ಸಕಲೇಶಪುರ: ತಾಲ್ಲೂಕಿನ, ಐಗೂರು ಗ್ರಾ.ಪಂ. ಸೇರಿದ ಎಂಟು ಗ್ರಾಮಗಳಲ್ಲಿ ಜಾನುವಾರುಗಳ ಮಾರಣಹೋಮ ನಡೆಯುತ್ತಿದೆ. ಜಾನುವಾರುಗಳಿಗೆ ಮಾರಕ ರೋಗ ಬಂದ ಹಿನ್ನೆಲೆಯಲ್ಲಿ ಯಡಿಕೇರೆ ಯಲ್ಲಿ ೮, ಚಿಕ್ಕಲ್ಲೂರಿ ನಲ್ಲಿ ೧೪, ಕುಂಬಾರಗೇರಿಯಲ್ಲಿ ೬ ದನಕರುಗಳು ಸಾವನ್ನಪ್ಪಿವೆ.
ಇಪ್ಪತ್ತು ದಿನಗಳಿಂದ ಜಾನುವಾರುಗಳು ಸಾವನ್ನಪ್ಪುತ್ತಿರುವುದು ವೈದ್ಯಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿ, ಪಶು ವೈದ್ಯರು ಭೇಟಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಕಳೆದುಕೊಂಡು ರೈತ ಕಣ್ಣೀರಿಡುತ್ತಿದ್ದುದು ಕಂಡುಬಂತು.
ಇನ್ನೂ ಜಾನುವಾರು ಸಾವಿಗೆ ಕಾರಣ ಕಂಡು ಹಿಡಿಯಲು ಗ್ರಾಪಂ ಸದಸ್ಯ ನಂದು ಕುಮಾರ್ ಆಗ್ರಹಿಸಿದ್ದಾರೆ.