ಅರಕಲಗೂಡು: ನಿಂತಿದ್ದ ಟ್ರಾಕ್ಟರ್‌ಗೆ ಮಾರುತಿ ಒಮಿನಿ ವಾಹನ ಡಿಕ್ಕಿ ಹೊಡೆದು ವಾಹನದಲ್ಲಿದ ೧೦ ಮಂದಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರವಲಯ ಶಂಭುನಾಥಪುರ ಗ್ರಾಮದ ಬಳಿ ಮಧ್ಯಾಹ್ನ ನಡೆದಿದೆ.
ಮಾರುತಿ ವಾಹನದ ಚಾಲಕ ಚಲುವರಾಜ್, ರಾಜೇಗೌಡ, ಕೃಷ್ಟೇಗೌಡ, ಶೋಭಾ, ಸರೋಜ, ಜಗದೀಶ್, ಗೀತಾ, ಜ್ಯೋತಿ, ಪಾರ್ವತಿ, ಹೇಮಂತ್ ಗಾಯಾಯಗೊಂಡವರು. ಇವರೆಲ್ಲ ತಾಲ್ಲೂಕಿನ ಹುಲಿಕಲ್ ಗ್ರಾಮದವರಾಗಿದ್ದು ಬೇಲೂರಿನಲ್ಲಿ ನಡೆದ ರಥೋತ್ಸವಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇವರಲ್ಲಿ ೫ರಿಂದ ೬ ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ.
ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳಿಸಲಾಗಿದೆ. ಪಟ್ಟಣ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.