ಹಾಸನ: ಈ ಬಾರಿ ನನಗೇನಾದರೂ ಬಿಜೆಪಿಯಿಂದ ಅರಸೀಕೆರೆ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೇ ಖಂಡಿತವಾಗಿಯೂ ಈ ಬಾರಿ ಶಾಸಕನಾಗಿ ಆಯ್ಕೆ ಆಗಿ ಬರುತ್ತೇನೆ ಎಂದು ಪಕ್ಷದ ಮುಖಂಡ ಕಿಶೋರ್ ಕುಮಾರ್ ವಿಶ್ವಾಸವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡಿ, ನಾನು ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಸುಮಾರು ೩೦ ವರ್ಷಗಳ ಕಾಲದಿಂದಲೂ ಎಲೆಮರೆ ಕಾಯಿಯಂತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ದುರ್ಗಪ್ಪ ಶೆಟ್ಟ್ರು ಮತ್ತು ಎ.ಎಸ್. ಬಸವರಾಜಣ್ಣ ಅವರಿಂದ ಇಲ್ಲಿಯವರೆಗೂ ಸಾಕಷ್ಟು ಚುನಾವಣೆಗಳನ್ನು ನೋಡಿದ್ದೇನೆ.
ಪ್ರತಿ ಬಾರಿಯೂ ಸಾಮಾನ್ಯವಾಗಿ ಅರಸೀಕೆರೆಯ ಸ್ಥಳೀಯ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತಿತ್ತು. ಈ ಬಾರಿ ನೂರಾರು ಕೋಟಿ ಹಣ ಇಟ್ಟುಕೊಂಡು ಬೇರೆ ಜಿಲ್ಲೆಯಿಂದ ಬಂದ ಅಭ್ಯರ್ಥಿಗೆ ಮಣೆಹಾಕಲಾಗಿದ್ದು, ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಒಳಜಗಳಕ್ಕೆ ಕಾರಣರಾಗಿದ್ದಾರೆ ಎಂದು ದೂರಿದರು.
ಈ ಚುನಾವಣೆಯಲ್ಲಿ ಲಿಂಗಾಯಿತ ಅಭ್ಯರ್ಥಿಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟರೇ ಅರಸೀಕೆರೆ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲುವುದು ನಿಶ್ಚಿತ ಎಂದು ನುಡಿದರು. ಚುಣಾವಣೆ ನಾಮಪತ್ರ ಸಲ್ಲಿಸಲು ಅವಕಾಶ ಇರುವುದರಿಂದ ಕ್ಷೇತ್ರದ ಬಗ್ಗೆ ಗಮನಹರಿಸಿ ಕೊನೆಗಳಿಗೆಯಲ್ಲಾದರೂ ಸೂಕ್ತ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಉತ್ತಮ ಎಂದು ಅಭಿಪ್ರಾಯಪಟ್ಟರು.