ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಸೋಮವಾರ ಹೊಳೆನರಸೀಪುರ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ರೇವಣ್ಣ ಫ್ಯಾಮಿಲಿ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿರುವ ಲಕ್ಷ್ಮಿ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರೇವಣ್ಣಗೆ ಪತ್ನಿ ಭವಾನಿ ರೇವಣ್ಣ, ಪುತ್ರರಾದ ಪ್ರಜ್ವಲ್ ಹಾಗೂ ಸೂರಜ್ ಸಾಥ್ ನೀಡಿದರು. ನಾಮಪತ್ರ ಸಲ್ಲಿಸಿರುವ ಹಿನ್ನೆಲೆ ಹೆಚ್?.ಡಿ. ರೇವಣ್ಣ ಆಸ್ತಿ ವಿವರ ಬಹಿರಂಗವಾಗಿದ್ದು, ಕೋಟಿ ಕೋಟಿ ಆಸ್ತಿಯನ್ನು ರೇವಣ್ಣ ಭವಾನಿ ದಂಪತಿ ಹೊಂದಿದ್ದಾರೆ.
ರೇವಣ್ಣ ಭವಾನಿ ದಂಪತಿ ಆಸ್ತಿ ವಿವರ:
ಒಟ್ಟು ಆಸ್ತಿ: ೪೩ ಕೋಟಿ,೩೭ ಲಕ್ಷದ,೫೬ ಸಾವಿರದ ೪೪೧ ರೂ ಮೌಲ್ಯದ ಆಸ್ತಿಯನ್ನು ರೇವಣ್ಣ ಹೊಂದಿದ್ದಾರೆ.
ಘೋಷಣೆ ಮಾಡಿರುವ ಆಸ್ತಿ: ೩೮ ಕೋಟಿ,೨೫ ಲಕ್ಷದ,೨೨ ಸಾವಿರದ ೭೭೭ ರೂ. ಚರಾಸ್ತಿ: ಸುಮಾರು ೭.೩೬ ಕೋಟಿ ರೂ.
ಸ್ಥಿರಾಸ್ತಿ: ೩೬.೦೧ ಕೋಟಿ ರೂ.
ಚರಾಸ್ತಿ (ಭವಾನಿ ರೇವಣ್ಣ ಬಳಿ): ೮.೬೬ ಕೋಟಿ ರೂ. ( ಪತಿಗಿಂತ ಒಂದು ಕೋಟಿ ಹೆಚ್ಚಿನ ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.)ಸ್ಥಿರಾಸ್ತಿ (ಭವಾನಿ ರೇವಣ್ಣ ಬಳಿ): ೨೯.೫೮ ಕೋಟಿ ರೂ. ಚಿನ್ನಾಭರಣ (ಭವಾನಿ ರೇವಣ್ಣ ಬಳಿ): ಒಟ್ಟು ಸುಮಾರು ೨.೨೦ ಕೋಟಿ ರೂ. (೪೬ ಕೆಜಿ ಬೆಳ್ಳಿ, ಸುಮಾರು ೩ ಕೆಜಿ ಚಿನ್ನ, ೨೫ ಕ್ಯಾರೆಟ್ ವಜ್ರದ ಆಭರಣ ಸೇರಿದಂತೆ) ಚಿನ್ನಾಭರಣ (ರೇವಣ್ಣ ಬಳಿ): ೩೨೦ ಗ್ರಾಂ
ಸಾಲ: ಕೋಟಿ ಕೋಟಿ ಆಸ್ತಿ ಇದ್ದರು ರೇವಣ್ಣ ೯ ಕೋಟಿ ರೂ ಸಾಲ ಮಾಡಿದ್ದಾರೆ. (ತಾಯಿ ಚನ್ನಮ್ಮರಿಂದ ೬೦ ಲಕ್ಷ, ತಂದೆ ದೇವೇಗೌಡರಿಂದ ೩೧ ಲಕ್ಷ, ಸಹೋದರ ರಮೇಶ್?ರಿಂದ ೪ ಕೋಟಿ ಮತ್ತು ಮನೆ ನಿರ್ಮಾಣಕ್ಕೆ ೨ ಕೋಟಿ ಸಾಲ ಮಾಡಿದ್ದಾರೆ)
ಸಾಲ: ಭವಾನಿ ರೇವಣ್ಣ ಕೂಡ ೫.೨೮ ಕೋಟಿ ರೂ. ಸಾಲಗಾರ್ತಿ.