News Karnataka Kannada
Friday, March 29 2024
Cricket
ಹಾಸನ

ಬೇಲೂರು: ಅರ್ಹರಿಗೆ ನಿವೇಶನ ಒದಗಿಸಲು ಪುರಸಭೆ ಬದ್ಧ

Belur: Municipality commits to providing plots to deserving
Photo Credit : News Kannada

ಬೇಲೂರು: ಪಟ್ಟಣದ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಹಾಗೂ ಪೌರ ಕಾರ್ಮಿಕರಿಗೆ ನಿವೇಶನಗಳನ್ನು ನಿಸ್ಪಕ್ಷಪಾತವಾಗಿ ವಿತರಿಸಲು ಪುರಸಭೆ ಬದ್ಧವಾಗಿದೆ ಎಂದು ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

ಸುಮಾರು ೨೫ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಹರಸಾಹಸವಾಗುತ್ತಿತ್ತು. ಅಲ್ಲದೆ ಈಗಾಗಲೇ ಸರ್ಕಾರಿ ಜಾಗದಲ್ಲಿ ಭೂಮಿಯನ್ನು ಗುರುತು ಮಾಡಿದ್ದರೂ ಸಹ ಅದನ್ನು ಪಡೆಯಲು ವಿಫಲವಾಗಿತ್ತು. ಆದರೆ ಬೇಲೂರಿನ ಪುರಸಭೆ ಅಧ್ಯಕ್ಷೆಯ ತೀರ್ಥಕುಮಾರಿ ಅವರ ಹೋರಾಟ ಹಾಗೂ ಕಂದಾಯ ಇಲಾಖೆಯ ದಂಡಾಧಿಕಾರಿ ಎಂ ಮಮತಾ ಅವರ ಸಮಯ ಪ್ರಜ್ಞೆ ಹಾಗೂ ಅಧ್ಯಕ್ಷರ ನಿಶ್ಚಲ ದೃಢ ನಿರ್ಧಾರದಿಂದಾಗಿ ಇಂದು ೨೦೦ ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಸರೆಯಾಗಿದೆ. ಅದಕ್ಕಾಗಿ ರಾಯಪುರದಲ್ಲಿ ರುವ ಸರ್ವೆ ನಂಬರ್ ೧೯ ರಲ್ಲಿ ೫ ಎಕರೆ ಸರ್ಕಾರಿ ಭೂಮಿ ಯನ್ನು ಕೆಲ ರೈತರು ಒತ್ತು ವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು. ಈ ಜಾಗವನ್ನು ೨೦೨೧ ರಲ್ಲಿ ಅಂದಿನ ತಹಶೀಲ್ದಾರ್ ನಟೇಶ್ ಅವರು ಗುರುತು ಮಾಡಿ ನಿವೇಶನ ರಹಿತರಿಗೆ ನೀಡಲು ನೀಲ ನಕ್ಷೆ ತಯಾರು ಮಾಡಿದ್ದು ಅದರಂತೆ ಪುರಸಭೆ ಅಧ್ಯಕ್ಷರಾದ ತೀರ್ಥಕುಮಾರಿ ವೆಂಕಟೇಶ್ ಹಾಗೂ ತಹಶೀಲ್ದಾರ್ ಎಂ ಮಮತಾ ಅವರು ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡ ಜಾಗವನ್ನು ರೈತರ ಮನವೊಲಿಸಿ ಬಿಡೊಸಲು ಸಫಲರಾಗಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ನಮ್ಮೆಲ್ಲಾ ಸದಸ್ಯರ ಸಹಕಾರ ಹಾಗೂ ನಮ್ಮೆಲ್ಲಾ ಅಧಿಕಾರಿಗಳ ಸಹಕಾರದಿಂದ ಬಹುದಿನದಿಂದ ನೆನೆಗುದಿಗೆ ಬಿದ್ದಂತ ಆಶ್ರಯ ಯೋಜನೆಯ ನಿವೇಶನ ಹಂಚಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ.ಅಲ್ಲದೇ ನಿವೇಶನವನ್ನು ಕಾನೂನಿನ ಅಡಿಯಲ್ಲಿ ಹಂಚಲಾಗುವುದು. ಸುಮಾರು ೨೦ ವರ್ಷಗಳಿಂದ ಒಬ್ಬರಿಗೂ ನಿವೇಶನ ಹಂಚಲು ಪುರಸಭೆ ವಿಫಲವಾಗಿತ್ತು. ಇದಕ್ಕೆ ಹಲವಾರು ಕಾರಣ, ಜಾಗದ ಸಮಸ್ಯೆ ಇತ್ತು. ಅಲ್ಲದೇ ಈ ಹಿಂದೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದ ಎಂ ಆರ್ ವೆಂಕಟೇಶ್ ಅವರ ಸತತ ಪರಿಶ್ರಮ ಹಾಗೂ ಹಿಂದಿನ ತಹಶೀಲ್ದಾರ್ ನಟೇಶ್ ಅವರ ಸಹಕಾರದಿಂದ ರಾಯಪುರ ಗ್ರಾಮದ ಸರ್ವೆ ನಂಬರ್೧೯ ರಲ್ಲಿ ೫ ಎಕರೆ ಭೂ ಪ್ರದೇಶ ಮಂಜೂರು ಮಾಡಿದ್ದೆವು.ಆದರೆ ಅದು ನಮ್ಮ ಕಚೇರಿಯ ವಶಕ್ಕೆ ನೀಡಿರಲಿಲ್ಲ.

