News Karnataka Kannada
Tuesday, April 16 2024
Cricket
ಹಾಸನ

ನಾಳೆಯ ಫಲಿತಾಂಶದತ್ತ ಎಲ್ಲರ ಚಿತ್ತ: ಹಾಲಿ ಶಾಸಕರು – ಹೊಸ ಮುಖಗಳಿಗೆ ಒಲಿಯಲಿದೆಯೇ ಅದೃಷ್ಟ…!!

Master mind of Operation Kamala which resulted in fall of JD(S) -Congress government joins Congress
Photo Credit : News Kannada

ಹಾಸನ : ೨೦೨೩ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದ್ದು ಜಿಲ್ಲೆಯ ಜನರಲ್ಲಿ ಯಾರು ಮುಂದಿನ ಸರ್ಕಾರದ ಆಡಳಿತ ಅವಧಿಗೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮುಂದುವರೆದಿದೆ.

ಈ ಹಿಂದೆ ನಡೆದ ಚುನಾ ವಣೆಯ ಫಲಿತಾಂಶವನ್ನು ಗಮನಿ ಸಿದರೆ ಹಾಲಿ ಶಾಸಕರೇ ಗೆದ್ದಿರುವ ಉದಾಹರಣೆ ಕಾಣಬಹುದು
ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಹೆಚ್ ಡಿ ರೇವಣ್ಣ ಅವರು ೧,೦೮,೫೪೧ ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಗೂರು ಮಂಜೇಗೌಡ ವಿರುದ್ಧ ಪಡೆದು ೪೩,೮೩೨ ಮತಗಳ ಅಂತರದಿಂದ ದಾಖಲೆ ಜಯ ಸಾಧಿಸಿದ್ದರು, ಈ ಚುನಾವಣೆಯಲ್ಲಿ ಬಾಗೂರು ಮಂಜೇಗೌಡ ಅವರು ೬೪,೭೦೯ ಮತ ಪಡೆದಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ದಿವಂಗತ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಸ್ಪರ್ಧೆ ನಡೆಸಿದ್ದು ಜೆಡಿಎಸ್ ಪಕ್ಷದಿಂದ ಎಂಟನೇ ಬಾರಿಗೆ ಆಯ್ಕೆ ಬಯಸಿ ರೇವಣ್ಣ ಅವರು ಸ್ಪರ್ಧೆ ನೀಡಿದ್ದು ಫಲಿತಾಂಶ ಹೊರಬರಬೇಕಿದೆ.

ಇನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎನ್ ಬಾಲಕೃಷ್ಣ ಸತತ ಎರಡು ಬಾರಿ ಗೆಲುವು ಸಾಧಿಸಿದ್ದರು ಅವರು ಕಾಂಗ್ರೆಸ್ನ ಸಿ.ಎಸ್ ಪುಟ್ಟೇಗೌಡ ಅವರ ವಿರುದ್ಧ ೧,೦೫,೫೧೬ ಮತಗಳನ್ನು ಪಡೆಯುವ ಮೂಲಕ ೫೩೦೧೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಸಿ ಎಸ್ ಪುಟ್ಟೇಗೌಡ ಈ ಚುನಾವಣೆಯಲ್ಲಿ ೫೨,೫೦೪ ಮತಗಳನ್ನು ಪಡೆದಿದ್ದರು, ಈ ಬಾರಿ ಹ್ಯಾಟ್ರಿಕ್ ಸಾಧನೆಯ ಗುರಿ ತಲುಪುವ ನಿರೀಕ್ಷೆಯಲ್ಲಿ ಬಾಲಕೃಷ್ಣ ಅವರಿದ್ದಾರೆ ಬರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಸ್ಪರ್ಧೆ ಮಾಡಿದ್ದು ಇವರಿಬ್ಬರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ .

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಸತತ ಮೂರು ಬಾರಿ ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದ ಕೆಎಂ ಶಿವಲಿಂಗೇಗೌಡರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ೯೩,೧೭೮ ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಜಿ.ಬಿ ಶಶಿಧರ್ ವಿರುದ್ಧ ೪೨,೮೮೧ ಮತಗಳ ಅಂತರದಿಂದ ಗೆಲುವು ಪಡೆದು ಮಿಂಚಿದ್ದರು ಕಾಂಗ್ರೆಸ್‌ನ ಶಶಿಧರ್ ರವರು ೫೦,೨೯೭ ಮತಗಳನ್ನು ಪಡೆದಿದ್ದರು ಈ ಬಾರಿ ನಾಲ್ಕನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಲು ಜೆಡಿಎಸ್ ತೊರೆದ ಶಿವಲಿಂಗೇ ಗೌಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು, ಇವರ ವಿರುದ್ಧ ಜೆಡಿಎಸ್ ಪಕ್ಷದಿಂದ ಎನ್ ಆರ್ ಸಂತೋಷ್ ಸ್ಪರ್ಧೆ ಮಾಡಿರುವುದು  ಪೈಪೋಟಿಗೆ ಕಾರಣವಾಗಿದೆ ಈ ಹಿನ್ನಲೆಯಲ್ಲಿ ನಾಳೆಯ ಫಲಿತಾಂಶ ತೀವ್ರ ಕುತೂಹಲದಿಂದ ಕೂಡಿದೆ.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಅವಧಿಗೆ ಆಯ್ಕೆ ಬಯಸಿರುವ ಬಿಜೆಪಿ ಯಿಂದ ಪ್ರೀತಂ ಜೆ ಗೌಡ ೬೩,೩೪೮ ಮತಗಳಿಂದ ಜೆಡಿಎಸ್ ಪಕ್ಷದ ಎಚ್‌ಎಸ್ ಪ್ರಕಾಶ್ ವಿರುದ್ಧ ೧೩೦೦೬ ಮತಗಳಿಂದ ಗೆಲುವು ಸಾಧಿಸಿದ್ದರು ಎಚ್‌ಎಸ್ ಪ್ರಕಾಶ್ ಅವರು ೫೦,೩೪೨ ಮತಗಳನ್ನು ಪಡೆದಿದ್ದರು ಆದರೆ ಈ ಬಾರಿ ದಿ|| ಹೆಚ್.ಎಸ್.ಪ್ರಕಾಶ್ ಪುತ್ರ ಸ್ವರೂಪ್ ಜೆಡಿಎಸ್‌ನಿಂದ ಸ್ಪರ್ಧೆ ನಡೆಸಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೆ ಆಯ್ಕೆಗೊಂಡಿರುವ ಸಾಕಷ್ಟಿದೆ. ಆದರೂ ಕ್ಷೇತ್ರದ ಮತದಾರ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬು ದಕ್ಕೆ ನಾಳೆ ಅಧಿಕೃತ ತೆರೆ ಬೀಳಲಿದೆ .

ಆಲೂರು -ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಶಾಸಕ ಎಚ್ ಕೆ ಕುಮಾರಸ್ವಾಮಿ ೬೨,೨೬೨ ಮತಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು ಬಿಜೆಪಿಯ ನಾರ್ವೆ ಸೋಮ ಶೇಖರ್ ೫೭,೩೨೦ ಮತಗಳನ್ನು ಪಡೆದಿದ್ದರು ಹಾಗೂ ಕುಮಾರಸ್ವಾಮಿ ಕೇವಲ ೪,೯೬೨ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ಕ್ಷೇತ್ರದ ಮತದಾರರು ನೀಡುವರು ಎಂಬುದು ಕುತೂಹಲ ಮೂಡಿಸಿದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುರಳಿ ಮೋಹನ್ ಹಾಗೂ ಬಿಜೆಪಿಯಿಂ ದ ಸಿಮೆಂಟ್ ಮಂಜು ಕುಮಾರ ಸ್ವಾಮಿಗೆ ತೀವ್ರ ಪೈಪೋಟಿ ನೀಡಿ ದ್ದಾರೆ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಎ.ಟಿ ರಾಮಸ್ವಾಮಿ , ೮೫,೦೬೪ ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎ.ಮಂಜು ಅವರು ೭೪,೪೧೧ ಮತಗಳನ್ನು ಪಡೆದಿದ್ದರು ಈ ಚುನಾವಣೆಯಲ್ಲಿ ಎ ಟಿ ರಾಮಸ್ವಾಮಿ ೧೦,೬೫೩ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಈ ಬಾರಿ ಎ.ಟಿ ರಾಮಸ್ವಾಮಿಯವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಎ.ಮಂಜು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ ಈ ಬಾರಿಯ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರ ದಲ್ಲಿ ಪಕ್ಷೇತರ ಅಭ್ಯರ್ಥಿ ಎಂಟಿ ಕೃಷ್ಣೆಗೌಡ ಅವರು ಸ್ಪರ್ಧೆ ಮಾಡಿದ್ದು ಫಲಿತಾಂಶ ಕಗ್ಗಂಟಾಗಿದೆ .

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಆಯ್ಕೆ ಬಯಸಿ, ಜೆಡಿಎಸ್ ನ ಕೆ ಎಸ್ ಲಿಂಗೇಶ್ ಸ್ಪರ್ಧೆ ಮಾಡಿದ್ದು ಕಳೆದ ಬಾರಿಯ ಚುನಾವಣೆಯಲ್ಲಿ ೬೪,೨೬೮ ಮತಗಳ ನ್ನು ಪಡೆದಿದ್ದರು ಪ್ರತಿಸ್ಪರ್ಧಿ ಬಿಜೆಪಿಯ ಎಚ್ ಕೆ ಸುರೇಶ್ ೪೪೫೭೮ ಮತಗಳನ್ನು ಪಡೆದಿದ್ದರು , ಲಿಂಗೇಶ್ ಅವರು ೧೯೬೯೦ ಮತಗಳಿಂದ ಜಯ ದಾಖಲಿಸಿದ್ದರು . ಈ ಬಾರಿ ಬಿಜೆಪಿ ಯಿಂದ ಎಚ್.ಕೆ.? ಸ್ಪರ್ಧೆ ಮಾಡಿದ್ದು ಕಾಂಗ್ರೆಸ್ ನಿಂದ ಬಿ ಶಿವರಾಂ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ನಾಳೆಯ ಫಲಿತಾಂಶ ಕುತೂಹಲ ಮೂಡಿಸಿದೆ.

ಒಟ್ಟಾರೆ ನಾಳೆ ನಡೆಯುವ ಮತ ಎಣಿಕೆ ಫಲಿತಾಂಶ ಹಾಲಿ ಇರುವ ಶಾಸಕರಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಲು ಅವಕಾಶ ಮಾಡಿಕೊಡಲಿ ದೆಯೇ ಹಾಗೂ ಹೊಸ ಮುಖಗಳನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಜನರು ಆಶೀರ್ವಾದ ನೀಡಲಿದ್ದಾ ರೆಯೇ ಎಂಬ ಕುತೂಹಲ ಮುಂದು ವರೆದಿದೆ. ನಾಳೆ ನಡೆಯುವ ಮತ ಎಣಿಕೆ ನಂತರ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು