ಅರಕಲಗೂಡು: ಮಾಜಿ ಪ್ರಧಾನಿ ದೇವೇಗೌಡರ ಮನಸ್ಸಿಗೆ ಸೋತಿದ್ದು ಜೆಡಿಎಸ್ ಪಕ್ಷಕ್ಕೆ ಮರಳಿ ಬಂದಿದ್ದೇನೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು.
ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ದೇವೇಗೌಡರನ್ನು ನೋಡಲು ಹೋದಾಗ ನನಗೆ ನಿಜವಾದಂತಹ ಖುಷಿಯಾಯಿತು, ಒಬ್ಬ ಹಿತೈಷಿ ನಾಯಕ ಸಿಕ್ಕಿದರು ಎಂಬ ಭಾವನೆ ವ್ಯಕ್ತವಾಯಿತು.
ನನ್ನನ್ನು ಉಳಿಸಿರುವವರು ಮತದಾ ರರು ಅದರ ಜೊತೆಗೆ ಗೌಡರ ಆಶೀರ್ವಾದ, ಕುಮಾರಣ್ಣನ ವಿಶ್ವಾಸ, ರೇವಣ್ಣ ಅವರ ಸಹಕಾರದಿಂದ ತಾಲೂಕು ಜಿಲ್ಲೆ ಅಭಿವೃದ್ಧಿ ಆಗುತ್ತಿದೆ ಎಂದು ಹಾಡಿ ಹೊಗಳಿದರು . ಕುಮಾರಣ್ಣ ರಾಜ್ಯಕ್ಕೆ ಹಾಸನ ಜಿಲ್ಲೆಗೆ ನೀವೇನೇ ಎಂದು ರೇವಣ್ಣ ಅವರನ್ನು ಉದ್ದೇಶಿಸಿ ಮಾತನಾಡಿದ ಮಂಜು, ನಿಮಗೆ ನಾನು ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಅಂತ ಈ ಸಂದರ್ಭದಲ್ಲಿ ಹೇಳುತ್ತೇನೆ.ನನ್ನನ್ನು ಪ್ರೀತಿಯಾಗಿ ನೋಡ್ಕೋಬೇಕು ಅಷ್ಟೇ ..!! ನನ್ನನ್ನು ಪ್ರೀತಿಯಿಂದ ಗೆಲ್ಲಿಸಿಕೊಳ್ಳಬೇಕು, ಆ ಪ್ರೀತಿ ಇಲ್ಲದೆ ಇದ್ದರೆ ಬಾರಿ ಕಷ್ಟ ಆಗುತ್ತದೆ ಎಂದು ರೇವಣ್ಣನವರನ್ನು ಉದ್ದೇಶಿಸಿ ಮಾತನಾಡಿದರು.
ಕುಮಾರಣ್ಣ ಎಲ್ಲಾ ಕಡೆ ಮಾತ ನಾಡುವಾಗ ನಮ್ಮ ಕುಟುಂಬದವನೇ ಅಂತ ಹೇಳುತ್ತಿದ್ದಾರೆ ಅವರಿಗೆ ಧನ್ಯವಾದಗಳು ಹೇಳಬೇಕು , ನಾನು ಗೌಡರನ್ನು ಆರೋಗ್ಯ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ತೀರ್ಮಾನ ಮಾಡಿದೆ ಹೊರತು ಮೊದಲೇ ತೀರ್ಮಾನ ಮಾಡಿರಲಿಲ್ಲ, ದೇವೇಗೌಡರು ದೇವರ ಮುಖಾಂತರ ಬಂದ್ರು ಏನೋ ನನಗೆ ಆಶೀರ್ವಾದ ಮಾಡಿದ್ದಾರೆ.
ನಾನು ಕೂಡ ರಾಜಕೀಯದಲ್ಲಿ ಹಠವಾದಿ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡವನಲ್ಲ ಇಂದು ದೇವೇಗೌಡರ ಮನಸ್ಸಿಗೆ ಸೋತಿದ್ದು ನನಗೆ ಶಕ್ತಿಯುತವಾಗಿ ಅಭಿವೃದ್ಧಿ ಮಾಡಲು ರೇವಣ್ಣ ಅವರು ಸಹಕಾರ ಮಾಡುತ್ತಿದ್ದಾರೆ.
ಯಾರು ಏನೇ ಹೇಳಬಹುದು ನಾನು ರಾಜಕೀಯವಾಗಿ ರೇವಣ್ಣ ಪರ ವಿರೋಧ ಮಾತನಾಡುತ್ತಿದ್ದೇನೆ ಆದರೆ ಅಭಿವೃದ್ಧಿಯಲ್ಲಿ ರೇವಣ್ಣ ಅವರನ್ನು ಮೀರಿಸುವ ರಾಜಕಾರಣಿ ಇಲ್ಲ ಎಂದು ಪ್ರಶಂಶಿಸಿದರು.
ಎಟಿಆರ್ ವಿರುದ್ಧ ಪ್ರಜ್ವಲ್ ವಾಗ್ದಾಳಿ: ಎರಡು ವರ್ಷದ ಹಿಂದೆಯೇ ಪಕ್ಷ ಬಿಟ್ಟು ಕಾಂಗ್ರೆಸ್ ಹೋಗ್ತೀರ ಅಂತ ಇಡೀ ಅರಕಲಗೂಡು ಜನತೆಗೆ ಗೊತ್ತು. ಆದರೆ ನಾವು ಈ ಮಾತಿಗೆ ಕಿವಿಗೊಡದೆ ಸುಮ್ನಿದ್ದು, ಯಾಕೆಂದರೆ ಎ ಟಿ ರಾಮಸ್ವಾಮಿ ಅಂದ್ರೆ ನಂಬಿಕೆ ಅಂತ. ನಂಬಿಕೆಯನ್ನು ಕಳೆದುಕೊಂಡು ಇವತ್ತು ಪಕ್ಷ ಬಿಟ್ಟಿದ್ದೀರಿ ಸಂತೋಷವಾಗಿ ಹೋಗಿ ಬನ್ನಿ ಎಂದು ಬಹಳ ಖಾರವಾಗಿಯೇ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಇನ್ನು ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೊರಟಾಗ ಎಲ್ಲಾ ನಾಯಕರನ್ನು ಭೇಟಿ ಮಾಡಿದರಿ. ಆದರೂ ನಿಮಗೆ ಅರಕಲಗೂಡು ಕ್ಷೇತ್ರದಲ್ಲಿ ಟಿಕೆಟ್ ಅನೌನ್ಸ್ ಮಾಡಿಲ್ಲ ಯಾಕ್ ಗೊತ್ತಾ? ಕಾಂಗ್ರೆಸ್ ಪಕ್ಷದ ರಿಪೋರ್ಟ್ ಹೇಳು ತ್ತಿದೆಯಂತೆ ನೀವು ಅರಕಲಗೂಡಿನಲ್ಲಿ ಸ್ಪರ್ಧೆ ಮಾಡಿದರೆ ಸೋಲ್ತಿರ ಅಂತ ಹಾಗಾಗಿ ಸಿದ್ದರಾಮಯ್ಯ ನಿಮ್ಮ ಹೆಸರನ್ನ ಅನೌನ್ಸ್ ಮಾಡಿಲ್ಲ.
ಹಾಗಾಗಿ ಮತ್ತೆ ಜೆಡಿಎಸ್ ಪಕ್ಷವನ್ನ ಹತ್ತಿರಕ್ಕೆ ತೆಗೆದುಕೊಳ್ಳಬೇಕು ಅಂತ ದೇವೇಗೌಡರನ್ನ ಕರಿಸುವ ಕೆಲಸ ಮಾಡಿದ್ರಿ. ಆದರೆ ದೇವೇಗೌಡ್ರು ಎರಡು ವರ್ಷದಿಂದ ನಿಮಗೆ ಯಾಕೆ ನೆನಪಾಗಲಿಲ್ಲ ಸ್ವಾಮಿ. ಇನ್ನು ಕುಮಾರಸ್ವಾಮಿಯವರು ದೇವಸ್ಥಾನದ ಉದ್ಘಾಟನೆಗೆ ಬಂದಾಗ ನೀವು ಆ ವೇದಿಕೆಯನ್ನು ಹಂಚಿಕೊಳ್ಳದೆ ಯಾಕೆ ದೂರ ಉಳಿದಿರಿ ಎಂಬ ಪ್ರಶ್ನೆ ಮಾಡಬೇಕಾಗುತ್ತೆ.
ಹಾಗಾಗಿ ನೀವು ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೊರಟಿದ್ದೀರಿ ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ನಮಗೇನು ಬೇಸರ ಇಲ್ಲ ಆದರೆ ವೈಯಕ್ತಿಕವಾಗಿ ನಾವು ಮಾತನಾಡುವ ಹಾಗೆ ಮಾಡಿಕೊಳ್ಳಬೇಡಿ. ಇಷ್ಟು ಮಾತಾಡಬೇಕಾದ್ರೆ ನೀವು ನನ್ನ ಬಗ್ಗೆ ಮಾತಾಡಿದ್ದಕ್ಕೆ ನಾನು ಮಾತನಾಡಿದ್ದೇನೆ ನಾನು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಇವತ್ತು ನನ್ನನ್ನು ಯಾರಾದ್ರೂ ಗೆಲ್ಸಿದ್ರೆ ಅದು ಅರಕಲಗೂಡು ಕ್ಷೇತ್ರ ಮತ್ತು ಹಾಸನ ಜಿಲ್ಲೆಯ ಜನರು ಎಂದರು.
ಯಾವ ಪಕ್ಷವನ್ನ ಬಿಡುತ್ತಿರುವ ನಿಮಗೆ ನಾವು ಯಾವುದೇ ಕಾರಣಕ್ಕೂ ನಿಮ್ಮನ್ನ ಉಳಿಸಿಕೊಳ್ಳುವ ಸಾಹಸ ಮಾಡೋಲ್ಲ ಎರಡು ವರ್ಷದಿಂದ ನಮ್ಮ ಪಕ್ಷದ ಮೇಲೆ ನಿಮಗೆ ಯಾವ ಪ್ರೀತಿಯು ಇಲ್ಲ ಜೊತೆಗೆ ನಮ್ಮ ಕಾರ್ಯ ಕರ್ತರು ಮೇಲು ನಿಮಗೆ ಪ್ರೀತಿ ಇಲ್ಲ. ನಾನು ಸಾಕಷ್ಟು ಬಾರಿ ನಿಮ್ಮನ್ನ ಗಮನಿಸಿದ್ದೇನೆ ನೀವು ಕಾಮಗಾರಿಯನ್ನು ಹಂಚಿಕೆ ಮಾಡುವಾಗ ನಮ್ಮ ಕಾರ್ಯಕರ್ತರನ್ನ ಹೊರತುಪಡಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುವ ಕೆಲಸ ಮಾಡಿದ್ದೀರಿ. ಅವತ್ತು ನೀವು ತುಂಬಾ ಕಷ್ಟದಲ್ಲಿದಿರಿ ಶಾಸಕರಾಗುವ ಸಂದರ್ಭದಲ್ಲಿ ಬಹಳಷ್ಟು ನಮ್ಮ ಕಾರ್ಯಕರ್ತರು ನಿಮ್ಮ ಕಷ್ಟಕ್ಕೆ ಆರ್ಥಿಕ ಸಹಾಯ ಮಾಡುದ್ರು. ಅದರಿಂದ ನೀವು ಇವತ್ತು ಗೆದ್ದು ಶಾಸಕರಾದ್ರಿ. ಬಳಿಕ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ನಂತರ ಅರಕಲಗೂಡಿಗೆ ಬಂದು ಎರಡು ಅದ್ಭುತ ಕಾರ್ಯಕ್ರಮಗಳನ್ನು ಕೊಟ್ಟರು. ನೀವು ಪಕ್ಷ ಬಿಟ್ಟು ಇವತ್ತು ಹೋಗುತ್ತಿದ್ದೀರಿ ನಾವು ಹೋಗಿ ನಾವ್ ಬೇಡವನಲ್ಲ ಆದರೆ ಹೋಗುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಪಕ್ಷದ ಮೇಲೆ ಗೂಬೆಕೂರಿಸುವ ಕೆಲಸ ಮಾಡಿ ಹೋಗಬೇಡಿ ಎಂದು ಪ್ರಜ್ವಲ್ ಎಚ್ಚರಿಕೆಯನ್ನು ನೀಡಿದರು