News Kannada
ಹಾಸನ

ಅರಕಲಗೂಡಿನಲ್ಲಿ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

21st District Kannada Sahitya Sammelana inaugurated at Arakalagud
Photo Credit : News Kannada

ಅರಕಲಗೂಡು: ಭಾಷೆ ಕೇವಲ ಸದ್ದಲ್ಲ, ಅದು ಆತ್ಮದ ಅಭಿವ್ಯಕ್ತಿ ಎಂದು ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಪಟ್ಟಣದಲ್ಲಿ ನಿರ್ಮಿಸಿರುವ ಕಾದಂಬರಿ ಸಾರ್ವಭೌಮ ಅನಕೃ ವೇದಿಕೆಯಲ್ಲಿ ಆಯೋಜಿಸಿರುವ ೨೧ ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಗಿ ಸಸಿ ನಾಟಿ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹೆಮ್ಮೆಯ ಕನ್ನಡವನ್ನು ಹ್ಲದಯ ತುಂಬಿಕೊಂಡು ಜೀರ್ಣಿಸಿಕೊಂಡರೆ ಮಾತ್ರ ಅದಕ್ಕೆ ಬೆಲೆ ಮತ್ತು ನೆಲೆ. ಭಾಷಣಗಳಿಂದ ಭಾಷೆ ಬೆಳೆಯಲಾರದು. ಅದನ್ನು ಬಳಸಿ ದರೆ ಮಾತ್ರ ಬೆಳೆಯುತ್ತದೆ ಎಂದು ಹೇಳಿದರು.

ಹಳ್ಳಿಗಳು ಇಂದು ಹಳ್ಳಿಗಳಾಗಿ ಉಳಿಯದೇ ಕುರೂಪ, ವಿರೂಪಗಳು ಆವರಿಸಿ ಅರಾಜಕತೆ ಎದ್ದು ಕಾಣುತ್ತಿದೆ. ಸಾಮಾಜಿಕ ಜಾಲ ತಾಣಗಳನ್ನು ಆಕ್ಷೇಪಿಸುವ ಕಾವನ್ನು ನಾವು ದಾಟಿ ಹೋಗಿದ್ದು ಅನಿವಾರ್ಯವಾಗಿ ಒಪ್ಪಿಕೊಳ್ಳೇ ಬೇಕಿರುವ ಸಂದಿಗ್ದ ಸ್ಥಿತಿಯಲ್ಲಿದ್ದೇವೆ. ಆದರೆ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಹೇಳಿಕೊಡಬೇಕಿದೆ ಎಂದು ತಿಳಿಸಿದರು.

ಮಹಾ ನಗರದಲ್ಲಿ ಕನ್ನಡ ಮಾಯವಾಗುತ್ತಿದೆ ಎಂಬ ಕಾಲವನ್ನೂ ದಾಟಿರುವ ನಾವು ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸಂದರ್ಭವನ್ನು ನೋಡುವಂತಾಗಿದೆ. ನಮ್ಮೂರಿನ ಶಾಲೆಯನ್ನು ಅಚ್ಚ ಕನ್ನಡ ಶಾಲೆಯಾಗಿ ಉಳಿಸಿ ಕೊಳ್ಳುವುದು ಸವಾಲಾಗಿದೆ. ನಾವು ವೇಗದ ಬದುಕಿಗೆ ಒಗ್ಗಿಕೊಂಡಿರುವುದರಿಂದ ನೆನಪಿನ ಭಂಡಾರವನ್ನು ಅಳಿಸುತ್ತಿದ್ದೇವೆ. ಅಂತೆಯೇ ನಮ್ಮ ಊರು, ಕೇರಿ, ಹಳ್ಳಿಗಳನ್ನು ನಾವು ಮರೆಯು ತ್ತಿದ್ದೇವೆ. ಮನುಕುಲದ ಬೇರು ಮರೆತರೆ ಭವಿಷ್ಯಕ್ಕೆ ಅತೀ ದೊಡ್ಡ ನಷ್ಟವಾಗಲಿದೆ. ಕನ್ನಡಿಗರೆಲ್ಲರೂ ಒಂದು ಎಂಬುದನ್ನು ಸಾಮುದಾ ಯಿಕವಾಗಿ ಸಾಬೀತು ಪಡಿಸಲು ಸಾಹಿತ್ಯ ಸಮ್ಮೇಳನಗಳು ಒಳ್ಳೆಯ ವೇದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಕನ್ನಡದ ಅನ್ನ ತಿನ್ನುವ ಜನಕ್ಕೆ ಈ ನೆಲದ ಭತ್ತದ ನೆನಪಾಗಬೇಕು. ಮೊಳಕೆ ಒಡೆಯುವ ಕೆಲಸ ಮಾಡಿದ್ದರೆ ನಾಟಿ ಮಾಡಿದ ಭತ್ತ ಕೊಳೆತು ಹೋಗುತ್ತದೆ. ಸಾಹಿತ್ಯ ಲೋಕಕ್ಕೂ ಇದೇ ಮಾತು ಅನುಕರಣೆಯಾಗಕುತ್ತದೆ. ಸಾಹಿತ್ಯವು ನಡೆದರೆ ಗದ್ಯ, ಕುಣಿದರೆ ಪದ್ಯ, ಬಣ್ಣಿಸಿದರೆ ಕಾವ್ಯ, ಮರೆ ಮಾಡಿದರೆ ನಾಟಕ, ಮುಗ್ಗರಿಸಿದರೆ ವಿಡಂಭನೆ, ಬುರಡೆ ಬಿಟ್ಟರೆ ಪುರಾಣ ಹೀಗೆ ಎಲ್ಲ ರೂಪದಲ್ಲೂ ಕಳೆಕಟ್ಟಿದ ಕನ್ನಡವನ್ನು ಬಳಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.

ಬೀದಿಯಲ್ಲಿ ಕುಳಿತ ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಒಳಗೆ ಕರೆದು ಅನ್ನ ಹಾಕಿ ಬೆಳೆಸಿದ ಕಿರ್ತಿ ಅ.ನ.ಕೃಷ್ೞರಾಯರಿಗೆ ಸಲ್ಲುತ್ತದೆ. ಕರ್ನಾಟಕದ ತಂದೆ ತಾಯಿಗಳ ನಾಡು ಎನ್ನುವುದಕ್ಕೆ ಇಂತಹ ನೂರಾರು ಉದಾಹರಣೆಗಳು ಸಿಗುತ್ತವೆ. ಸಾಹಿತ್ಯ ಕ್ಷೇತ್ರದಿಂದ ಸಂಗೀತವನ್ನು ದೂರವಿಡಬಾರದು. ಅ.ನ.ಕೃ ಅವರು ಹಾಲ್ಯಾಂಡ್‌ನಿಂದ ಪೋಲ್ಯಾಂಡಸ್ ವರೆಗೆ ಪ್ರಖ್ಯಾತರು. ಎಲ್ಲ ವಿಷಯಗಳಲ್ಲೂ ಪರಿಣಿತರಾಗಿದದ್ ಅವರನ್ನು ಹಾಲುಚಿಡ ತವರಲ್ಲಿ ನೆನಪು ಮಾಡಿಕೊಳ್ಳದಿದ್ದರೆ ತವರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.

ಜಾನಪದ ವಿದ್ವಾಂಸ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರು ಅದರ ಸ್ವಾಯತ್ತೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸೋತಿರುವುದು ನಾಡಿನ ದುರಂತ. ಒಂದು ದೇಶಕ್ಕೆ ಒಂದೇ ಭಾಷೆ ಎಂಬ ನೀತಿ ಒಪ್ಪಿಕೊಳ್ಳಲಾಗದು. ಒಂದು ಭಾಷೆ ಮೂಲಕ ಇಡೀ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಅಪಾಯಕಾರಿಯಾಗಿದೆ. ಹಿಂದಿ ಹೇರಿಕೆ ಮೂಲಕ ಅನ್ಯ ಭಾಷೆ ಮಾತನಾಡುವ ರಾಜ್ಯಗಳ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

See also  ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾದ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್.ಮಲ್ಲೇಡ ಅವರು ಆಶಯ ನುಡಿಗಳನ್ನಾಡಿ, ಕನ್ನಡ ನಾಡು-ನುಡಿ ಕೆಲಸಕ್ಕೆ ಹೊರಟಾಗ ಸಹೃದಯಿ ಮನಸ್ಮ್ಸಗಳು ಜತೆಯಾಗುತ್ತವೆ ಎಂಬುದಕ್ಕೆ ಈ ಸಮ್ಮೇಳನ ಸಾq?ಷಯಾಗಿದೆ. ಸರ್ವಾಧ್ಯಕ್ಷರ ಆಯ್ಕೆ ಸಂದರ್ಭ ಜಿಲ್ಲೆಯ ಅನೇಕ ಮಹತ್ವದ ಲೇಖಕಕರ ಹೆಸರುಗಳು ಪ್ರಸ್ತಾಪವಾಗಿ ಖುಷಿಯಾಯಿತು. ಅಚಿತಹ ಮೇರು ಸಾಹಿತಿಗಳನ್ನು ಕೊಡುವ U?ಪಟ್ಟಿ ನೆಲ ನಮ್ಮ ಹಾಸನ ಎಂದು ಹೇಳಲು ಹೆಮ್ಮೆ. ಡಾ. ಆರ್.ಕೆ.ಪದ್ಮನಾಭ್ ಅವರು ೭೦೦ ಭಾವಗೀತೆಗಳಿಗೆ ಸ್ವತಃ ರಚಿಸಿ ರಾಗ ಸಂಯೋಜಿಸಿ ಹಾಡಿದ್ದಾರೆ. ಅತ್ಯಂತ ಶ್ರೇಷ್ಟ ವಾಗ್ಯಯಕಾರರಿವರು. ಅವರ ಹಾಡುಗಳನ್ನು ಕೇಳುತ್ತಿದ್ದರೆ ಕಣ್ಣಂಚಲ್ಲಿ ನೀರು ಹರಿಸುತ್ತದೆ. ಮೇರು ದಿಗ್ಗಜರು, ಶ್ರೇಷ್ಠರಿಂದ ಪ್ರಶಸ್ತಿಗಳನ್ನು ಅವರು ಸ್ವೀಕರಿಸಿದ್ದರೂ ಎಲ್ಲಿಯೂ ಹೇಳಿಕೊಳ್ಳದ ಪ್ರತಿಭೆಯಿಂದ ಈ ಜಿಲ್ಲೆಯ ಕ್ಭಿರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದೆ. ಅಚಿತಹವರು ನಮ್ಮ ಅವಧಿಯಲ್ಲಿ ಸಮ್ಮೇಳನಾರ್ಧಯಕ್ಷರಾಗಿರುವುದು ನಮ್ಮ ಹೆಮ್ಮೆ. ಆದರೆ ಇಂತಹ ಸುಂದರ ಕಾರ್ಯಕ್ರಮಗಳನ್ನು ಪಟ್ಟಣದ ಜನರು ನೇರ U?ಪಣ್ಣಿನಿಂದ ನೋಡದಿರುವುದು ಬೇಸರದ ಸಂಗತಿ. ಇದೇ ಕಾರಣಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆಗೊಳ್ಳಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷೆ ವಹಿಸಿದ್ದ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕಲಾ ದಿಗ್ಗಜರನ್ನು ಕೊಟ್ಟ ರುದ್ರಪಟ್ಟಣ ಗ್ರಾಮ ಸಂಗೀತ ಲೋಕದ ತವರು ಮನೆ. ಈ ಕ್ಷೇತ್ರದ ಮೂಲಕ ಸಂಗೀತ ಸಆಧನೆ ಮಾಡಿ ದೇಶದ ಕಿರ್ತಿ ಹೆಚ್ಚಿಸಿದ ಮೇರು ಕಲಾವಿದರು ಜನ್ಮ ತಾಳಿದ್ದಾರೆ. ಅಂಕಗಳ ಆಧಾರದಲ್ಲಿ ಬುದ್ಧಿಮತ್ತೆ ಅಳೆಯಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ವಿದ್ವಾನ್ ಆರ್.ಕೆ.ಪದ್ಮನಾಭ್ ಆಗಿದ್ದಾರೆ. ನೂರು ಜನ್ಮಕ್ಕೆ ಆಗುವಷ್ಟು ಸಾಹಿತ್ಯದ ಕೆಲಸಗಳನ್ನು ಮಾಡಿರುವ ಅನಕೃ ಅವರನ್ನು ಪಡೆದ ನಾವೇ ಧನ್ಯರು. ರಾಷ್ಟ್ರದ ಪ್ರಧಾನಿಯಾಗಿರುವ ದೇವೇಗೌಡರನ್ನು ಕೊಡುಗೆಯಾಗಿ ನೀಡಿದ ಈ ಮಣ್ಣಲ್ಲಿ ಕನ್ನಡದ ಕಂಪು ಹರಡಿಸುವ ಈ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲಿ ಎಂದು ಹಾರೈಸಿದರು.

