ಬೇಲೂರು: ಚುನಾವಣಾ ಆಯೋಗ ಜಾರಿಗೆ ತಂದಿರುವ ಕಾನೂನಿನ ಚೌಕಟ್ಟಿನಡಿಯಲ್ಲಿ ಯಾರೇ ಲೋಪ ವೆಸಗಿದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿ ಸಲಾಗುತ್ತದೆ ಎಂದು ಚುನಾವಣಾಧಿಕಾರಿ ಎಸ್ ಶಂಕರ್ ಹೇಳಿದರು.
ಬೇಲೂರು ವಿಧಾನ ಸಭಾ ೧೯೫ ಕ್ಷತ್ರದ ಚುನಾವಣಾ ಪೂರ್ವ ಸಿದ್ಧತೆ ಸಭೆಯಲ್ಲಿ ಪಕ್ಷಗಳ ಅಭ್ಯರ್ಥಿಗಳ ಪರ ಬಂದಿದ್ದ ಮುಖಂಡರೊಂದಿಗೆ ಮಾತನಾಡಿದ ಅವರು ಚುನಾವಣಾ ಆಯೋಗ ಈ ಬಾರಿ ಕಟ್ಟುನಿಟ್ಟಿನ ಕ್ರಮ ಹಾಗೂ ಕಾನೂನನ್ನು ಜಾರಿಗೆ ತಂದಿದ್ದು ಅದರ ನಿಯಮಗಳನ್ನು ಪ್ರತಿಯೊಬ್ಬ ಅಭ್ಯರ್ಥಿಗಳು ಪಾಲನೆ ಮಾಡಬೇಕಾಗುತ್ತದೆ ಒಬ್ಬ ಅಭ್ಯರ್ಥಿಯು ೪೦ ಲಕ್ಷ ರೂ ಗಳ ವರಗೆ ಚುನಾವಣಾ ಖರ್ಚನ್ನು ಮಾಡಲು ಅವಕಾಶವಿದೆ. ಪ್ರಚಾರಕ್ಕಾಗಿ ಮೂರು ವಾಹನಗಳಿಗೆ ಅನುಮತಿ ನೀಡಲಾಗುತ್ತದೆ.
ವಾಹನಗಳಿಗೆ ಧ್ವನಿವರ್ಧಕ ಅಳವಡಿಕೆ ನಿಗದಿಮಾಡಲಾಗಿದೆ, ವಾಹನದಲ್ಲಿ ಪಕ್ಷದ ಬ್ಯಾನರ್, ಫ್ಲೈಕ್ಸ್, ಶಾಲು, ಬಾವುಟ, ಟೋಪಿ ಇತರೆ ಯಾವುದೇ ಗುರುತಿನ ಚಿತ್ರಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಅಭ್ಯರ್ಥಿಗಳ ಚುನಾವಣೆ ಖರ್ಚಿಗೆ ಬರೆದು ಆಯೋಗಕ್ಕೆ ಪತ್ರ ಬರೆಯಲಾಗುತ್ತದೆ. ವಾಹನದಲ್ಲಿ ಒಂದು ಲಕ್ಷಕಿಂತ ಹೆಚ್ಚು ಹಣವನ್ನು ಹೊಂದಿ ದ್ದರೆ ಹಣವನ್ನು ವಶಪಡಿಸಿಕೊಂಡು ಮೇಲಧಿಕಾರಿಗಳಿಗೆ ನೀಡಲಾಗುತ್ತದೆ ಎಂದರು.
ಸಹಾಯಕ ಚುನಾವಣಾ ಧಿಕಾರಿ ಎಂ ಮಮತಾ ಮಾತನಾಡಿ ತಾಲ್ಲೂಕಿನಲ್ಲಿ ಒಟ್ಟು ೪೬೯೦ ಜನ ಹೊಸ ಮತದಾರರು ಇದ್ದು ೮೦ ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರು, ವಯಸ್ಕರಿಗೆ ಮನೆಯಲ್ಲಿ ಮತದಾನ ಮಾಡುವ ಪೋಸ್ಟ್ ಒಟಿಂಗ್ ಎಂಬ ಹೊಸ ತಂತ್ರಾಂಶ ಸಿದ್ದಪಡಿಸಲಾಗಿದ್ದು ಮನೆಯಲ್ಲೇ ಮತದಾನ ಮಾಡಬಹುದಾಗಿದೆ, ತಾಲ್ಲೂಕಿನಲ್ಲಿ ೫ ಚೆಕ್ ಪೋಸ್ಟುಗಳನ್ನು ತೆರೆದಿದ್ದು ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಕಾನೂನು ಮೀರಿದ ವಸ್ತುಗಳು ಹಣ ಸಿಕ್ಕಿದರೆ ವಶಪಡಿಸಿಕೊಳ್ಳಲಾಗುತ್ತದೆ. ಇದಕ್ಕೆ ೧೮ ತಂಡಗಳ ರಚನೆ ಮಾಡಲಾಗಿದ್ದು ಯಾವುದೇ ಲೋಪ ಕಂಡು ಬಂದಲ್ಲಿ ಮೊಬೈಲ್ ಆಪ್ ಮೂಲಕ ದೂರನ್ನು ಆಯೋಗಕ್ಕೆ ೦೮೧೭೭೨೨೨೨೩೪ ದೂರವಾಣಿಗೆ ದೂರನ್ನು ನೀಡಬಹುದು ಎಂದರು.