ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ವರೂಪ್ ಅವರು ಗೆದ್ದು ಬರುವುದರಲ್ಲಿ ಯಾವುದೇ ಅನು ಮಾನವಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಈದ್ಗ ಮೈದಾನಕ್ಕೆ ತೆರಳಿ ಮುಸಲ್ಮಾನರಿಗೆ ಶುಭ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ಇವತ್ತಿನ ವಾತಾ ವರಣ ನೋಡಿದರೆ ೯೫ ಪ್ರತಿಶತ ಮುಸಲ್ಮಾನ್ ಬಾಂಧವರು ಜೆಡಿ ಎಸ್‌ಗೆ ಮತ ನೀಡುತ್ತೇವೆ ಎನ್ನುತ್ತಿದ್ದಾರೆ.
ವಾತಾವರಣ ಬಹಳ ಚೆನ್ನಾಗಿದ್ದು ಮೂರು ದಿನದಿಂದ ಬದಲಾವಣೆ ಗಾಳಿ ಬೀಸುತ್ತಿದೆ ಹಾಸನದಲ್ಲಿ ಎಲ್ಲಿ ನೋಡಿದರೂ ಜೆಡಿಎಸ್ ಬಾವುಟ ಹಾರುತಿದೆ ಎಂದರು.
ಜೆಡಿಎಸ್ ಕಾರ್ಯಕರ್ತರು ಸೈನಿಕರಂತೆ ಹೋರಾಟಕ್ಕೆ ಇಳಿದಿದ್ದು ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ಅವರು ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಕೂಡ ಜೆಡಿಎಸ್ ಪಕ್ಷ ತಂದೆ ತರುತ್ತೇವೆ ಎನ್ನುವ ಭಾವನೆ ಇದೆ. ವಿರೋಧಿ ಪಕ್ಷಗಳಲ್ಲಿ ತಪ್ಪು ಭಾವನೆ ಇತ್ತು, ಜೆಡಿಎಸ್ ನಲ್ಲಿ ಕಾರ್ಯಕರ್ತರು ಮುಖಂಡರು ಇಲ್ಲ ಎನ್ನುತ್ತಿದ್ದರು, ಆದರೆ ರ್ಯಾಲಿ ಬಳಿಕ , ಬಿಜೆಪಿಯಲ್ಲಿ ಕಾರ್ಯ ಕರ್ತರು ಮುಖಂಡರು ಕಾಣಿಸುತ್ತಿಲ್ಲ ಎಂದು ಟೀಕಿಸಿದರು.
ಹಾಸನ ವಿಧಾನಸಭಾ ಕ್ಷೇತ್ರ ಸಂಬಂಧಪಟ್ಟಂತೆ ೨೦ ದಿನದ ಹಿಂದೆ ನಿರ್ಣಯ ಮಾಡಿ ಆಗಿದ್ದು ಇನ್ನೂ ೨೦ ದಿನ ಚುನಾವಣೆ ಏನಿದೆ…!? ಆ ಚುನಾವಣೆ ದಿನ ಹಾಸನ ತಾಲೂಕಿನ ಜನ ಒಮ್ಮತದಿಂದ ಜೆಡಿಎಸ್ಗೆ ಮತ ನೀಡಬೇಕು ಎಂದು ತೀರ್ಮಾನ ಮಾಡಿದ್ದಾರೆ ಹಾಗಾಗಿ ನನಗೆ ಭರವಸೆ ಇದೆ ಈ ಬಾರಿ ನೂರಕ್ಕೆ ನೂರು ಜೆಡಿಎಸ್ ಗೆಲುವು ಸಾಧಿಸಲಿದೆ ಎಂದರು.
“ಚುನಾವಣೆ ಮುಗಿಯುವವರೆಗೆ ನಾನು ಯಾರ ಬಗ್ಗೆನೂ ಮಾತನಾಡು ವುದಿಲ್ಲ” ಎಂಬ ಪ್ರೀತಂ ಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು “ಅವರಿಗೆ ಮೂರು ವರ್ಷದ ಹಿಂದೆ ಈ ಬುದ್ಧಿ ಬಂದಿದ್ರೆ ಅನುಕೂಲ ಆಗುತ್ತಿತ್ತು ” ಎಂದರು.
ಕ್ಷೇತ್ರದ ಜನರಿಗೆ ಈಗ ಅವರ ಬಗ್ಗೆ ಗೊತ್ತಾಗಿದೆ , ನಾನು ಏನನ್ನು ಮಾತನಾಡಬೇಕಿಲ್ಲ ಜನರೇ ಮಾತನಾಡುತ್ತಿದ್ದಾರೆ ಅವರು ಏನೇ ತಂತ್ರಗಾರಿಕೆ ಮಾಡಿದರು ಕೂಡ ನಡೆಯುವುದಿಲ್ಲ ಎಂದರು.
ಇತ್ತೀಚೆಗೆ ಹೊಳೆನರಸೀಪುರ ದಿಂದ ನಿಲ್ಲುತ್ತೇನೆ ಅಂತ ಮಾಧ್ಯಮದವರನ್ನು ದಿಕ್ಕು ತಪ್ಪಿಸಿ ದರು ಅಂತ ಕೆಲಸ ಮಾಡುತ್ತಿರುತ್ತಾರೆ ಅದ್ಯಾವುದಕ್ಕೂ ಕಿವಿ ಕೊಡಲು ನಮ್ಮ ಕಾರ್ಯಕರ್ತರಾಗಲಿ ಕ್ಷೇತ್ರದ ಮತದಾರರಾಗಲಿ ತಯಾರಿಲ್ಲ ; ಈ ಬಾರಿ ನಿರ್ಣಯ ಮಾಡಿದ್ದು ಎಚ್ ಪಿ ಸ್ವರೂಪ್ ಅವರನ್ನು ಗೆಲ್ಲಿಸಿ ಕೊಳ್ಳಬೇಕು, ಜೆಡಿಎಸ್ ಪಕ್ಷ ತರಲೇಬೇಕು ಎಂದು ನಿರ್ಧರಿ ಸಿದ್ದೇವೆ ಎಂದು ಹೇಳಿದರು.
“ಬಿಜೆಪಿ ಅವರಿಗೆ ಭಯ ಶುರುವಾಗಿದೆಯೇ” ಎಂದು ನನ್ನನ್ನು ಕೇಳುವುದಲ್ಲ ಅವರ ಕಾರ್ಯ ಕರ್ತನ್ನು ಕೇಳಿದರೆ ಗೊತ್ತಾಗುತ್ತದೆ ಎಂದು ಹೇಳಿದರು.
ಎಚ್ ಡಿ ರೇವಣ್ಣ ವಿರುದ್ಧ ಕೆಎಂ ಶಿವಲಿಂಗೇಗೌಡ ವಾಗ್ದಾಳಿ ವಿಚಾರವಾಗಿ, ಮಾತನಾಡಿ “ನಾವು ಖಂಡಿತವಾಗಿಯೂ ಯಾವುದೇ ರೀತಿ ಗಂಭೀರವಾಗಿರಲಿ” ನಮ್ಮ ಕೆಲಸ ಮಾಡುವುದೇ ಮಾಡುತ್ತೇವೆ , ಎನ್ ಆರ್ ಸಂತೋಷ ಅವರನ್ನು ಗೆಲ್ಲಿಸಬೇಕು ಎಂಬ ಪಣತೊಟ್ಟಿದ್ದು, ಅದನ್ನೆ ಮಾಡುತ್ತೇವೆ…. ನಾವೇ ನಾದರೂ ಅನ್ಯಾಯ ಮಾಡಿದ್ದರೆ ತೆರೆಯಲಿ… ಅವಾಗ ನಾವು ಸಹ ತೆಗೆಯುತ್ತೇವೆ. ರೇವಣ್ಣ ಅವರು ಏನು ಅನ್ಯಾಯ ಮಾಡಿದ್ದಾರೆ ಅಂತ ತಿಳಿಸಲಿ ನಂತರ ನಾವು ಅದಕ್ಕೆ ಉತ್ತರ ಕೊಡುತ್ತೇವೆ, ನಾವು ಮಾಡಿರುವ ಸ್ವಲ್ಪ ಸಹಾಯಕಾದರೂ ಕೃತಜ್ಞತೆ ಇರಬೇಕಿತ್ತು ಅವರಿಗೆ ಎಂದು ಜರಿದರು.
ಮುಸ್ಲಿಮರಿಗೆ ಶುಭ ಕೋರಿಕೆ
ಪ್ರತಿ ವರ್ಷ ನಮ್ಮ ಕುಟುಂಬದಿಂದ ಇಫ್ತೆಯಾರ್ ಕೂಟ ಏರ್ಪಡಿಸಲಾಗುತ್ತಿತ್ತು, ಈ ಬಾರಿ ನಮ್ಮ ಕುಟುಂಬದವರು ಎಲ್ಲಾ ಕಡೆ ಹೋಗಿ ಮುಸಲ್ಮಾನ್ ಬಾಂಧವರಿಗೆ ಶುಭ ಕೋರು ತ್ತಿದ್ದಾರೆ. ಒಂದು ತಿಂಗಳಿನಿಂದ ಇಡೀ ಜಗತ್ತಿನಲ್ಲಿ ಮುಸಲ್ಮಾನ್ ಬಾಂಧವರು ಉಪವಾಸ ಆಚರಣೆ ಮಾಡಿ ಭಕ್ತಿ ನಿಷ್ಠೆ ತೋರಿಸುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದರು.