ಹಾಸನ: ಇಲ್ಲಿನ ಆಡುವಳ್ಳಿ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಅಲ್ಪಾವಧಿಗೆ ಅರೆಕಾಲಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಹುದ್ದೆ-೧) ದ್ಯೆಹಿಕ, ಯೋಗ ಶಿಕ್ಷಕಿ-ಸಂಖ್ಯೆ-೧ ಡಿಪ್ಲೋಮೋ ಇನ್ ಫಿಸಿಕಲ್ ಎಜುಕೇಷನ್ ಅಥವಾ ಬ್ಯಾಚುಲರ್ ಆಫ್ ಫಿಜಿಕಲ್ ಎಜುಕೇಷನ್ ಆಗಿರಬೇಕು. ಕನಿಷ್ಠ ೨ ವರ್ಷ ಅನುಭವ ಇರಬೇಕು. ಈ ಮೇಲಿನ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದ್ದು ಹುದ್ದೆಯು ತಾತ್ಕಾಲಿಕವಾಗಿದ್ದು ಅರ್ಜಿದಾರರು ಅರ್ಜಿಸಲ್ಲಿಸಲು ಕಡೆಯ ದಿನಾಂಕ: ೧೨-೦೬-೨೦೨೩ ಆಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; ೦೮೧೭೨-೨೬೮೭೫೨. ಸಂಪರ್ಕಿಸಬಹುದು ಎಂದು ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.