News Kannada
Wednesday, October 04 2023
ಹಾಸನ

ಚನ್ನರಾಯಪಟ್ಟಣದಲ್ಲಿ ನೂತನ ಸಂಚಾರಿ ಪೊಲೀಸ್ ಠಾಣೆ ಕಟ್ಟಡ ಲೋಕಾರ್ಪಣೆ

Inauguration of new traffic police station building at Channarayapatna
Photo Credit : News Kannada

ಚನ್ನರಾಯಪಟ್ಟಣ: ತಾಲ್ಲೂಕಿನ ಪಟ್ಟಣದಲ್ಲಿ ಸಂಚಾರಿ ಪೊಲೀಸ್ ಠಾಣೆ ಪ್ರಾರಂಭವಾದ ಮೇಲೆ ಅಪಘಾತಗಳನ್ನು ತಡೆಯಲು, ವಾಹನ ಸಂಚಾರ ಸುಗಮಗೊಳಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಕಾರಾತ್ಮಕ ವಾತಾವರಣ ನಿರ್ಮಾಣಗೊಂಡಿದೆ ಇಂದು ಶಾಸಕ ಸಿ ಎನ್ ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಸಂಚಾರಿ ಪೊಲೀ ಸ್ ಠಾಣೆ ಕಟ್ಟಡವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾ ಡಿದ ಅವರು ಶಾಂತಿ ಮತ್ತು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಕಡೆಯೂ ಪೊಲೀಸ್ ಠಾಣೆಗಳು ಉನ್ನತೀಕರಿಸುತ್ತಿದ್ದು ಚನ್ನರಾಯ ಪಟ್ಟಣದಲ್ಲೂ ಸಹ ೨೦೧೬ರಲ್ಲಿ ನೂತನ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿ ಕಾರ್ಯಾರಂ ಭ ಮಾಡಿದ್ದರು ಸ್ವಂತ ಕಟ್ಟಡವಿಲ್ಲದೆ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಕಾರ್ಯನಿರ್ವ ಹಿಸುತ್ತಿದ್ದು ಇಂದು ೧ ಕೋಟಿ ೩೧ ಲಕ್ಷ ರೂವೆಚ್ಚದಲ್ಲಿ ಸುಸಜ್ಜಿತ ವಾದ ಕಟ್ಟಡ ನಿರ್ಮಾಣಗೊಂಡು ಪೋಲಿಸ್ ಇಲಾಖೆಗೆ ಆಡಳಿತಾತ್ಮ ಕವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿದೆ ಎಂದರು.

ತಾಲೂಕಿನಾದ್ಯಂತ ಎಲ್ಲಾ ಹೋಬಳಿಗಳಲ್ಲಿಯೂ ಪೊಲೀಸ್ ವಸತಿಗೃಹಗಳ ಕೊರತೆ ಇಲ್ಲ ಆದರೆ ಪೋಲಿಸ್ ಆರಕ್ಷಕರು ತಂಗಲು ಐದು ವಸತಿಗೃಹಗಳ ಅಗತ್ಯತೆ ಇದ್ದು ಗೃಹ ಸಚಿವರಿಗೆ ಈ ಹಿಂದೆಯೇ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಮತ್ತೊಮ್ಮೆ ಪ್ರಸ್ತಾವನೆ ಯನ್ನು ಐದು ವಸತಿಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾ ಗುವುದು. ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ನುಗ್ಗೆಹಳ್ಳಿ ರಸ್ತೆಯಲ್ಲಿರುವ ೧೦ಗುಂಟೆ ಸರ್ಕಾರಿ ಜಮೀನನ್ನು ಪಟ್ಟಣದ ಎಲ್ಲಾ ಪೊಲೀಸ್ ಠಾಣೆಗಳ ಅಪಘಾತ ಹಾಗೂ ಮುಟ್ಟುಗೋಲು ಹಾಕಿ ಕೊಂಡಂತಹ ವಾಹನಗಳನ್ನು ನಿಲ್ಲಿ ಸಲು ಅನುಕೂಲವಾಗುವ ನಿಟ್ಟಿನ ಲ್ಲಿ ಜಮೀನನ್ನು ಕಂದಾಯ ಇಲಾ ಖೆಯಿಂದ ತಮ್ಮ ಇಲಾಖೆಗೆ ವರ್ಗಾ ಯಿಸಿಕೊಡಲಾಗುವುದೆಂದು ತಿಳಿಸಿದರು.

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕ ರ್ ಮಾತನಾಡಿ ಹಾಸನ ಜಿಲ್ಲೆಯ ಮಟ್ಟಕ್ಕೆ ಚನ್ನರಾಯ ಪಟ್ಟಣ ನಗರವು ಬೆಳೆಯುತ್ತಿದ್ದು ಶಾಂತಿ ಮತ್ತು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಹಾಸನ ಜಿಲ್ಲಾ ಅಪಾರ ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಯ್ಯ ಪುರಸಭೆ ಅಧ್ಯಕ್ಷೆ ರೇಖಾ ಅನಿಲ್, ಸದಸ್ಯ ನವೀನ್, ಟಿಎ ಪಿಸಿಎಂಎಸ್ ನ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ ನಿರ್ದೇಶಕ ಅನಿಲ್ ಮರಗೂರು, ತಾಲೂಕಿನ ಎಲ್ಲಾ ಪೊಲೀಸ್ ಠಾಣೆಯ ಅಧಿಕಾ ರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

See also  ಬೆಳ್ತಂಗಡಿ: ಕೆಲವೊಮ್ಮೆ ದೈನಂದಿನ ಮನೋಸ್ಥಿತಿ ಸೋಲಿಗೆ ಕಾರಣವಾಗಬಹುದು ಎಂದ ಪ್ರತಾಪ ಸಿಂಹ ನಾಯಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು