ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನನ್ನನ್ನು ಕಣಕ್ಕಿಳಿಸಿದ್ದು ಇಲ್ಲಿ ನಾನು ಅಭ್ಯರ್ಥಿಯಲ್ಲ. ಭವಾನಿ ಅಕ್ಕ ಅವರೇ ಅಭ್ಯರ್ಥಿ ಎಂದು ಹೇಳಿದ ಸ್ವರೂಪ್ ಪ್ರಕಾಶ್ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸೋಣ, ಇಲ್ಲಿಯ ದುರಹಂಕಾರದ ಶಾಸಕರನ್ನು ಮಟ್ಟ ಹಾಕಬೇಕಿದೆ. ಹಾಸನದ ಬಿಜೆಪಿ ಶಾಸಕರ ದುರಹಂಕಾರದ ಮಾತಿಗೆ ಮೇ ೨೦ ರಂದು ಹಾಸನದ ಜೆಡಿಎಸ್ ಮೆರವಣಿಗೆಯಲ್ಲಿ ಸೇರುವ ಜನರೇ ಉತ್ತರವಾಗಬೇಕು , ಹಾಗಾಗಿ ನಾಳೆಯ ಮೆರವಣಿಗೆಯಲ್ಲಿ ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಉತ್ತರ ಕೊಡಿ ಎಂದು ಮನವಿ ಮಾಡಿದರು.
ಹೇಮಾವತಿ ನಗರ, ಹೊಳೆನರಸೀಪುರ ಎಂದವರಿಗೆ ನೀರು ಕುಡಿಸೋದು ಗೊತ್ತಿದೆ-ಪ್ರಜ್ವಲ್
ಪಕ್ಷದಲ್ಲಿ ಇಲ್ಲಿಯವರೆಗೆ ಇದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಇನ್ನು ಪಕ್ಷದ ಅಭ್ಯರ್ಥಿ ಪರವಾಗಿ ಪ್ರತಿಯೊಬ್ಬರು ದುಡಿಯಬೇಕಿದೆ. ನಾವು ಬೇರೆ ತಾಲ್ಲೂಕುಗಳಿಂದ ಜನರನ್ನು ಕರೆಸಬೇಕಿಲ್ಲ. ಹಾಸನ ಕ್ಷೇತ್ರದ ಜನರೇ ಬಂದು ಹೊಳೆರನಸೀಪುರ- ಹೇಮಾವತಿ ನಗರ ಎಂದವರಿಗೆ ತಕ್ಕ ಪಾಠ ಕಲಿಸಬೇಕಿದೆ. ಹೊಳೆನರಸೀಪುರ , ಹೇಮಾವತಿ ನಗರ ಎಂದವರಿಗೆ ಕೆರೆ ನೀರು ಕುಡಿಸುವುದು ಗೊತ್ತಿದೆ ಎಂದ ಸಂಸದ ಪ್ರಜ್ವಲ್ ರೇವಣ್ಣ ಇಷ್ಟು ದಿನ ನಿಮ್ಮ ಹವಾ..! ಇಲ್ಲಿಂದೇನಿದ್ದರೂ ನಮ್ಮದೇ ಹವಾ ಎನ್ನುವ ಮೂಲಕ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದರು.
ಹಾಸನ : ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ಕಣ ರಂಗೇರುತ್ತಿದ್ದು. ಹಾಲಿ ಶಾಸಕರನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರವಾಗಿ ಹೆಚ್.ಡಿ.ರೇವಣ್ಣ ಕುಟುಂಬ ಒಗ್ಗಟ್ಟು ಪ್ರದರ್ಶಿಸಿತು. ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಭವಾನಿ ರೇವಣ್ಣ ಅವರು ಟಿಕೆಟ್ ಗೊಂದ ಲದ ಬಗ್ಗೆ ಈಗ ಚರ್ಚೆ ಅನಗತ್ಯ , ಇರುವ ೨೧ ದಿನದಲ್ಲಿ ಜೆಡಿಎಸ್ ಗೆಲ್ಲಿಸುವ ಸಂಕಲ್ಪ ಮಾಡಿ ದುರ ಹಂಕಾರವನ್ನು ಕಿತ್ತೊಗೆಯಬೇಕಿದೆ. ಎಂದು ಕರೆ ನೀಡಿದ ಅವರು ಯಾವುದೇ ಸಣ್ಣ ಪುಟ್ಟ ಅಸಮಾ ಧಾನ ಬದಿಗೊತ್ತಿ ಜೆಡಿಎಸ್ ಗೆಲ್ಲಿಸಲು ಚಾಲೆಂಜ್ ಸ್ವೀಕರಿಸಿ ಪಣ ತೊಟ್ಟು ಬಿಜೆಪಿ ತೆಗೆಯಲು ಮುಂದಾಗಿ ಎಂದು ಕರೆ ನೀಡಿದರು.
ದೇವೇಗೌಡರು ತಮ್ಮ ೯೦ನೇ ವಯಸ್ಸಿನಲ್ಲಿ ಪಕ್ಷಕ್ಕಾಗಿ ದುಡಿಯು ತ್ತಿದ್ದಾರೆ. ನಾನು ದೇವೇಗೌಡರು ಮತ್ತು ಪಕ್ಷಕ್ಕಿಂತ ದೊಡ್ಡವಳಲ್ಲ. ಹಾಗಾಗಿಯೇ ನಾನೇ ಕುಮಾರ ಸ್ವಾಮಿ ಅವರಿಗೆ ಕರೆ ಮಾಡಿ ಸ್ವರೂಪ್‌ಗೆ ಅವಕಾಶ ನೀಡಲು ಕೋರಿದ್ದೇನೆ. ಸ್ವರೂಪ್‌ನನ್ನು ನನ್ನ ಮಗನಂತೆ ನೋಡಿದ್ದೇನೆ. ಪರಿಪೂರ್ಣ ಆಶೀರ್ವಾದ ಮಾಡಿ ದ್ದೇನೆ. ನಮ್ಮ ವಿರೋಧಿ ಯಾರೇ ಇದ್ದರೂ ಸೋಲಿಸಿ ಜೆಡಿಎಸ್ ಅಧಿಕಾರಕ್ಕೆ ತನ್ನಿ ಎಂದ ಭವಾನಿ ರೇವಣ್ಣ ಅವರು ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಾಂಗ್ರೆಸ್ ಬಿಜೆಪಿ ಕಿತ್ತಾಟ ಇಡೀ ರಾಜ್ಯ ನೋಡಿದೆ. ಅಲ್ಪಸಂಖ್ಯಾತರ ಮೀಸಲಾತಿಯನ್ನು ಬಿಜೆಪಿ ಕಿತ್ತುಕೊಂಡಿದೆ. ಹಾಸನದಲ್ಲಿ ಪ್ರತಿಯೊಬ್ಬರು ಜೆಡಿಎಸ್ ಸ್ವಾಭಿಮಾನಕ್ಕಾಗಿ ಹೋರಾಡಿ ಜೆಡಿಎಸ್ ಗೆಲ್ಲಿಸಲು ಪಣ ತೊಡಿ ಎಂದು ಕರೆ ನೀಡಿದರು.
ಬಿಜೆಪಿ ರ್‍ಯಾಲಿಗೆ ಸೆಡ್ಡು ಹೊಡೆಯಲಿದೆಯಾ ನಾಳೆಯ ಜೆಡಿಎಸ್ ರ್‍ಯಾಲಿ!
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಶಾಸಕ ಪ್ರೀತಂ ಜೆ ಗೌಡ ಅವರ ನಾಮಪತ್ರ ಮೆರವಣಿಗೆ ರ್‍ಯಾಲಿಯಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದು. ನಾಳೆ ಜೆಡಿಎಸ್ ನಡೆಸುತ್ತಿರುವ ರ್‍ಯಾಲಿಯಲ್ಲಿಯೂ ಭಾರಿ ಸಂಖ್ಯೆಯಲ್ಲಿ ಜನರನ್ನು ಕರೆ ತರಲು ಜೆಡಿಎಸ್ ಮುಖಂಡರು ನಿರ್ಣಯಿಸುವ ಮೂಲಕ ಶಾಸಕ ಪ್ರೀತಂ ಗೌಡ ಅವರಿಗೆ ಸೆಡ್ಡು ಹೊಡೆಯಲು ಜೆಡಿಎಸ್ ಮುಂದಾಗಿದೆ.
ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಬಹು ದೊಡ್ಡ ಸಂಖ್ಯೆಯಲ್ಲಿ ನಾಳೆಯ ಮೆರವಣಿಗೆಗೆ ದೊಡ್ಡ ತಯಾರಿ ನಡೆಸಿರುವಂತೆ ಸ್ವರೂಪ್ ಪರ ಜೆಡಿಎಸ್ ಒಗ್ಗಟ್ಟು ಪ್ರದರ್ಶನ ನಾಳೆಯ ಜೆಡಿಎಸ್ ರ್‍ಯಾಲಿಯಲ್ಲಿ ಶಾಸಕರಿಗೆ ಸ್ಪಷ್ಟ ಸಂದೇಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.