದೇಶದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷಗಳ ಸರ್ಕಾರ ಅನುಷ್ಟಾನಕ್ಕೆ ಪ್ರಯತ್ನ ಮಾಡುತ್ತಾರೆ. ಎಲ್ಲೆ ಹೋದರು ಕರ್ನಾಟಕ ೪೦% ಕಮಿಷನ್ ಗೆ ಹೆಸರುವಾಸಿಯಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರವಾಸದ ಸಮಯದಲ್ಲಿ ಅವರನ್ನು ೪೦% ಸರ್ಕಾರ ಎಂದು ಸ್ವಾಗತ ಮಾಡುತ್ತಿದ್ದಾರೆ. ಕನ್ಯಾಕುಮಾರಿ ಯಿಂದ ಕಾಶ್ಮೀರ ದವರಗೆ ಬಸವರಾಜ್ ಬೊಮ್ಮಾಯಿ ಬಗ್ಗೆ ೪೦% ಸಿಎಂ.ಎಂದು ಕರೆಯುತ್ತಾರೆ. ಇದು ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಿಲ್ಲ. ೫೦ ಸಾವಿರ ಗುತ್ತಿಗೆದಾರ ಸಂಘ ಈ ಬಗ್ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ೮ ಬಾರಿ ಬಂದರು ಈ ಭ್ರಷ್ಟಾಚಾರದ ಆರೋಪದ ಬಗ್ಗೆ ಉತ್ತರ ನೀಡಿರುವುದಿಲ್ಲ ಎಂದು ಆರೋಪಿಸಿದರು.
ಬೆಳಾಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಕಮಿಷನ್ ಕೊಡದೆ ಆತ್ಮಹತ್ಯೆ ಮಾಡಿಕೊಂಡರು ಬಿಜೆಪಿ ಕಾರ್ಯಕರ್ತನ ಮನೆಗೆ ಪ್ರಧಾನಿ ನರೇಂದ್ರ ಮೋದಿ ಹೋಗಿ ಸಾಂತ್ವನ ಹೇಳಲಿಲ್ಲ. ಸಂತೋಷ್ ಪಾಟೀಲ್ ಮನಗೆ ಹೋಗಲಿಲ್ಲ. ಆದರೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೋಳಿ ಅವರ ಕುಟುಂಬ ಅವರ ತಂದೆ ಹೆಂಡತಿ ಮಕ್ಕಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಬಂದಿದ್ದಾರೆ. ಅವರ ಕುಟುಂಬ ನೋವಿನಿಂದ ನನ್ನ ಮಗ ಬಿಜೆಪಿಗೆ ಮತ ಹಾಕಿ ಹಾಕಿಸುತ್ತಿದ್ದ ಅವನಿಗೆ ಎಂತಹ ಪರಿಸ್ಥಿತಿ ತಂದರೂ ಅಂತ ಕುಟುಂಬ ಹೇಳಿದೆ. ಬಿಜೆಪಿ ಪಿಶಾಚಿ ಕೊನೆಗೂ ಅವರ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ. ತುಮಕೂರಿನಲ್ಲಿ ರಾಜೇಂದ್ರ ಎಂಬಾತ ಆತ್ಮಹತ್ಯೆ ಮಾಡಿಕೊಂಢರು ಅಲ್ಲಿಗೆ ಬಿಜೆಪಿ ನಾಯಕರು ಹೊಗಲಿಲ್ಲ. ಆ ಸಮಯದಲ್ಲಿ ಡಿ.ಕೆ. ಶಿವಕುಮಾರ್. ಸಿದ್ದರಾಮಯ್ಯ. ರಾಮಲಿಂಗರೆಡ್ಡಿ ಇವರುಗಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಭೇಟಿ ನೀಡಿದ್ದರು. ಟಿ.ಎನ್. ಪ್ರಸಾದ್ ಗೆ ೧೦ ವರ್ಷದ ಮಗಳಿದ್ದಾಳೆ ಅವಳಿಗೆ ಒಂದು ಮಾತನಾಡಲು ಆಗಲಿಲ್ಲ. ಅವರು ಮಾತನಾಡುವುದಕ್ಕೆ ಬರಲು ಅಂತ ಅಲ್ಲ ನಾನು ಯಾರನ್ನು ಅಪ್ಪ ಎಂದು ಕರೆಯಲಿ ಎಂದು ಅಳುತಿದ್ದಳು. ಟಿ.ಎನ್. ಪ್ರಸಾದ್ ತಂದೆ ೭೫ ವರ್ಷದ ತಂದೆ ಬಾಯಲ್ಲಿ ಒಂದು ಮಾತು ಹೊರಡುತ್ತಿರಲಿಲ್ಲ. ಮುಂದಿನ ದಿನಗಳ ಬಗ್ಗೆ ಆಂತಕ ಇತ್ತು. ಬಸವರಾಜ್ ಬೊಮ್ಮಾಯಿ, ನಳೀನ್ ಕುಮಾರ ಕಟೀಲು. ಜೆಮಪಿ ನಡ್ಡಾ ಎಸ್.ಸ್‌ಅಇ.ಎಸ್ಟಿ ಒಬಿಸಿ ಯಿಂದ ನಿಮಗೆ ಎಷ್ಟು ದುಡ್ಡು ಬೇಕು ಕೇಳಿ ನಾವು ಚಂದಾ ಎತ್ತಿಕೊಡುತ್ತೆವೆ ಎಂದರು.
ಬಿಜೆಪಿ ಶಾಸಕರು ಲಂಚ ತೆಗೆದುಕೊಳ್ಳುವಾಗ ರೆಂಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಭ್ರಷ್ಟಾಚಾರದಲ್ಲಿ ಮುಳುಗಿಸಿದ್ದಾರೆ. ನಾವು ಟಿವಿಯಲ್ಲಿ ನೋಡಿದ್ದೆವೆ ಬಿಜೆಪಿ ಶಾಸಕ ಅವನ ಮನೆಯಲ್ಲಿ ೬ ಕೋಟಿ ನಗದು ಹಣ ಸಿಕ್ಕಿದೆ. ಕೆ.ಆರ್.ಪುರಂ ಸರ್ಕಲ್ ಇನ್ಸ್ಪೆಕ್ಟರ್ ಸೂಸೈಡ್ ಮಾಡಿಕೊಂಡರು ಅವರ ಪರಿಸ್ಥಿತಿ ಇದೆ ತರಹ ಒಂದು ವರ್ಗಾವಣೆ ಗೆ ಲಕ್ಷಗಟ್ಟಲೆ ಹಣ ನೀಡಬೇಕು. ರೂಪ್ಸ ಸಂಘಟನೆ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರು ಲಿಂಗೇಶ್ವರ ಸ್ವಾಮೀಜಿ ಆರೋಪ ಮಾಡಿದರು ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮ ಜರುಗಿಸಿಲ್ಲ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ೮೦ ಲಕ್ಷ ಕ್ಕೆ ಮಾರಟ ಹಾಗಿದ್ದು, ಒಬ್ಬ ಎಡಿಜಿಪಿ ಜೈಲಿನಲ್ಲಿ ಇದ್ದಾರೆ ಬರಿ ಎಡಿಜಿಪಿಗೆ ಹಣ ಹೋಗಿಲ್ಲ ಅವರ ಮೇಲೆ ಇದ್ದಂತ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ.ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಸಚಿವ ಅರಂಗ ಜ್ಞಾನೇಂದ್ರ ಹಣ ಹೊಗಿದೆ. ಇವರನ್ನು ಯಾರು ತನಿಖೆ ಮಾಡುತ್ತಾರೆ. ಸಹಾಯಕ ಪ್ರಾಧ್ಯಾಪಕರು ಎ.ಇ.ಜೆ.ಇ. ಅಸಿಸ್ಟೆಂಟ್ ರಿಜಿಸ್ಟರ್ ಮಾರಟಕ್ಕೆ ಇಟ್ಟಿದ್ದಾರೆ. ಕೆ.ಎಂ.ಎಫ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು ಹಾಗೂ ಹಾಸನ ಕಾಂಗ್ರೆಸ್ ಉಸ್ತುವಾರಿ ಡಿ.ಕೆ. ಸುರೇಶ್ ಮಾತನಾಡಿ, ಹಾಸನ ಜಿಲ್ಲೆಯ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿದ್ದು, ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಬಾಕಿ ಇದೆ. ಅತಿ ಶೀಘ್ರದಲ್ಲಿ ಅರಕಲಗೂಡು ಮತ್ತು ಅರಸೀಕೆರೆ ತಾಲ್ಲೂಕಿನಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಸುತ್ತೆವೆ. ಕಾಂಗ್ರೆಸ್ ಪಕ್ಷದಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಜನಪರ ಕೆಲಸ ಮತ್ತು ಹೋರಟಗಳನ್ನು ನಿರಂತರವಾಗಿ ಹಿರಿಯ ಮುಖಂಡರ ಮಾರ್ಗದರ್ಶನಲ್ಲಿ ಮಾಡಿದ್ದೆವೆ. ಕೋವಿಡ್ ಸಮಯದಲ್ಲಿ ಜನತಾದಳ ಕಾರ್ಯಕರ್ತರು ಮನೆಯಲ್ಲಿ ಕುಳಿತಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೀದಿಯಲ್ಲಿ ನಿಂತು ಜನರಿಗೆ ಸಹಾಯ ಮಾಡಿದ್ದೆವೆ ಮತ್ತು ಬಡವರಿಗೆ ಆಹಾರದ ಕಿಟ್ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದ್ದೆವೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮಧು ಬಂಗಾರಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಇ.ಹೆಚ್. ಲಕ್ಷ್ಮಣ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ವಕ್ತಾರ ದೇವರಾಜೇಗೌಡ. ಯೂತ್ ಕಾಂಗ್ರೆಸ್ ಜಿಲ್ಲಧ್ಯಕ್ಷ ಗೊರೂರು ರಂಜಿತ್, ಅಶೋಕ್ ಹಾಗೂ ಹಾಸನ ಕ್ಷೇತ್ರದ ಆಕಾಂಕ್ಷಿಗಳು ಉಪಸ್ಥಿತರಿದ್ದರು.