ಇಂದಿನ ತಹಶೀಲ್ದಾರ್ ಎಂ ಮಮತಾ ಅವರ ಸಹಕಾರದಿಂದಜಾಗದ ಸಂಪೂರ್ಣ ಸರ್ವೆ ನಡೆಸಿಇಂದು ನಮಗೆ ಜಾಗದ ಸಂಪೂರ್ಣ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಈಗಾಗಲೇ ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ ನೀಲ ನಕ್ಷೆ ಸಿದ್ದಪಡಿಸಲು ಯೋಜನಾ ಪ್ರಾಧಿಕಾರಕ್ಕೆ ಕಳಿಸಲು ದಾಖಲೆ ನೀಡುತ್ತಿದ್ದೇವೆ. ಇದರಿಂದಾಗಿ ಸುಮಾರು ೨೦೦ ಕುಟುಂಬಗಳಿಗೆ ನಿವೇಶನ ಸಿಗಲಿದೆ. ಇದರಲ್ಲಿ ಪುರಸಭೆ ವ್ಯಾಪ್ತೀಯ ಗುಡಿಸಲು ವಾಸಿಗಳಿಗೆ ಅರ್ಹ ಫಲಾನುಭವಿಗಳಿಗೆ ಎಲ್ಲಾ ಸದಸ್ಯರ ಜೊತೆ ಚರ್ಚಿಸಿ ಯಾವುದೇ ರಾಜಕೀಯ ಹೊರತುಪಡಿಸಿ ನಿಷ್ಪಕ್ಷಪಾತವಾಗಿ ಯಾರ ಪ್ರಭಾವಕ್ಕೆ ಒಳಗಾಗದೆ ಕಡುಬಡವರಿಗೆ ನೀಡಲಾಗುವುದು. ಈಗ ಮತ್ತೆ ಹೊಸ ದಾಗಿ ಅರ್ಜಿಗಳನ್ನು ಪಡೆಯುವುದಾಗಿ ತಿಳಿಸಿದರು.

ಉಪಾಧ್ಯಕ್ಷೆ ಜಮೀಲಾ ತೌಫಿಕ್,ಪುರಸಭೆ ವ್ಯವಸ್ಥಾಪಕ ಪ್ರಶಾಂತ್,ಆರ್ ಓ ಹರೀಶ್,ಪ್ರಸನ್ನ,ಆರೋಗ್ಯಾಧಿಕಾರಿ ಲೋಹಿತ್, ಪೃಥ್ವಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು