News Kannada
Monday, March 27 2023

ಹಾಸನ

ಹಾಸನ: ನಾನು ಕಾಂಗ್ರೆಸ್‌ನಲ್ಲಿ ನಿಂತ್ರೂ ಗೆಲ್ಲಲ್ಲ, ಶಾಸಕ ಶಿವಲಿಂಗೇಗೌಡ-ರೇವಣ್ಣ ಸಂಭಾಷಣೆ ವೈರಲ್

Hassan: Conversation between Arasikere MLA Shivalingegowda and Revanna goes viral
Photo Credit : News Kannada

ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆಯುವ ಮೊದಲು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಆಡಿಯೋದಲ್ಲಿ ಪಕ್ಷ ಬಿಟ್ಟು ಹೋಗದಂತೆ ಹೆಚ್.ಡಿ.ರೇವಣ್ಣ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ನಿನ್ನನ್ನು ಮತ್ತೆ ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ. ಇದನ್ನ ಮೊನ್ನೆ ಸಹ ಹೇಳಿದ್ದೇನೆ ಎಂದು ಶಿವಲಿಂಗೇಗೌಡಗೆ ಭರವಸೆ ನೀಡಿದ್ದಾರೆ. ಪಕ್ಷ ಬಿಟ್ಟು ಹೋಗದಂತೆ ಮನವೊಲಿಸಲು ರೇವಣ್ಣ ಕಸರತ್ತು ನಡೆಸಿದ್ದು, ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುವುದಕ್ಕೂ ಮೊದಲು ರಾಜಿಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಒಂದು ನಿಮಿಷ ಶಿವಲಿಂಗಣ್ಣ ತಾಳ್ಮೆಯಿಂದ ಕೇಳು. ನನ್ನ ನಿನ್ನ ಸಂಬಂಧ ೧೮-೨೦ ವರ್ಷಗಳದ್ದು. ಶಿವಲಿಂಗೇಗೌಡರಿಗೆ ತೊಂದರೆ ಆಗಬಾರದು ಅನ್ನೋದು ನನ್ನ ಭಾವನೆ. ಅವತ್ತು ಏನು ಹೇಳಿದ್ದೇ ನೀನು, ನಾನು ಸೋಲುವುದಾದರೆ ಅವರ ಎದುರುಗಡೆ ನಿಲ್ಲಲ್ಲ ಅಂದೆ ಎಂದು ರೇವಣ್ಣ ಹೇಳಿದ್ದು, ಯಾರನ್ನಾದರೂ ನಿಲ್ಸೋಣ ಅಂತ ಅಂದೆ. ನಾನು ಈಗಲೂ ನಿಲ್ಲುತ್ತೇನೆ ಅಂತ ಎಲ್ಲೇ ಹೇಳಿದ್ದೀನಿ ಅಂತ ಶಿವಲಿಂಗೇಗೌಡ ಮರು ಪ್ರಶ್ನೆ ಮಾಡಿದ್ದಾರೆ. ಪಕ್ಷ ತೊರೆಯದಂತೆ ಭಾವನಾತ್ಮಕವಾಗಿ ಮನವೊಲಿಸಲು ರೇವಣ್ಣ ಯತ್ನಿಸಿದ್ದಾರೆ. ಆದರೆ ಪಕ್ಷ ಬಿಡುತ್ತೇನೆ ಅಥವಾ ಬಿಡಲ್ಲ ಎಂದು ಏನೂ ಹೇಳದೆ ಜಾಣ್ಮೆಯಿಂದ ಶಿವಲಿಂಗೇಗೌಡ ಮಾತನಾಡಿದ್ದಾರೆ.

ಮುಂದುವರೆದು ಮಾತನಾಡಿರುವ ಶಾಸಕ ಶಿವಲಿಂಗೇಗೌಡರು, ನನ್ನ ಜಡ್ಜ್‌ಮೆಂಟ್-ಅಸೆಸ್‌ಮೆಂಟ್ ಯಾವತ್ತು ಸುಳ್ಳಾಗಿಲ್ಲ ನಾನು ಕಾಂಗ್ರೆಸ್‌ನಿಂದ ನಿಂತ್ರೂ ಗೆಲ್ಲಲ್ಲ ಅಂತಾ ಗೊತ್ತು.. ೭೫% ಕುರುಬರು, ೫೦% ಒಕ್ಕಲಿಗರು ಅಶೋಕನಿಗೆ (ಹಾಲಿ ಜೆಡಿಎಸ್ ಅಭ್ಯರ್ಥಿ) ಓಟ್ ಹಾಕುತ್ತಾರೆ ಎಂದು ತಮ್ಮ ಸೋಲಿನ ಭೀತಿಯನ್ನು ಅರಸೀಕೆರೆ ಶಾಸಕ ಶಿವಲಿಂಗೇಗೌಡ ವ್ಯಕ್ತಪಡಿಸಿರೋದು ಆಡಿಯೋದಲ್ಲಿದೆ.
ಹಾಗಿದ್ರೆ ಶಾಸಕ ಶಿವಲಿಂಗೇಗೌಡ್ರು ಹಾಗೂ ರೇವಣ್ಣ ಅವರ ನಡುವೆ ಏನೆಲ್ಲಾ ಸಂಭಾಷಣೆ ನಡೆದಿದೆ ಎಂದು ನೋಡಿದ್ರೆ.

ರೇವಣ್ಣ: ಏನ್ ಶಿವಲಿಂಗಣ್ಣ, ನಾನ್ ಹೇಳೋದು.. ಅವು, ಇವು ಆಡ್ತವೆ ಅಂತ ನೀನು ಆಡಲು ಹೋಗಬೇಡ. ಯಾವತ್ತಾದರೂ ನಾನು ನಿನಗೆ ಕೆಟ್ಟದು ಮಾಡಿದ್ದೀನಾ?
ಕೆಎಂಶಿ: ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಾ ಅಣ್ಣಾ?
ರೇವಣ್ಣ: ನಾನೆಲ್ಲಿ ಹಾಗಂತ ಹೇಳಿದ್ದೀನಿ?
ಕೆಎಂಶಿ: ನಾನು ರಾಜಿ ಮಾಡ್ಕತಿನಿ ತಡಿ ಅಂತ ಹೇಳಿದ್ದೀನಲ್ಲಣ್ಣ. ಅಷ್ಟರಲ್ಲಿ ನನ್ನ ಕರೆಯದೆ ಸಭೆ ಮಾಡಿದ್ದೀರಾ?
ರೇವಣ್ಣ: ನನಗೆ ಇರೋದು ಇನ್ನಾ ೩೯ ದಿನ. ನಿನ್ನ ಹತ್ರಲೇ ಬರ್ತರೆ, ನಿಂದೆ ವೈರ್‌ಲೆಸ್ ಆಗ್ತಾರೆ.
ಕೆಎಂಶಿ: ಯಾವುದಾದರೂ ವೈರ್‌ಲೆಸ್ ಹಾಕಲಿ. ಅವರಂಗೆ ನನಗೆ ಎಡಿಟ್ ಮಾಡಲು ಆಗಲ್ಲ.
ರೇವಣ್ಣ: ನಾನು ಅವತ್ತಿಂದ ಹೇಳಿಲ್ವಾ? ಕುಮಾರಣ್ಣ, ನಾನು ಗೆಲ್ಲಿಸಿಕೊಂಡು ಬರ್ತಿವಿ ಅಂತಾ?
ಕೆಎಂಶಿ: ರೇವಣ್ಣ ಹತ್ರ ಹೋಗು ಡಿಸಿಸಿ ಬ್ಯಾಂಕ್ ವಿಚಾರಕ್ಕೆ ಅಂತ ಹೇಳಿದ್ದೀನಿ. ಎರಡು ವರ್ಷದ ಹಿಂದೇನೇ ಅವನ್ಯಾವನೋ ಬರ್ತನೆ. ಕಾಂಗ್ರೆಸ್‌ನಲ್ಲಿ ನಿಂತರೆ ನಾನು ಗೆಲ್ತೀನಿ ಅಂತಾ ಹೇಳಿದ್ದೀನಿ. ಎರಡು ವರ್ಷ ಆಗಿದೆ.
ರೇವಣ್ಣ: ಅದು ನನಗೆ ಗೊತ್ತಿಲ್ಲ.
ಕೆಎಂಶಿ: ಈ ಮಾತ್ರೆ ಅನ್ನೋನು ಬಂದಿದ್ದನಲ್ಲಾ?
ರೇವಣ್ಣ: ಸ್ವಲ್ಪ ತಾಳ್ಮೆಯಿಂದ ಕೇಳ್ಕಳೋ. ನನ್ನ ನಿನ್ನ ಸಂಬಂಧ ಹದಿನೆಂಟು ವರ್ಷದ್ದು. ಶಿವಲಿಂಗೇಗೌಡಗೆ ತೊಂದರೆ ಆಗಬಾರದು ಅಂತಾ ನನ್ನ ಭಾವನೆ ಇದೆ. ಅದರ ಮೇಲೆ ನಿನ್ನಿಷ್ಟ. ಅವತ್ತು ನೀನು ಏನು ಹೇಳ್ದೆ. ಯಾವುದೇ ಕಾರಣಕ್ಕೂ ನಾನು ಅವನ ಎದುರು ಸೋಲುವುದಾರೆ ನಿಲ್ಲಲ್ಲ. ಯಾವನಾದ್ರು ನಿಲ್ಸಣ ಅಂದೆ.
ಕೆಎಂಶಿ: ನಾನು ಈಗಲೂ ನಿಲ್ತೀನಿ ಅಂತ ಎಲ್ಲಿ ಹೇಳಿದ್ದೀನಿ ಹೇಳಿ?
ರೇವಣ್ಣ: ನೋಡಯ್ಯ ನಿನ್ನ ಹಣೇಲಿ ಬರೆದಿರೋದು ಯಾರು ತಪ್ಸಕೆ ಆಗಲ್ಲ.
ಕೆಎಂಶಿ: ನನ್ನ ಹಣೆಗಿಣೆ ಪರೀಕ್ಷೆ ಇಲ್ಲೆ ಜನರ ಎದುರೇ ಮಾಡ್ತೀನಿ. ಜನರೇ ನನ್ನ ಹಣೆ ಪರೀಕ್ಷೆ ಮಾಡೋರು. ನಾನು ಐವತ್ತು ಸಾವಿರದಲ್ಲಿ ಗೆಲ್ತೀನಿ ಅಂತಾ ಈಗ ಹೇಳಿದ್ದಲ್ಲ. ಎರಡು ವರ್ಷ ಆಯಿತೆ. ಅವನ್ಯಾವನೋ ಚೀಟ್ ಮಾಡ್ಕಂಡು ಇಟ್ಕಂಡು ಈಗ ಹಾಕವ್ನೆ. ಯಡಿಯೂರಪ್ಪನ ಸಿ.ಡಿ ಮಾಡಿ ಬಂದವನು ಇಲ್ಲೂ ಮಾಡ್ತವ್ನೆ ಸಿ.ಡಿ.
ಕೆಎಂಶಿ: ಡಿಸಿಸಿ ಬ್ಯಾಂಕ್ ನಮ್ಮ ಹತ್ರ ಇಲ್ಲ. ರೇವಣ್ಣ ಅವರದ್ದು ಅವರ ಹತ್ರ ಹೋಗು ಅಂದಿದ್ದೀನಿ. ಆ ನನ್ಮಗ ರೇವಣ್ಣ ಹತ್ರಕ್ಕೆ ಹೋಗು ಅಂತಾ ಹೇಳಿದ್ನಾ. ಎಡಿಟ್ ಮಾಡಿ ಹಾಕವ್ನೆ.
ರೇವಣ್ಣ: ಲೋನ್‌ಗೂ ನನಗೂ ಸಂಬಂಧವಿಲ್ಲ.
ಕೆಎಂಶಿ: ನನ್ನ ಜೀವಮಾನ ಇರೋವರೆಗೂ ನಿಮ್ಮನ್ನೆಲ್ಲ ಏಕವಚನದಲ್ಲಿ ಮಾತನಾಡಲ್ಲ. ಅಂತಹ ಥರ್ಡ್ ಕ್ಲಾಸ್ ಅಲ್ಲ ನಾನು. ಅವನು ಇಂತಹವು ಎಡಿಟ್ ಮಾಡಿ ಐವತ್ತು ಸಿ.ಡಿ, ವ್ಯಾಟ್ಸಪ್ ಬಿಟ್ಟ ನನ್ನ ಮೇಲೆ ನಾನು ಮಾತಾಡಿದಂಗೆ ಮಿಮಿಕ್ರಿ ಮಾಡ್ತಾನೆ. ನಾನು ಮಾತಾಡಿದಂಗೆ ಮಾತಾಡುಸ್ತಾನೆ. ಏನು ಮಾಡೋಣ ಅಂಥವು ಏಸು ಎಟ್ಕಂಡವ್ನೋ ಇನ್ನುವೇ ಯಾವಾಗ ಯಾವಾಗ ಬಿಡಕೆ.
ರೇವಣ್ಣ: ನಾನು ಹೇಳೋದು ಸುಮ್ನೆ. ಯಾವನೋ, ಯಾವನೋ ಹೇಳ್ತನೆ ಅಂತಾ ಕೇಳೋದು ಬೇಡ ಕಣೋ.
ಕೆಎಂಶಿ: ನಾನು ಯಾರ ಮಾತು ಕೇಳಿಲ್ಲ.
ರೇವಣ್ಣ: ಮತ್ತೆ ಏನ್ ಮಾಡಣ ನಾನು.
ಕೆಎಂಶಿ: ಒಂದು ಗುಂಪು ರಾಜಿ ಆಗಬೇಕು.ರೇವಣ್ಣ: ನೀನು ಏನು ಹೇಳ್ತಿಯಾ ಕೇಳ್ತಿನಿ, ನನಗೇನು.
ಕೆಎಂಶಿ: ಆ ಗುಂಪು ರಾಜಿಯಾಗೋವರೆಗೆ, ನಾಳಿಕ್ಕೆ ಅರಸೀಕೆರೆ ತುಂಬಾ ಬಾವುಟ ಕಟ್ಟವ್ರೆ ಈಗೇನ್ ಮಾಡ್ತಿರಾ ಮಾಡಿ.
ರೇವಣ್ಣ: ಅರಸೀಕೆರೆ ತುಂಬಾ ಬಾವುಟ ಕಟ್ಟಿದ್ರೆ, ನಾನು ಮೊನ್ನೆನೇ ಹೇಳಿ ಬಂದಿಲ್ವಾ.
ಕೆಎಂಶಿ: ನೀವು ಹೇಳ ಬಂದವ್ರು, ಅಟ್‌ಲಿಸ್ಟ್ ಹದಿನೈದು ದಿನದೊಳಗೆ ಒಂದು ಸಭೆ ಮಾಡಬೇಕು. ಮಾಡದಿದ್ದರೆ ಮಾಡು ಇಲ್ಲ ಅಂದಿದ್ರೆ ಬೇರೆ ದಾರಿ ಮಾಡ್ಕತಿವಿ ಅಂತ ಹೇಳಿದ್ರೆ ನಾನು ಒಪ್ಕತಿದ್ದೆ.
ರೇವಣ್ಣ: ನಾಳೆ ಸಭೆ ರದ್ದು ಮಾಡನೇನಯ್ಯ.
ಕೆಎಂಶಿ: ಅದೆಂಗೆ ಸಭೆ ರದ್ದು ಮಾಡಲು ಆಗುತ್ತೆ?
ರೇವಣ್ಣ: ಇವತ್ತು ಹೇಳು, ಸಭೆ ರದ್ದು ಮಾಡಿ ಇನ್ನೂ ಹದಿನೈದು ದಿನದಲ್ಲಿ ಶಿವಲಿಂಗೇಗೌಡರೇ ಸಭೆ ಕರಿತರೆ ಅಂತ ಹೇಳಿ ಬಿಡ್ಲೇನಯ್ಯ.
ಕೆಎಂಶಿ: ಇಲ್ಲಾ, ಅವೆಲ್ಲಾ ಆಗಲ್ಲ ಈಗ. ಬಂದು ಮಾಡ್ಕಂಡು ಹೋಗಿ. ನಾಳೆ ನಮ್ಮ ಮನೇಲಿ ಮದುವೆ. ಅದುನ್ನು ಗೊತ್ತಿಲ್ಲದಂಗೆ ಅವನು ಲೋಫರ್ ನನ್ಮಕ್ಕಳು ನಿಮಗೆ ಡೇಟ್ ಮಿಸ್ ಮಾಡಿ ಹೇಳಿದ್ದಾರೆ. ನಮ್ಮ ಸ್ವಂತ ಬಾಮೈದನ ಮದುವೆ.
ರೇವಣ್ಣ: ನಾಳೆ ಸಭೆಲಿ ಏನು ಹೇಳಬೇಕು ಹೇಳಪ್ಪ.
ಕೆಎಂಶಿ: ಏನಾದ್ರು ಹೇಳಿ. ಅವರ ಮನೇಲಿ ಮದುವೆ ಇದೆ, ಬರಕ್ಕಿಲ್ಲ ಅಂತ ಹೇಳಿ.
ರೇವಣ್ಣ: ಅವರು ಬರಕ್ಕಾಗಲ್ಲ ಅವರು ಇಲ್ಲೇ ಇರ್ತಾರೆ ಅಂಥ ಹೇಳ್ಲಾ?
ಕೆಎಂಶಿ: ಇರ್ತೀನಿ ಅಂತಾ ಪದ ಬೇಡ. ನಾನು ಇರ್ತೀನಿ, ಹೋಗ್ತೀನಿ ಅನ್ನೋದನ್ನ ನಿಮ್ಮ ಮನೆಗೆ ಬಂದು ಹೇಳ್ತೀನಿ. ದೊಡ್ಡವರಿಗೆ ಹೇಳ್ದಲೇ ನಾನು ಎಲ್ಲೂ ಹೋಗಲ್ಲ. ಎಲ್ಲಿಗೂ ಬರಲ್ಲ. ನನ್ನ ಜಡ್ಜ್ಮೆಂಟ್, ಅಸೆಸ್‌ಮೆಂಟ್ ಇದಿಯಲ್ಲಾ ಅದು ಯಾವತ್ತು ಸುಳ್ಳು ಆಗಲ್ಲ. ಈಗ ಏನಿಲ್ಲ ಕುರುಬರವೆಲ್ಲಾ ೭೫% ಅವನಿಗೆ ಹೋಗ್ತವೆ. ನಮ್ಮ ಒಕ್ಕಲಿಗರವು ಅವನ್ಯಾರೋ ಅಶೋಕ ಅನ್ನವನಿಗೆ ಹೋಗ್ತಾವೆ. ಈ ಒಕ್ಕಲಿಗರವು ೫೦%, ೬೦% ಹೋಗ್ತವೆ. ಇಲ್ಲಿ ಕಾಂಗ್ರೆಸ್ ಬಂದ್ರು ಗೆಲ್ಲಕೆ ಏನು ಆಗಲ್ಲ. ನಾವೇನು ಅಷ್ಟು ದಡ್ಡರಲ್ಲ ರಾಜಕಾರಣದಲ್ಲಿ ಯಾವೋ ಗೊತ್ತಿಲ್ಲದವು ನಾಯಿ, ನರಿ, ಊರು ಗೊತ್ತಿಲ್ಲದವು ಬಂದು ಹೇಳ್ತಾರೆ ಅಂತ ಕೇಳಕೆ ಹೋಗ್ಬೇಡಿ.
ರೇವಣ್ಣ: ಲೇ ದೇವ್ರಾಣೆ, ನನ್ನ ತಂದೆ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ನಿನಗೆ ಬಿಡಬೇಕು ಅಂತಿಲ್ಲ. ನಿನ್ನೆನೂ ಟ್ರೈ ಮಾಡ್ದೆ, ನೀನು ಮೀಟಿಂಗ್‌ನಲ್ಲಿದ್ದೆ.
ಕೆಎಂಶಿ: ನಾನು ನಿನ್ನೆ ಎಸ್ಟಿಮೇಟ್ ಕಮಿಟಿ ಮೀಟಿಂಗ್ ಇತ್ತಲ್ಲ, ಅಲ್ಲಿಗೆ ಹೋಗಿದ್ದೆ.
ರೇವಣ್ಣ: ಶಿವಲಿಂಗಣ್ಣ ನನ್ನ ಜೊತೆ ಗೆಲ್ಲಿಸಿಕೊಳ್ಳಬೇಕು ಅಂತ ಅಷ್ಟೇ ಕಣೋ.
ಕೆಎಂಶಿ: ಗೆಲ್ಲಿಸಿಕೊಳ್ಳಲು ಎಲ್ಲಾ ಕ್ಷೇತ್ರದಂತಲ್ಲಾ ಇದು.
ರೇವಣ್ಣ: ನಾನು ನಿನ್ನ ಬಿಟ್ಟಿರಕೆ ಆಗಲ್ಲ ಕಣೋ ದಯಮಾಡಿ. ನೀನು ಏನಾದ್ರು ಅನ್ಕೋ ನಿನ್ನ ಬಿಟ್ಟಿರಲು ನನಗೆ ಆಗಲ್ಲ ಕಣೋ ದಯಮಾಡಿ. ನನ್ ಮಾತು ಕೇಳೋ ಆ ಜವರೇಗೌಡ ಅವರೆಲ್ಲ ಆಡಿಕೊಳ್ಳಂಗೆ ಆಗುತ್ತೆ ಕಣೋ ಶಿವಲಿಂಗಣ್ಣ.
ಕೆಎಂಶಿ: ಜವರೇಗೌಡರು ಬೆನ್ನೆಲುಬು ಇಲ್ಲದ ರಾಜಕಾರಣಿ.
ರೇವಣ್ಣ: ಯಾರು ಏನೇನ್ ಮಾಡಿದರೆ ಅಂತಾ ಎಲ್ಲಾ ನಿನಗೆ ಗೊತ್ತಿದೆಯಲ್ಲೋ ಶಿವಲಿಂಗಣ್ಣ.
ಕೆಎಂಶಿ: ಎಲ್ಲಾ ನನಗೆ ಗೊತ್ತಿದೆ. ಗೊತ್ತಿರೋದಕ್ಕೆ ಎಲ್ಲರಿಗೂ ಒಂದೇ ಉತ್ತರ ನಂದು.
ರೇವಣ್ಣ: ನಾನು ಹೇಳದು ನಿನ್ನ ಒಳ್ಳೆಯದಕ್ಕೋಸ್ಕರ. ನೀನೇ ಮಂತ್ರಿಯಾಗಯ್ಯ ಅಲ್ಲೇ ಘೋಷಣೆ ಮಾಡ್ತಿನಿ.
ಕೆಎಂಶಿ: ಇನ್ನೂಂದು ನಾಲ್ಕೈದು ದಿನ ಕಾಯ್ದಿದ್ರೆ ಏನಾಗೋದು. ಮಂತ್ರಿ ತಗೊಂಡು ತಿಪ್ಪೆಗುಂಡಿಗೆ ಎಸಿರಿ ಯಾವ ನನ್ಮಗನಿಗೆ ಬೇಕು.
ರೇವಣ್ಣ: ನನಗೆ ಯಾವನಿಗೆ ಮಂತ್ರಿ ಬೇಕಾಗಿದೆ.
ಕೆಎಂಶಿ: ನಾವೇನ್ ಅಂತಹ ಥರ್ಡ್ ಕ್ಲಾಸ್ ನನ್ಮಕ್ಕಳಲ್ಲ. ಮಂತ್ರಿಗೆ ಅದಕ್ಕೆ ಇದಕ್ಕೆ ಆಸೆ ಪಡೋಕೆ.
ರೇವಣ್ಣ: ಇನ್ನೂ ಒಂದು ಅರ್ಧಗಂಟೆ ಕುಮಾರಣ್ಣನ ಹತ್ರ ಮಾತಾಡಿ ನಿನ್ನ ಹತ್ರ ಮಾತಾಡ್ತಿನಿ ತಡಿ.
ಕೆಎಂಶಿ: ಆಯ್ತು ಮಾತಾಡಣ.

See also  ನವದೆಹಲಿ: ವೈದ್ಯರ ದಿನ, ವೈದ್ಯರಿಗೆ ಶುಭಾಶಯ ಕೋರಿದ ಪ್ರಧಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು