ಹಾಸನ: ಕಾರ್ಮಿಕ ಭವಿಷ್ಯ ನಿಧಿ ಪಿಂಚಣಿದಾರರಿಗೆ ಕನಿಷ್ಠ ೭೫೦೦ ಮಾಸಿಕ ಪಿಂಚಣಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭವಿಷ್ಯ ನಿಧಿ ಕಾರ್ಮಿಕ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೇರ ನೇಮಕಾತಿ ಹೊಂದಿದೆ, ಇತರೆ ಸರ್ಕಾರಿ ಮಂಡಳಿ, ನಿಗಮ, ಸಹಕಾರಿ ಮತ್ತು ಸ್ವಯತ್ತ ಖಾಸಗಿ ಸಂಸ್ಥೆಗಳಲ್ಲಿ ಸುಮಾರು ೩೦ ರಿಂದ ೪೦ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಲ್ಲ ನೌಕರರು ಕಾರ್ಮಿ ಕರ ಭವಿಷ್ಯ ನಿಧಿ ಯೋಜನೆಗೆ ಒಳಪಟ್ಟು ಅದರ ಅನ್ವಯ ಕಾರ್ಮಿಕ ಪಿಂಚಣಿ ಯೋಜನೆ ೧೯೯೫ರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಈ ಎಲ್ಲಾ ನಿವೃತ್ತ ನೌಕರರು ದೇಶಾದ್ಯಂತ ಸುಮಾರು ೭೫ ಲಕ್ಷ ಮಂದಿ ಇದ್ದಾರೆ ಮತ್ತು ಸಂಘಟ ನೆಯ ಸೇರಿದವರಾಗಿದ್ದು ಇವರಿಗೆ ಅಗತ್ಯ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿದರು.
ಕಾರ್ಮಿಕ ಭವಿಷ್ಯ ನಿಧಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಅವರ ನಿವೃತ್ತಿಯ ಹಲವಾರು ವರ್ಷಗಳ ನಂತರವೂ ತಿಳಿದಿಲ್ಲ, ಇಪಿಎಸ್- ೯೫ ಪಿಂಚಣಿ ನಿಧಿಗೆ ಮಾಸಿಕ ಕೇವಲ ಒಂದು ಸಾವಿ ರದಿಂದ ಎರಡು ಸಾವಿರ ಪಿಂಚಣಿ ನೀಡುತ್ತಿದ್ದು ಈ ಹಣದಲ್ಲಿ ವೃದ್ಧ ದಂಪತಿಗಳು ನಿತ್ಯ ಬದುಕು ಸಾಗಿಸುವುದು ದುಸ್ತರವಾಗಿದೆ ಎಂದು ದೂರಿದರು.
ಈ ಸಂಬಂಧ ಬಹುತೇಕ ಎಲ್ಲಾ ಸಂಸದರಿಗೆ ಭೇಟಿಯಾಗಿ ಹಲವಾರು ಮನವಿಗಳನ್ನು ಸಲ್ಲಿಸಿ ದರು ಯಾವುದೇ ಪ್ರಯೋಜನ ವಾಗಿಲ್ಲ , ನಮ್ಮ ಸಂಘಟನೆಯ ನಾಯಕರು ಪ್ರಧಾನ ಮಂತ್ರಿಗಳನ್ನು ಎರಡು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಪರಿಶೀಲಿಸು ವುದಾಗಿ ಭರವಸೆ ನೀಡಿದ್ದಾರೆ.
ನಮ್ಮ ಕಷ್ಟವನ್ನು ಕೇಂದ್ರ ಸರ್ಕಾರವು ಪರಿಗಣಿಸಿ ಇಪಿಎಸ್ -೯೫ ಪಿಂಚಣಿ ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ಪ್ರಯೋಜನ ಮತ್ತು ಆರೋಗ್ಯ ಯೋಜನೆ ನೀಡಿ ಸಹಾಯ ಮಾಡುವಂತೆ ಗಮನ ಸೆಳೆಯುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜಿ.ಒ ಮಹಾಂತಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು.