ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನನ್ನ ಹಿತೈಸಿ ಆಗೇ ನನ್ನ ಬಗ್ಗೆ ಯಾವಾಗಲು ಒಳಿತನ್ನು ಬಯಸುವವ ರಾಗಿರುವುದರಿಂದ ಅವರು ಪ್ರೀತಿಯಿಂದ ಆ ರೀತಿ ಮಾತನಾಡಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಏಕವಚನದಲ್ಲಿ ವಾಗ್ದಾಳಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೀತಿ ಸಾಫ್ಟ್ ಆಗಿತ್ತು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಅಣ್ಣಾ ಅವರು ಏನೇ ಮಾತನಾಡಿದರೂ ಅವರ ಮತ್ತು ನನ್ನ ನಡುವೆ ಆತ್ಮೀಯ ಭಾವನೆ ಇದೆ. ಕುಮಾರಸ್ವಾಮಿ ಅವರು ನನ್ನ ಹಿತೈಷಿ ಅವರು ಯಾವಾಗಲೂ ನನ್ನ ಒಳಿತನ್ನು ಬಯಸುವವರು. ಸರ್ಕಾರದ ಬಗ್ಗೆ ಮಾತನಾಡಿದರೆ ಅದಕ್ಕೆ ಉತ್ತರ ಕೊಡಲು ಸರ್ಕಾರ ಇದೆ ವೈಯಕ್ತಿಕವಾಗಿ ಮಾತನಾಡಿದರೆ ಅದು ಪ್ರೀತಿಯಿಂದ ಮತಂಡಿದ್ದರೆ ಅವರ ಪ್ರೀತಿಯನ್ನು ನನ್ನ ಆಶೀರ್ವಾದ ಎಂದು ಭಾವಿಸಿ ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲಿರಲಿದೆ ಎಂದು ನಯಾವಾಗಿ ಮಾತನಾಡಿದರು. ಕುಮಾರಣ್ಣ ಅವರು ರೇವಣ್ಣ ಕುಟುಂಬವನ್ನು ಅಭ್ಯರ್ಥಿ ಮಾಡುವುದಿಲ್ಲ ಎಂದು ಹೇಳಿದ್ದಾರೆ ಹೊರತೂ ಅವರು ನನ್ನನು ಸೋಲಿಸುವುದಾಗಿ ಎಂದು ಹೇಳಿಲ್ಲ ಎಂದು ಟಾಂಗ್ ನೀಡಿದರು.