ವಿವಿಧ ಸಾಹಿತಿಗಳು ರಚಿಸಿದ ಮೂರು ಕೃತಿಗಳನ್ನು ಸಮಾರಂಭದ ವೇದಿಕೆಯಲ್ಲಿ ಲೋಕಾರ್ಪಣೆ ಮಾಡಲಾಯಿತು. ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾ ಪ್ಲಥ್ವಿರಾಜ್, ಉಪಾಧ್ಯಕ್ಷೆ ರಶ್ಮಿ ಮಂಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಕಸಾಪ ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗವಡ, ಹಿರಿಯ ಸಾಹಿತಿ ಸುಬ್ಬು, ಕಲಾವಿದ ಮೇಟಿಕೆರೆ ಹಿರಿಯಣ್ಣ ಇತರರಿದ್ದರು. ಬನುಮಾ ಗುರುದತ್, ನಾಡಗೀತೆ ಹಾಡಿದರು. ನಾಗಮಣಿ ಪ್ರಾರ್ಥಿಸಿದಿರು. ಕಸಾಪ ತಾಲೂಕು ಅಧ್ಯಕ್ಷ ಅನಿಲ್ ಗೌಡ ಸ್ವಾಗತಿಸಿದರು. ವಿದೂಷಿ ರಂಜನಿ ಕೀರ್ತಿ ಅವರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.

ನಾಡಗೀತೆಯನ್ನು ಮಕ್ಕಳು ಹಾಡಬೇಕು, ಉಳಿದವರೆಲ್ಲರೂ ಕೈ ಕಟ್ಟಿ ನಿಲ್ಲಬೇಕು ಎಂಬ ಭಾವನೆ ಕೆಲವರಲ್ಲಿದೆ. ಆದರೆ ಭಾರತ ಜನನಿಯ ತನ್ಮಜಾತೆ ಎಂಬ ಸಾಲುಗಳನ್ನು ಹಾಡಿದರೆ ಮೈ ರೋಮಾಂಚನವಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿನಗೂ ಅನುಭವಿಸಬೇಕು.
-ಡಾ.ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಸಾಹಿತಿ

See also  ಮಂಡ್ಯ: ಭಯೋತ್ಪಾದಕರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದ ನಾಯಕರನ್ನು ಜನರು ಕ್ಷಮಿಸುವುದಿಲ್ಲ!

ಸಾಹಿತ್ಯದಿಂದ ಸಮಾಜ ಬದಲಾವಣೆ ಆಗಬೇಕೆಂಬ ಅಪೇಕ್ಷೆ ಇದೆ. ಸೌಹಾರ್ದದ ವಾತಾವರಣ ನಿರ್ಮಾಣ ಮಾಡಲು ಸಾಹಿತ್ಯ ಲೋಕ ಕೆಲಸ ಮಾಡಬೇಡಕಿದೆ. ಪ್ರೀತಿ, ವಿಶ್ವಾಸದ ಜಾಗದಲ್ಲಿ ಅಸಹನೆ, ಅಸಹಕಾರ, ಅಸೂಯೆ ತುಂಬಿ ಹೋಗಿದೆ. ಇದನ್ನು ಇಲ್ಲವಾಗಿಸಲು ಸಾಮರಸ್ಯದೆಡೆ ಕೊಂಡೊಯ್ಯುವ ಬರಹಗಳು ಹೆಚ್ಚಾಗಬೇಕಿದೆ. ಸಮಜದ ಪ್ರಸ್ತುತ ತಲ್ಲಣಗಳ ನಡುವೆ ಮುಖಾಮುಖಿಯಾಗಿವ ಸಾಹಿತ್ಯ ರಚನೆಗೆ ಯುವ ಸಾಹಿತಿಗಳು ಮುಂದಾಗಬೇಕು.
-ಡಾ.ಹಂಪನಹಳ್ಳಿ ತಿಮ್ಮೇಗೌಡ, ಜಾನಪದ ವಿದ್ವಾಂಸ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು