News Kannada
Friday, September 29 2023
ಹಾಸನ

ಹಾಸನ: ನಾಪತ್ತೆಯಾಗಿದ್ದ ನಟೋರಿಯಸ್ ರೌಡಿ ಶೀಟರ್ ಸಂತೋಷ್ (ಪುಲ್ಲಿ) ಶವವಾಗಿ ಪತ್ತೆ

The body of Santosh (Pulli), a notorious rowdy-sheeter who went missing, was found dead
Photo Credit : News Kannada

ಹಾಸನ: ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ದಾಸರ ಕೊಪ್ಪಲು ಗ್ರಾಮದ ಪುಲ್ಲಿ ಉರುಫ್ ಸಂತೋಷನನ್ನು ಆತನ ಸ್ನೇಹಿತರೇ ಟ್ರಿಪ್ ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣ ಪತ್ತೆ ಹಚ್ಚುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಸಂಬಂಧ ರಂಗೋಲಿ ಹಳ್ಳ ನಿವಾಸಿ ಪ್ರೀತಂ(೨೫), ಮತ್ತು ಹೇಮಾವತಿ ನಗರ ವಾಸಿ ಕೀರ್ತಿ(೨೪) ಎಂಬಿಬ್ಬರನ್ನು ಬಂಧಿಸಲಾಗಿದೆ. ಅಂದಿನಿಂದ ಪುಲ್ಲಿ ನಾಪತ್ತೆಯಾಗಿದ್ದ, ಆತನನ್ನು ಕರೆದೊಯ್ದಿದ್ದ ಕೀರ್ತಿ ಕೂಡ ಯಾರ ಸಂಪರ್ಕಕ್ಕೂ ಸಿಗದೆ ಓಡಾಡುತ್ತಿದ್ದ. ಇತ್ತ ಕಾಣೆಯಾದ ಪುಲ್ಲಿ ಉರುಫ್ ಸಂತೋಷ್ ತಂದೆ ಮಗನ ನಾಪತ್ತೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಹೀಗ್ಗೆ ಹತ್ತು ದಿನದ ಹಿಂದೆ ಕುಡಿತದ ಮತ್ತಿನಲ್ಲಿ ಅಪರಾಧಿ ಪ್ರೀತಂ, ಹಾಗೂ ಕೀರ್ತಿ ಪುಲ್ಲಿ ಕೊಲೆ ವಿಷಯ ಬಾಯಿ ಬಿಟ್ಟಿದ್ದರು.

ಈ ಸುದ್ದಿ ಪೊಲೀಸರನ್ನು ತಲುಪಿ ಬಳಿಕ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಹೊರ ಬಂದಿದೆ.
ಫೆಬ್ರವರಿ ೯ ರಂದು ನಾಪತ್ತೆಯಾಗಿದ್ದ ಹಾಸನ ನಗರದ ದಾಸರಕೊಪ್ಪಲು ವಾಸಿಯಾಗಿರೋ ರೌಡಿಶೀಟರ್ ಪುಲ್ಲಿ ಅಲಿಯಾಸ್ ಸಂತೋಷ್ ಕೊಲೆಯಾಗಿದ್ದು, ಪುಲ್ಲಿಯನ್ನು ಚಿಕ್ಕಮಗಳೂರು ತಾಲೂಕಿನ ಕುರುವಂಗಿ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಹೂತಿ ಹಾಕಿದ್ದ ಪ್ರಕರಣ ೨೬ ದಿನಗಳ ಬಳಿಕ ಪತ್ತೆಯಾಗಿದೆ ಎಂದು   ಎಎಸ್‌ಪಿ ಕೆ.ಎಸ್. ತಮ್ಮಯ್ಯ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಇಬ್ಬರು ಅರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮಾರ ಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುಲ್ಲಿಯನ್ನು ಕೊಲೆಮಾಡಲು ಆರೋಪಿ ಪ್ರೀತಂ ಅಂಡ್ ಟೀಂ ಮೊದಲೇ ಸ್ಕೆಚ್ ಹಾಕಿ ಟ್ರಿಪ್ ಗೆಂದು ಚಿಕ್ಕಮಗಳೂರು ಜಿಲ್ಲೆಗೆ  ಕರೆದುಕೊಂಡು ಹೋಗಿದ್ದಾರೆ.  ಕುರುವಂಗಿ ಅರಣ್ಯ ಪ್ರದೇಶಕ್ಕೆ ಹೋಗಿ  ಪುಲ್ಲಿಯನ್ನು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿ, ಅಲ್ಲೇ ಗುಂಡಿ ತೆಗೆದು ಹೂತು ಹಾಕಿ ಎಸ್ಕೇಪ್ ಆಗಿದ್ದರು.

ಪುಲ್ಲಿ ಕಾಣೆಯಾ ಗಿದ್ದರ ಸಂಬಂಧ ಹಾಸನ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀ ಸರು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ದ್ದಾರೆ ಎಂದರು. ಕೊಲೆಯಾದ ಪುಲ್ಲಿ ಓರ್ವ ನಟೋರಿಯಸ್ ರೌಡಿ ಶೀಟರ್ ಕೂಡಾ ಹೌದು, ಈತನ ಮೇಲೆ  ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಕೊಲೆ ಮಾಡಿರೋ ಆರೋಪಿಗಳನ್ನು ಬೆಳೆಸಿದವನೇ ಈ ಪುಲ್ಲಿ, ಇದೀಗ ಇವರ ನಡುವೆ ಗಲಾಟೆಯಾಗಿ ಶಿಷ್ಯರೇ ಸೇರ್ಕೊಂಡು ಗುರುವಿಗೆ ಖೆಡ್ಡಾ ತೋಡಿ ಮುಗಿಸಿದ್ದಾರೆ. ಪ್ರೀತಂಗೆ ಬೇರೊಬ್ಬರನ್ನು ಮುಗಿಸೋದಕ್ಕೆ ಅಂತಾ ಸ್ಕೆಚ್ ಕೊಟ್ಟು, ಪ್ರೀತಂ ಮುಗಿಸೋದಕ್ಕೆ ಬರ್ತಿದ್ದಾನೆ ಅಂತಾ ಮಾಹಿತಿ ನೀಡಿ ಡಬಲ್ ಗೇಮ್ ಮಾ ಡೋದಕ್ಕೆ ಹೋಗಿದ್ದಾನೆ. ಇದನ್ನರಿತು ಸಿಟ್ಟಾದ ಪ್ರೀತಂ, ತನ್ನ ಶಿಫ್ಟ್ ಕಾರಿನಲ್ಲಿ ಪ್ರವಾ ಸಕ್ಕೆಂದು ಕರ್ಕೊಂಡ್ ಹೋಗಿ ರಿವರ್ಸ್ ಪ್ಲಾನ್ ಮಾಡಿ ಪುಲ್ಲಿ ಕಥೆಯನ್ನೇ ಮುಗಿಸಿದ್ದಾರೆ ಎಂದು ಎಸ್ಪಿ ತಮ್ಮಯ್ಯ ಮಾಹಿತಿ ನೀಡಿದರು. ಮೃತ ಪುಲ್ಲಿ ಅಲಿಯಾಸ್ ಸಂತೋಷ್, ಆರೋಪಿಗಳ ಮೊಬೈಲ್ ನೆಟ್ ವರ್ಕ್ ಲೊಕೇ ಶನ್ ಹಾಗೂ ಕಾರು ಓಡಾಡಿರೋ ಸಿಸಿಟಿವಿ ವಿಡಿಯೋ ಸೇರಿದಂತೆ ಹಲವು ಮಾಹಿತಿ ಆಧಾರದ ಮೇಲೆ ೨೬ ದಿನಗಳ ಬಳಿಕ ಕೊಲೆ ಪ್ರಕರಣವನ್ನು ಭೇದಿಸಲಾಗಿದೆ. ಮತ್ತೊಮ್ಮೆ ಶವವನ್ನು ಹೊರಕ್ಕೆ ತೆಗೆದು, ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರ ಸಮ್ಮುಖದಲ್ಲಿ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಅವರು ತಿಳಿಸಿದರು.

See also  ಚನ್ನರಾಯಪಟ್ಟಣ: ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಸಹಕಾರ ಕ್ಷೇತ್ರದ ಆದ್ಯ ಕರ್ತವ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು