News Karnataka Kannada
Saturday, April 20 2024
Cricket
ಹಾಸನ

ಬೇಲೂರು: ಆಸ್ತಿಗಾಗಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ, ಆರು ಮಂದಿ ವಿರುದ್ಧ ಪ್ರಕರಣ ದಾಖಲು

Case registered against six persons for assault with machete for property
Photo Credit : News Kannada

ಬೇಲೂರು: ಬೇಲೂರು ತಾಲ್ಲೂಕು ಬಿಕ್ಕೊಡು ಹೋಬಳಿಯ ಮಾಳೆಗೆರೆ ಗ್ರಾಮದ ಮಲ್ಲೇಶ್ ಗೌಡ ಎಂಬುವವರಿಗೆ ತಮ್ಮ ತಾಯಿಯಿಂದ ಬಂದ ಪಿತ್ರಾರ್ಜಿತ ಆಸ್ತಿಯಲ್ಲಿ ಸುಮಾರು ೩೦ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದು ಅದರಂತೆ ಮಳೆ ಬಂದಿದ್ದ ಕಾರಣ ತಮ್ಮ ಹೊಲದಲ್ಲಿ ತಮಗೆ ಸೇರಿದ ಜಮೀನು ಸರ್ವೆ ೨೧೧/೧ ರ ೧೪ ಕುಂಟೆ ಜಾಗದಲ್ಲಿ ತಮ್ಮ ಮಕ್ಕಳಾದ ಶಶಿಕುಮಾರ್ ಗೌರೀಶ್ ಹಾಗೂ ಸೊಸೆ ತೀರ್ಥ ಉಳುಮೆಮಾಡುತ್ತಿದ್ದ ಸಂದರ್ಭ ದಲ್ಲಿ ತನ್ನ ಸಹೋದರನ ಮಗ ನಾದ ಮಧುಕುಮಾರ್, ಚಂದ್ರೇಗೌಡ, ಕುಮಾರ್, ಜವರೇಗೌಡ,ರುದ್ರೇಶ್ ಲೊಕೇಶ್ ಎಂಬುವವರೊಂದಿಗೆ ಗುಂಪು ಗೂಡಿ ಬಂದು ಏಕಾಏಕಿ ಕೆಟ್ಟ ಪದ ಗಳಿಂದ ಬೈದಿದಲ್ಲದೆ ಮಾರಣಾಂತಿ ಕವಾಗಿ ಮಚ್ಚಿನಿಂದ ಹಲ್ಲೆಮಾಡಿದ್ದು ,ಮಲ್ಲೇಶ್ ಗೌಡರ ಮೇಲೆ ಹಲ್ಲೆ ನಡೆಸಲು ಹೋದ ಸಂದರ್ಭದಲ್ಲಿ ಅಡ್ಡ ಬಂದ ಶಶಿಕುಮಾರ್ ಗೆ ಬಲವಾಗಿ ತಲೆಗೆ ಮಚ್ಚಿನಿಂದ ಹೊಡೆದ ಪರಿಣಾಮವಾಗಿ ಕೂಡ ಲೇ ಅಲ್ಲಿದ್ದ ಸ್ಥಳೀಯ ಗ್ರಾಮಸ್ಥರು ಆಸ್ಪತ್ರೆ ಗೆ ದಾಖಲಿಸಿದ್ದಾರೆ.ಇವರ ಜೊತೆಗೆ ತೀವ್ರ ಹಲ್ಲೆಗೊಳಗಾಗಿದ್ದ ತಂದೆ ಮಲ್ಲೇಶ್ ಗೌಡ ,ಅತ್ತಿಗೆ ತೀರ್ಥ ಅಣ್ಣ,ಗೌರೀಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತ ನಾಡಿದ ಸಹೋದರ ಶಶಿ ಕುಮಾರ್ ನಮ್ಮ ತಂದೆಕಾಲ ದಿಂದಲೂ ಸಹ ನಮ್ಮ ಅಜ್ಜಿ ಯವರಿಗೆ ಬಂದಿದ್ದ ಜಮೀನನ್ನು ನಮ್ಮ ತಂದೆಯವರೇ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಆದರೆ೨೦೧೬ ರಲ್ಲಿ ನಮ್ಮ ತಂದೆಗೆ ಖಾತೆ ಬದಲಾವಣೆಗೆ ಮಾಡಲು ಅರ್ಜಿ ಸಲ್ಲಿಸಿದ್ದೆವು.ಆದರೆ ಅಲ್ಲಿದ್ದಂತ ಉದೀತ್ ಎಂಬ ಅಧಿಕಾರಿ ರಾಜ ಸ್ವ ನಿರೀಕ್ಷಕ ನಕಲಿ ದಾಖಲೆ ಸೃಷ್ಟಿಸಿ ನಮ್ಮ ಚಿಕ್ಕಪ್ಪನ ಮಕ್ಕಳಾದ ಮಧುಕುಮಾರ್ ಗೆ ಖಾತೆ ಮಾಡಲು ಹುನ್ನಾರ ನಡೆಸಿದ್ದ.ಇದನ್ನು ತಿಳಿದು ನಾವು ತಹಶೀಲ್ದಾರ್ ಅವರಿಗೆ ಈತನ ಬಗ್ಗೆ ದೂರು ನೀಡಿದಾಗ ನೀವು ಯಾವ ರೀತಿ ಖಾತೆ ಮಾಡಿ ಸಿಕೊಳ್ಳುತ್ತೀರಾ ಎಂದು ನಮ್ಮ ತಂದೆಯ ಮೇಲೆ ಉದೀತ್ ಅವರು ನಮಗೆ ಧಮ್ಕಿ ಹಾಕಿದ್ದ ನಂತರ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಅಲ್ಲಿಂದ ನಮಗೆ ನ್ಯಾಯ ಸಿಕ್ಕಿದ್ದು ನಾವು ಅಂದಿನಿಂದಲೂ ಉಳುಮೆ ಮಾಡಿಕೊಂಡು ಬರುತ್ತಿದ್ದು ಆದರೆ ಕೆಲ ದಿನಗಳಿಂದ ಯಾರೊಇ ಕೆಲವರ ಮಾತು ಕೇಳಿ ಹಣದ ಮದದಿಂದ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ನಮಗಳ ಮೇಲೆ ಹಲ್ಲೆ ನಡೆಸಿದ್ದು ಹಾಗೂ ನಮ್ಮ ಕುಟುಂಬದ ಮೇಲೆಮಾರಣಾಂತಿಕ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿ ರುವ ಅರೇಹಳ್ಳಿ ಪೊಲೀಸರು ಮಧುಕುಮಾರ್ ,ಚಂದ್ರೇಗೌಡ, ಕುಮಾರ್ ,ಗೌರೇಗೌಡ, ಲೊಕೇ ಶ್, ರುದ್ರೇಶ್ ಎಂಬುವವರ ಮೇಲೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿಕೊಂಡು ಹೊಡೆದಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು