News Kannada
Thursday, June 01 2023
ಹಾಸನ

ಹಾಸನ ಜಿಲ್ಲೆಯಲ್ಲಿ ಇಂದು ೨೧ ನಾಮಪತ್ರ ಸ್ವೀಕಾರ

Don't let the voter be a mute spectator at a political fair!
Photo Credit : News Kannada

ಹಾಸನ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ೧೫ ಅಭ್ಯರ್ಥಿಗಳಿಂದ ಒಟ್ಟು ೨೧ ನಾಮಪತ್ರಗಳು ಸಲ್ಲಿಕೆಯಾಗಿವೆ.

೧೯೩- ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಗಳಾಗಿ ನಟರಾಜು, ಸುಬ್ರಹ್ಮಣ್ಯ ಹಾಗೂ ಎಂ.ಜಿ.ನಂಜೇಗೌಡ, ಬಿ.ಜೆ.ಪಿ ಅಭ್ಯರ್ಥಿ ಚಿದಾನಂದ ಸಿ.ಆರ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪವಿತ್ರ ಜಿ.ಕೆ ಇವರು ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

೧೯೪- ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಬಿ.ಜೆ.ಪಿ ಪಕ್ಷದ ಜಿ.ವಿ. ಬಸವರಾಜು, ಲೋಕಶಕ್ತಿ ಪಕ್ಷದ ಅಭ್ಯರ್ಥಿ ಹೊಳೆಯಪ್ಪ, ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿ ಉಮೇಶ್ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

೧೯೫-ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಬಿ.ಎಸ್.ಪಿ ಪಕ್ಷದಿಂದ ಗಂಗಧಾರ್ ಡಿ ಎಸ್. ನಾಮಪತ್ರ ಸಲ್ಲಿಸಿದ್ದಾರೆ.

೧೯೭-ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶ್ರೆಯಸ್ ಎಂ.ಪಟೇಲ್ ಹಾಗೂ ಬಿ.ಎಸ್.ಪಿ ಅಭ್ಯರ್ಥಿ ತಾರೇಶ್ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

೧೯೮-ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯೋಗಾರಮೇಶ್, ಪಕ್ಷೇತರ ಅಭ್ಯರ್ಥಿಗಳಾಗಿ ಎ.ಎಂ.ಮಲ್ಲೇಶ್ ಹಾಗೂ ವಿಜಯ ಭಾರತಿ,ಭಾರತೀಯ ಡಾ.ಬಿ.ಆರ್ ಅಂಬೇಡ್ಕರ್ ಜನತಾ ಪಕ್ಷದ ಅಭ್ಯರ್ಥಿ ಎಚ್.ಪಿ ಮಂಜುನಾಥ್ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

೧೯೯-ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿ ಎಸ್ ಮಂಜುನಾಥ ಎರಡು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿ ರವಿ ಜಿ.ಸಿ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್. ಅವರು ತಿಳಿಸಿದ್ದಾರೆ.

See also  ಹಾಸನ: ಮಿಕ್ಸರ್-ಗ್ರೈಂಡರ್ ಸ್ಫೋಟದ ಹಿಂದೆ ಪ್ರಿಯಕರನ ಕೈವಾಡವಿದೆ- ಕರ್ನಾಟಕ ಪೊಲೀಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು