News Kannada
Friday, June 09 2023
ಹಾಸನ

ಬೇಲೂರು: ನನ್ನ ಜೀವನ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಕೈ ಜೋಡಿಸಲು ಕರೆ

My life calls me to join hands with my clean city campaign
Photo Credit : News Kannada

ಬೇಲೂರು: ಪಟ್ಟಣವನ್ನು ಸುಂದರ ನಗರವನ್ನಾಗಿಸುವ ಗುರಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಶಾಸಕ ಹೆಚ್ ಕೆಸುರೇಶ್ ಕರೆ ನೀಡಿದರು.

ಪಟ್ಟಣದ ಪುರಸಭೆ ಮುಂಭಾಗದಲ್ಲಿ ಆರ್ ಆರ್ ಆರ್ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಸಕರಾಗಿ ಆಯ್ಕೆಯಾದ ನಂತರ ಇದು ನನ್ನ ಮೊದಲ ಕಾರ್ಯಕ್ರಮ. ಸ್ವಚ್ಚ ಭಾರತದ ಅಭಿಯಾನದಡಿ ಈಗಾಗಲೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನನ್ನ ಜೀವನ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಎಲ್ಲರೂ ಸಹ ಕೈ ಜೋಡಿಸಬೇಕು.ಇದರ ಉದ್ದೇಶ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯ ಸಹ ಸದೃಡವಾಗಿರುತ್ತದೆ.

ಅದಕ್ಕಾಗಿ ನೀವೆಲ್ಲರೂ ಸಹ ನಮ್ಮ ಜೊತೆ ಕೈ ಜೋಡಿಸಬೇಕು. ತಮ್ಮ ಮನೆಗಳಲ್ಲಿ ನವೀಕರಿಸಿ ಮರುಬಳಕೆಗೆ ಮಾಡಬಹುದಾದ ಸುಮಾರು ಹತ್ತು ಹಲವು ವಸ್ತುಗಳನ್ನು ಹೊರಗಡೆ ಬಿಸಾಡದೆ ಪುರಸಭೆಯವರು ಸ್ಥಾಪಿಸಿರುವ ಕೇಂದ್ರಗಳಲ್ಲಿ ಅವುಗಳನ್ನು ನೀಡುವಂತೆ ಮನವಿ ಮಾಡಿದ ಅವರು ಸಾರ್ವಜನಿಕರು ಪ್ಲಾಸ್ಟಿಕ್ ಉಪಯೋಗಿಸುವುದನ್ನು ಮೊದಲು ಕಡಿಮೆ ಮಾಡಿದಾಗ ಮಾತ್ರ ನಾವು ಪರಿಸರ ಸ್ವಚ್ಛ ಮಾಡಲು ಸಾಧ್ಯ ಎಂದರು.

ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಉತ್ತಮ ಕಾಮಾಗರಿಯಾಗುತ್ತಿದ್ದು ಅವುಗಳನ್ನು ಗುಣಮಟ್ಟದಲ್ಲಿ ಇರಬೇಕು. ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಮದ್ಯವರ್ತಿಗಳನ್ನು ಸೇರಿಸದೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಸಹಕಾರ ಪಡೆದು ನೊಂದಂತವರಿಗೆ ಸಹಾಯ ಮಾಡುವ ಮೂಲಕ ಉತ್ತಮ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ ಅವರು ತಾಲೂಕಿನಲ್ಲಿ ಭ್ರಷ್ಟಾಚಾರ ಮುಕ್ತ ಮಾಡುವ ಉದ್ದೇಶದಿಂದ ಜನತೆ ನನಗೆ ಆರ್ಶಿರ್ವಾದ ಮಾಡಿದ್ದು ಅದನ್ನು ಮಾಡಿ ಅವರ ನಂಬಿಕೆ ಉಳಿಸಿಕೊಳ್ಳುವುದು ಸತ್ಯ.ಅಲ್ಲದೆ ಪ್ರತೀ ೨೩ ವಾರ್ಡ್ ಗಳಿಗೂ ಖುದ್ದು ಭೇಟಿ ನೀಡಿ ಅಲ್ಲಿಯ ಸಮಸ್ಯೆ ಗಳನ್ನು ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಸೇರಿ ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಗೆ ನಮ್ಮೊಂದಿಗೆ ನಿಯೋಗ ತೆರಳಿ ಅಭಿವೃದ್ಧಿ ಗೆ ಹೆಚ್ಚಿನ ರೀತಿಯ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಂತರ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವಿದ್ಯಾವಂತರಿಂದಲೇ ಇಂದು ಪಟ್ಟಣದಲ್ಲಿ ಅಸ್ವಚ್ಛ ತೆ ಕಾರಣವಾಗುತ್ತಿದೆ.
ಇದು ವಿಶ್ವ ವಿಖ್ಯಾತ ಪ್ರವಾಸಿ ತಾಣ ಪ್ರತಿಯೊಬ್ಬರ ಸಹಕಾರ ಇದ್ದಾಗ ಮಾತ್ರ ಪುರಸಭೆಯು ಸ್ವಚ್ಚ ನಗರ ಮಾಡಲು ಸಾಧ್ಯ.ಆದರೆ ಇಂದು ನಮ್ಮ ಪೂರ್ವಿಕರು ಇತ್ತೀಚಿನ ದಿನಗಳಲ್ಲಿ ಮಡಿವಂತರೇ ಕೆರೆ ಕಟ್ಟೆಗಳಲ್ಲಿ ಮೌಢ್ಯಗ ಳಿಗೆ ಬಲಿಯಾಗಿ ಅಸ್ವಚ್ಚತೆಗೆ ಕಾರಣರಾಗುತ್ತಿದ್ದಾರೆ.ತಾವು ತಂದಂತ ಬಟ್ಟೆ ಇನ್ನಿತರ ವಸ್ತುಗಳನ್ನು ಕೆರೆಯಲ್ಲಿ ಹಾಕುವ ಮೂಲಕ ಮಲಿನ ಮಾಡುತ್ತಿದ್ದಾರೆ.

ತಮ್ಮ ಮನೆಯಲ್ಲಿರುವ ಮಕ್ಕಳ ಹಳೆ ಬಟ್ಟೆ ಆಟಿಕೆ ಸಮಾನು ಪ್ಲಾಸ್ಟಿಕ್ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಪುರಸಭೆ ವತಿಯಿಂದ ಈಗಾಗಲೇ ಗುರುತು ಮಾಡಿರುವಂತಹ ಮಳಿಗೆಗಳಲ್ಲಿ ತಂದು ನೀಡುವ ಮೂಲಕ ಸಾರ್ವಜನಿಕರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ ಅವರು ಪಟ್ಟಣದ ವಾಣಿಜ್ಯ ಸಂಕೀರ್ಣದಲ್ಲಿ ಸಂಜೆ ಸಮಯದಲ್ಲಿ ಕಸವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವುದು ಕಂಡು ಬಂದಿದ್ದು ಅದು ಮತ್ತೊಮ್ಮೆ ಪುನಾರ್ವತಿತಗೊಂಡರೆ ಅಂತವರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

See also  ಧರ್ಮಸ್ಥಳ: ಶ್ರೀಕ್ಷೇತ್ರ ಸನ್ನಿಧಿಯಲ್ಲಿ ‘ನಾಗಸ್ವರವಾದನ’ದ ಸೇವೆ

ನಂತರ ಸದಸ್ಯ ಶಾಂತಕುಮಾರ್ ಮಾತಮಾಡಿ ಸ್ವಚ್ಛ  ಭಾರತ ಅಭಿಯಾನದಡಿ ಈಗಾಗಲೇ ಸರ್ಕಾರದ ಯೋಜನೆಯ ಆರ್ ಆರ್ ಆರ್ ಅನ್ನು ಚಾಲನೆ ನೀಡಿದ್ದು ಪುರಸಭೆ ವತಿಯಿಂದ ಹಸಿಕಸ ಒಣಕಸವನ್ನು ಬೇರ್ಪಡಿಸುವ ಕೆಲಸ ಮಾಡಲಾಗುತ್ತಿದ್ದು ಪ್ರತಿನಿತ್ಯ ಟಿಪ್ಪರ್ ಮೂಲಕ ಕಸ ಪಡೆಯುತ್ತಿದ್ದರೂ ಸಹ ಕೆಲವರು ಬೀದಿ ಬದಿಯಲ್ಲಿ ಕಸ ಹಾಕುತ್ತಿದ್ದು ಕೇವಲ ಪುರಸಭೆ ಕೆಲಸ ಎಂಬುವುದನ್ನು ಮಾತ್ರ ಜನತೆಗೆ ತಿಳಿದಿದೆ ಆದರೆ ಎಲ್ಲರ ಸಹಕಾರ ಇದ್ದಾಗ ಮಾತ್ರ ಪಟ್ಟಣದ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.  ಇದೇ ವೇಳೆ ಪ್ರತಿಜ್ಞೆ ವಿಧಿಯನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಮೀಲಾ ತೌಫಿಕ್,ಸದಸ್ಯರಾದ ಅಶೋಕ್,ಸೌಮ್ಯ, ಉಷಾ,ಬಿ ಗಿರೀಶ್, ಜಗದೀಶ್ ,ಶೈಲೇಶ್, ಪ್ರಭಾಕರ್, ಮೀನಾಕ್ಷಿ, ಅಕ್ರಮ್, ಪೈಂಟ್ ರವಿ, ಮುಖ್ಯಾಧಿಕಾರಿ ಮಂಜುನಾಥ್, ವ್ಯವಸ್ಥಾಪಕ ಪ್ರಶಾಂತ್,ಲೋಹಿತ್, ಪ್ರಸನ್ನ,ಪೃಥ್ವಿ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು